ರಾಜಸ್ಥಾನ ವಿಧಾನಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್‌ ಮಧ್ಯದ ತುರುಸಿನ ಸ್ಪರ್ಧೆಯಲ್ಲಿ ಗೆಲುವಿನತ್ತ ಯಾರು…? ಇಂಡಿಯಾ ಟಿವಿ-ಸಿಎನ್‌ಎಕ್ಸ್ 2ನೇ ಸಮೀಕ್ಷೆಯಲ್ಲಿ ಬಹಿರಂಗ

ಈ ತಿಂಗಳು ನಡೆಯುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತವನ್ನು ಪಡೆಯಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎರಡನೇ  ಸಮೀಕ್ಷೆ ಹೇಳಿದೆ.
ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳ ಸದನದಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಪ್ರಕ್ಷೇಪಗಳು ತೋರಿಸಿವೆ, ಕಳೆದ ಚುನಾವಣೆಯಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ 100 ಸ್ಥಾನಗಳಿಗೆ ಹೋಲಿಸಿದರೆ ಆಡಳಿತರೂಢ ಕಾಂಗ್ರೆಸ್ 80 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಪ್ರಕ್ಷೇಪಗಳು ತೋರಿಸಿವೆ.
2018 ರಲ್ಲಿ ಗೆದ್ದಿದ್ದ 27 ಸ್ಥಾನಗಳಿಗೆ ಹೋಲಿಸಿದರೆ ಸ್ವತಂತ್ರರು ಮತ್ತು ಪ್ರಾದೇಶಿಕ ಪಕ್ಷಗಳು ಸೇರಿದಂತೆ ‘ಇತರರು’ ಕೇವಲ ಐದು ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಮತ ಹಂಚಿಕೆಯ ಪ್ರಕ್ಷೇಪಗಳು
ಚುನಾವಣೆಯಲ್ಲಿ ಮತ ಹಂಚಿಕೆಯ ಪ್ರಕ್ಷೇಪಗಳು ಬಿಜೆಪಿ 45%, ಕಾಂಗ್ರೆಸ್ 42% ಮತ್ತು ‘ಇತರರು’ 13% ರಷ್ಟು ಪಡೆಯಬಹುದು ಎಂದು ತೋರಿಸಿವೆ. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.38.77, ಕಾಂಗ್ರೆಸ್ ಶೇ.39.3 ಮತ್ತು ‘ಇತರರು’ ಶೇ.21.93 ಮತಗಳನ್ನು ಪಡೆದಿದ್ದರು.

ಪ್ರದೇಶವಾರು ಸ್ಥಾನ ಪಡೆಯುವ ಪ್ರಕ್ಷೇಪಗಳು….
ಜೈಪುರ-ಧೋಲ್ಪುರ್ ಪ್ರದೇಶ 48 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ 26, ಕಾಂಗ್ರೆಸ್ 20 ಮತ್ತು ಇತರರು 2 ಸ್ಥಾನಗಳನ್ನು ಗೆಲ್ಲಬಹುದು.
24 ಸ್ಥಾನಗಳನ್ನು ಹೊಂದಿರುವ ಟೋಂಕ್-ಕೋಟಾ ಪ್ರದೇಶದಲ್ಲಿ ಬಿಜೆಪಿ 13 ಸ್ಥಾನಗಳನ್ನು ಗೆಲ್ಲಬಹುದು, ಉಳಿದ 11 ಸ್ಥಾನಗಳನ್ನು ಕಾಂಗ್ರೆಸ್‌ಗೆ ಹೋಗಬಹುದು. 56 ಸ್ಥಾನಗಳನ್ನು ಹೊಂದಿರುವ ಮಾರ್ವಾಡ ಪ್ರದೇಶದಲ್ಲಿ ಬಿಜೆಪಿ 34, ಕಾಂಗ್ರೆಸ್ 20 ಮತ್ತು ಇತರರು 2 ಸ್ಥಾನಗಳನ್ನು ಗೆಲ್ಲಬಹುದು.
48 ಸ್ಥಾನಗಳನ್ನು ಹೊಂದಿರುವ ಮೇವಾರ್ ಪ್ರದೇಶದಲ್ಲಿ ಬಿಜೆಪಿ 31 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಒಂದು ಸ್ಥಾನ ಇತರರಿಗೆ ಹೋಗಬಹುದು. 24 ಸ್ಥಾನಗಳನ್ನು ಹೊಂದಿರುವ ಶೇಖಾವತಿ ಪ್ರದೇಶದಲ್ಲಿ ಬಿಜೆಪಿ 11 ಮತ್ತು ಕಾಂಗ್ರೆಸ್ 13 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಪ್ರಕ್ಷೇಪಗಳು ತೋರಿಸಿವೆ.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

ಮುಖ್ಯಮಂತ್ರಿ ಸ್ಥಾನಕ್ಕೆ ಯಾರತ್ತ ಒಲವು…?
ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮುಂಚೂಣಿಯಲ್ಲಿದ್ದು, 34% ರಷ್ಟು ಪ್ರತಿಕ್ರಿಯಿಸಿದವರು ಅವರತ್ತ ಒಲವು ತೋರಿದ್ದಾರೆ. ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಅವರ ಸಮೀಪದಲ್ಲಿಯೇ ಇದ್ದಾರೆ. 29 %ರಷ್ಟು ಜನರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಅವರತ್ತ ಒಲವನ್ನು ತೋರಿಸಿದ್ದಾರೆ. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ 10 % ದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಶೇ 8% ಜನರ ಒಲವು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ನಾಯಕ ರಾಜ್ಯವರ್ಧನ್ ಸಿಂಗ್ ರಾಥೋಡ್ ಶೇಕಡಾ 7 ರೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕಿ ದಿಯಾ ಕುಮಾರಿ ಕೇವಲ ಶೇಕಡಾ 5 ರೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಪ್ರಮುಖ ಅಂಶಗಳು…
52 ರಷ್ಟು ಮತದಾರರು ವಸುಂಧರಾ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸದಿರುವ ಬಿಜೆಪಿಯ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ. ಆದರೆ ಶೇಕಡಾ 45 ರಷ್ಟು ಜನರು ಈ ನಿರ್ಧಾರವನ್ನು ಒಪ್ಪಲಿಲ್ಲ.
ಶೇ.61ರಷ್ಟು ಮತದಾರರು ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರೆ, ಶೇ.34ರಷ್ಟು ಮಂದಿ ‘ಉತ್ತಮವಾಗಿದೆ’ ಎಂದಿದ್ದಾರೆ.
49 ರಷ್ಟು ಮತದಾರರು, ಜಾತಿ ಗಣತಿ ನಡೆಸುವ ಕಾಂಗ್ರೆಸ್ ಭರವಸೆ ಚುನಾವಣಾ ಗಿಮಿಕ್ ಎಂದು ಹೇಳಿದರೆ, 41 ರಷ್ಟು ಜನರು ಇದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement