ವಿಚ್ಛೇದನ ಪಡೆದ ಸಾರಾ ಅಬ್ದುಲ್ಲಾ-ಸಚಿನ್ ಪೈಲಟ್ : ಚುನಾವಣಾ ಅಫಿಡವಿಟ್ ನಲ್ಲಿ ಬಹಿರಂಗ

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಅವರ ಪತ್ನಿ ಸಾರಾ ಅಬ್ದುಲ್ಲಾ ಅವರು ಸುಮಾರು ಎರಡು ದಶಕಗಳ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ ಎಂದು ಅವರ ಚುನಾವಣಾ ಅಫಿಡವಿಟ್ ಬಹಿರಂಗಪಡಿಸಿದೆ.
46 ವರ್ಷದ ಸಚಿನ್‌ ಪೈಲಟ್ ಮಂಗಳವಾರ ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಫಿಡವಿಟ್‌ ನಲ್ಲಿ ಸಂಗಾತಿಯ ವಿವರಗಳನ್ನು ಕೋರಿದ್ದ ಅಂಕಣದಲ್ಲಿ ಕಾಂಗ್ರೆಸ್ ನಾಯಕ “ವಿಚ್ಛೇದನ” ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಪೈಲಟ್ 2004 ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾ ಅವರನ್ನು ವಿವಾಹವಾದರು.

ವರದಿಗಳ ಪ್ರಕಾರ, ಇಬ್ಬರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವಾಗ ಭೇಟಿಯಾದರು. ದಂಪತಿಗೆ ಆರನ್ ಮತ್ತು ವೆಹಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪೈಲಟ್ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಇಬ್ಬರೂ ಪುತ್ರರು ತಮ್ಮ ಅವಲಂಬಿತರು ಎಂದು ಉಲ್ಲೇಖಿಸಿದ್ದಾರೆ
ಮಂಗಳವಾರ ನಾಮಪತ್ರ ಸಲ್ಲಿಸುವ ಮುನ್ನ ಪೈಲಟ್ ಭೂತೇಶ್ವರ ಮಹಾದೇವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅವರು ತಮ್ಮ ಬೆಂಬಲಿಗರೊಂದಿಗೆ ಬಡಾ ಕುವಾನ್‌ನಿಂದ ಟೋಂಕ್ ನಗರದ ಪಟೇಲ್ ಚೌಕ್‌ವರೆಗೆ ಮೆರವಣಿಗೆ ನಡೆಸಿದರು.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ಕೊಲೆ ಯತ್ನ: ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ, ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement