ಕ್ರಿಕೆಟ್‌ ವಿಶ್ವಕಪ್‌ 2023 : ಶ್ರೀಲಂಕಾ ಧೂಳೀಪಟ, ಸತತ 7ನೇ ಜಯದ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಭಾರತ

ಮುಂಬೈ: ವಿಶ್ವಕಪ್‌ನಲ್ಲಿ ಭಾರತದ ತಂಡವು ಸತತ ಏಳನೇ ಜಯವನ್ನು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಆರಮಂಭದಲ್ಲಿ ಬ್ಯಾಟ್‌ ಮಾಡಿದ ಎಂಟು ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ ನಂತರ ರೋಹಿತ್ ಶರ್ಮಾ ಪಡೆ ಶ್ರೀಲಂಕಾವನ್ನು 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿ 302 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ಶ್ರೀಲಂಕಾ ವಿರುದ್ಧ ಮತ್ತೊಮ್ಮೆ ಟೀಮ್ ಇಂಡಿಯಾದ ಬೌಲರ್‌ಗಳು ಅಬ್ಬರಿಸಿದ್ದಾರೆ. ಕಳೆದ ಏಷ್ಯಾಕಪ್ ಟೂರ್ನಿಯಲ್ಲಿ ದಯನೀಯವಾಗಿ ಸೋತು ಶರಣಾಗಿದ್ದ ಶ್ರೀಲಂಕಾ ವಿಶ್ವಕಪ್ ವೇದಿಕೆಯಲ್ಲಿಯೂ ಅಂಥದ್ದೇ ನೀರಸ ಪ್ರದರ್ಶನ ನೀಡಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ತುತ್ತಾದ ಶ್ರೀಲಂಕಾದ ಆಟಗಾರರ ಅಕ್ಷರಶಃ ಪೆವಿಲಿಯನ್‌ಗೆ ಪರೇಡ್‌ ನಡೆಸಿದರು.
ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕ್ರಮವಾಗಿ ಆರಂಭಿಕ ಬ್ಯಾಟರುಗಳಾದ ಪಾತುಮ್ ನಿಸ್ಸಾಂಕಾ ಮತ್ತು ದಿಮುತ್ ಕರುಣಾರತ್ನೆ ಅವರನ್ನು ಖಾತೆ ತೆರೆಯುವ ಮೊದಲೇ ಔಟ್ ಮಾಡಿದರು. ನಂತರ ಸದೀರ ಸಮರವಿಕ್ರಮ ಅವರನ್ನು ಸಿರಾಜ್ ಔಟ್‌ ಮಾಡಿದರು.

ತಂಡದ ಮೊತ್ತ ಮೂರು ರನ್‌ಗಳಾಗಿದ್ದಾಗ ನಾಲ್ಕು ಬ್ಯಾಟರ್‌ಗಳು ಔಟಾಗಿದ್ದರು. ಮೊಹಮ್ಮದ್ ಶಮಿ ದಾಳಿಗೆ ಶ್ರೀಲಂಕಾದ ಬಳಿ ಉತ್ತರವೇ ಇರಲಿಲ್ಲ. ಆದರೆ ಅವರು ಹ್ಯಾಟ್ರಿಕ್ ಸಾಧನೆ ಮಾಡುವುದರಿಂದ ವಂಚಿತರಾದರು. ಒಂದು ಹಂತದಲ್ಲಿ ಶ್ರೀಲಂಕಾ 10 ಓವರ್‌ಗಳಲ್ಲಿ ಆರು ವಿಕೆಟ್‌ಗೆ 14 ರನ್ ಗಳಿಸಿತ್ತು. ಅಂತಿಮವಾಗಿ ಶ್ರೀಲಂಕಾ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಮೊಹಮ್ಮದ್‌ ಶಮಿ ಕೇವಲ18 ರನ್‌ ನೀಡಿ ಐದು ವಿಕೆಟ್‌ ಪಡೆದು ಪಂದ್ಯ ಶ್ರೇಷ಼್ಠ ಪ್ರಶಸ್ತಿ ಪಡೆದರು.
ಮೊದಲು ಬ್ಯಾಟ್‌ ಮಾಡಿದ ಭಾರತದ ತಂಡ ಎಂಟು ವಿಕೆಟ್ ನಷ್ಟಕ್ಕೆ 357 ರನ್‌ಗಳಿಸಿ ಶ್ರೀಲಂಕಾಕಕ್ಕೆ ಕಠಿಣ ಸವಾಲನ್ನು ನೀಡಿತು.
ಆರಂಭದಲ್ಲಿ ಕೇವಲ ನಾಲ್ಕು ರನ್‌ ಗಳಿಸಿದ್ದ ನಾಯಕ ರೋಹಿತ್‌ ಶರ್ಮಾ ಅವರನ್ನು ಭಾರತ ಕಳೆದುಕೊಂಡಿತು. ಆದರೆ ಮೊದಲನೇ ವಿಕೆಟ್‌ಗೆ ಗಿಲ್ 92 ರನ್‌ (11×4, 2×6), ವಿರಾಟ ಕೊಹ್ಲಿ (88, 94 ಬೌಂ, 11×4) ಉತ್ತಮವಾಗಿ ಆಡಿದರು.
ನಂತರ ಶ್ರೇಯಸ್‌ 82 (56b, 3×4, 6×6) ಅವರಿಂದ ಉತ್ತಮ ಆಟವು ಬಂತು. ಅಂತಿಮವಾಗಿ ಭಾರತವು ಎಂಟು ವಿಕೆಟ್‌ ನಷ್ಟಕ್ಕೆ 357 ರನ್‌ಗಳಿಸಿತು. ಆದರೆ ಇದಕ್ಕೆ ಉತ್ತರವಾಗಿ ಶ್ರೀಲಂಕಾ ಕೇವಲ 55 ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಮುಖ ಸುದ್ದಿ :-   ಟಿವಿ, ಸಿನಿಮಾದಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಸಂದೇಶ ಪ್ರಶ್ನಿಸಿ ಅರ್ಜಿ : ವಿಷಾದ ಸೂಚಿಸಿ ಅಫಿಡವಿಟ್ ಸಲ್ಲಿಸಲು ವಕೀಲನಿಗೆ ದೆಹಲಿ ಹೈಕೋರ್ಟ್ ಸೂಚನೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement