ವೀಡಿಯೊ…: : ಚುನಾವಣಾ ಪ್ರಚಾರದ ವಾಹನದಿಂದ ಕೆಳಗೆ ಬೀಳುತ್ತಿದ್ದ ತೆಲಂಗಾಣ ಸಚಿವ ಕೆಟಿಆರ್ ; ರಕ್ಷಿಸಿದ ಗನ್‌ಮ್ಯಾನ್‌

ಹೈದರಾಬಾದ್ : ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಅವರು ಗುರುವಾರ ಆರ್ಮೂರ್‌ನಲ್ಲಿ ರೋಡ್‌ಶೋ ವೇಳೆ ತಮ್ಮ ಪ್ರಚಾರ ವಾಹನದಿಂದ ಮುಕ್ಕುರಿಸಿ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಪ್ರಚಾರ ವಾಹನದ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದರಿಂದ ವಾಹನದ ಮೇಲೆ ಹಾಕಿದ್ದ ರೇಲಿಂಗ್ ಕೆಳಕ್ಕೆ ಜಾರಿ ನಿಂತಿದ್ದ ಸಚಿವರು ಮತ್ತು ಇತರರನ್ನು ಕೆಳಕ್ಕೆ ತಳ್ಳಿದಾಗ ಅಪಘಾತ ಸಂಭವಿಸಿದೆ. ಆರ್ಮೂರ್ ಅಭ್ಯರ್ಥಿ ಜೀವನ್ ರೆಡ್ಡಿ ವಾಹನದಿಂದ ಕೆಳಗೆ ಬಿದ್ದಿದ್ದಾರೆ, ಅವರ ಹಿಂದೆ ನಿಂತಿದ್ದ ರಾಮರಾವ್ ಅವರು ಮುಕ್ಕರಿಸಿದ್ದಾರೆ, ಆದರೆ ಕೆಳಗೆ ಬೀಳುತ್ತಿದ್ದ ಅವರನ್ನು ಅವರ ಗನ್‌ಮ್ಯಾನ್ ಹಿಡಿದುಕೊಂಡು ವಾಹನದಿಂದ ಬೀಳದಂತೆ ತಡೆಯುವಲ್ಲಿ ಯಶಸ್ವಿಯಾದರು. ಜೀವನ್ ರೆಡ್ಡಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ನಿಜಾಮಾಬಾದ್‌ನ ಅರ್ಮೂರ್ ಪಟ್ಟಣದಲ್ಲಿ ತೆಲಂಗಾಣ ನಾಯಕರು ನಿಂತಿದ್ದ ಗುಲಾಬಿ ಬಣ್ಣದ ಬಸ್ ಕಿರಿದಾದ ಮಾರ್ಗದಲ್ಲಿ ಸಾಗುತ್ತಿತ್ತು. ಚಾಲಕ ಬ್ರೇಕ್ ಹಾಕುತ್ತಿದ್ದಂತೆ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಬಹುತೇಕ ಕೆಳಗೆ ಬಿದ್ದಿದ್ದಾರೆ. ಅವರ ಪಕ್ಕದಲ್ಲಿ ಜೀವನ್ ರೆಡ್ಡಿ ಮತ್ತು ಸುರೇಶ್ ರೆಡ್ಡಿ ಇರುವುದನ್ನು ವೀಡಿಯೋ ತೋರಿಸಿದೆ. ವಾಹನವು ಕಿರಿದಾದ ಗಲ್ಲಿಯಲ್ಲಿ ಸಾಗುತ್ತಿದ್ದಾಗ ರೇಲಿಂಗ್‌ ಹಿಡಿದುಕೊಂಡು ಬಸ್‌ನ ಮೇಲೆ ನಿರ್ಮಿಸಲಾದ ಸಣ್ಣ ವೇದಿಕೆಯ ಮೇಲೆ ಸಚಿವರು ಮತ್ತು ಇತರ ನಾಯಕರು ನಿಂತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

ಈ ವೇಳೆ ಚಾಲಕ ಬ್ರೇಕ್ ಹಾಕಿದ್ದು, ಆಗ ಮುಖಂಡರು ಬ್ಯಾಲೆನ್ಸ್‌ ತಪ್ಪಿ ಉರುಳಿ ಬಿದ್ದಿದ್ದು ವೀಡಿಯೊಯೋದಲ್ಲಿ ಕಂಡು ಬಂದಿದೆ. ಮ್ಯಾನ್‌ನಿಂದ ಕೆಟಿಆರ್ ಗನ್‌ ಮ್ಯಾನ್‌ ಅವರನ್ನು ರಕ್ಷಿಸಿದ್ದಾನೆ. ಆದರೆ ಅವರ ಸಹ ನಾಯಕರಿಗೆ ಅದೃಷ್ಟವಿರಲಿಲ್ಲ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತೆಲಂಗಾಣ ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement