ಹಮಾಸ್ ಕಮಾಂಡರ್ ಅಹ್ಮದ್ ಸಿಯಾಮ್ ಹತ್ಯೆ: 1000 ಜನರು-ರೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಎಂದು ಇಸ್ರೇಲ್‌ ಆರೋಪಿಸಿದ ಈತ ಯಾರು..?

ಗಾಜಾ ಆಸ್ಪತ್ರೆಯಲ್ಲಿ ಸುಮಾರು 1,000 ಜನರು ಮತ್ತು ರೋಗಿಗಳನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಳ್ಳಲು ಕಾರಣವಾದ ಹಿರಿಯ ಹಮಾಸ್ ಕಮಾಂಡರ್ ಅನ್ನು ವೈಮಾನಿಕ ದಾಳಿಯಲ್ಲಿ ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿಕೊಂಡಿದೆ.
X ನಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾ ನಿವಾಸಿಗಳು ದಕ್ಷಿಣಕ್ಕೆ ಸ್ಥಳಾಂತರವಾಗುವುದನ್ನು ತಡೆಯಲು ಅಹ್ಮದ್ ಸಿಯಾಮ್ ಕೂಡ ಜವಾಬ್ದಾರರು ಎಂದು ಹೇಳಿದೆ.
”ಐಡಿಎಫ್ ವಿಮಾನವು ಅಹ್ಮದ್ ಸಿಯಾಮ್ ಅವರನ್ನು ಹೊಡೆದುರುಳಿಸಿದೆ. ಈತ ಗಾಜಾದ ರಾಂಟಿಸಿ ಆಸ್ಪತ್ರೆಯಲ್ಲಿ ಸುಮಾರು 1,000 ಗಾಜಾ ನಿವಾಸಿಗಳು ಮತ್ತು ರೋಗಿಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಮತ್ತು ದಕ್ಷಿಣಕ್ಕೆ ಅವರ ಸ್ಥಳಾಂತರಿಸುವಿಕೆಯನ್ನು ತಡೆಯಲು ಕಾರಣನಾಗಿದ್ದಾನೆ. ಸಿಯಾಮ್ ಹಮಾಸ್‌ನ ನೇಸರ್ ರಾಡ್ವಾನ್ ಕಂಪನಿಯಲ್ಲಿ ಕಮಾಂಡರ್ ಆಗಿದ್ದ ಮತ್ತು ಹಮಾಸ್ ಗುಂಪು ಗಾಜಾದಲ್ಲಿ ನಾಗರಿಕರನ್ನು ಭಯೋತ್ಪಾದಕ ಉದ್ದೇಶಗಳಿಗಾಗಿ ಮಾನವ ಗುರಾಣಿಯಾಗಿ ಬಳಸುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಟ್ವೀಟ್ ಹೇಳಿದೆ.

ಅಹ್ಮದ್ ಸಿಯಾನ್ ಯಾರು?
ಐಡಿಎಫ್ ಪ್ರಕಾರ ಅಹ್ಮದ್ ಸಿಯಾಮ್ ಹಮಾಸ್ ನ ನಾಸರ್ ರಾಡ್ವಾನ್ ಕಂಪನಿಯ ಕಮಾಂಡರ್ ಆಗಿದ್ದ.
ಆತನ ನೇತೃತ್ವದಲ್ಲಿ ಇತರ ಹಮಾಸ್ ಕಾರ್ಯಕರ್ತರೊಂದಿಗೆ ಗಾಜಾ ನಗರದ ಅಲ್-ಬುರಾಕ್ ಶಾಲೆಯಲ್ಲಿ ಅಡಗಿಕೊಂಡಿದ್ದಾಗ ಯುದ್ಧ ವಿಮಾನದ ಮೂಲಕ ಆತನನ್ನು ಹೊಡೆದುರುಳಿಸಲಾಯಿತು ಎಂದು ಇಸ್ರೇಲಿ ಸೇನೆ ಹೇಳಿದೆ.
ಆತನ ಇರುವಿಕೆಯ ಬಗ್ಗೆ ಶಿನ್ ಬೆಟ್ ಮತ್ತು ಮಿಲಿಟರಿ ಗುಪ್ತಚರ ನಿರ್ದೇಶನಾಲಯದಿಂದ ಗುಪ್ತಚರ ಮಾಹಿತಿ ಸಂಗ್ರಹಿಸಲಾಯಿತು ಎಂದು ಐಡಿಎಫ್ ತಿಳಿಸಿದೆ. ಹಮಾಸ್ ಭಯೋತ್ಪಾದಕ ಅಡಗಿರುವ ಸ್ಥಳದ ಮೇಲೆ ದಾಳಿ ಮಾಡಲು ಗಿವಾಟಿ ಬ್ರಿಗೇಡ್ ಪಡೆಗಳು ಯುದ್ಧವಿಮಾನಕ್ಕೆ ಮಾರ್ಗದರ್ಶನ ನೀಡಿತು.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಗಾಜಾ ನಗರದ ಅಲ್-ರಾಂಟಿಸಿ ಆಸ್ಪತ್ರೆಯೊಳಗೆ ಸುಮಾರು 1,000 ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಎಂದು IDF ಆರೋಪಿಸಿದ ನಂತರ ಸಿಯಾಮ್‌ ಮೇಲೆ ದಾಳಿ ಬಂದಿತು, ಇದು ಗಾಜಾದ ಏಕೈಕ ಮಕ್ಕಳ ಕ್ಯಾನ್ಸರ್ ವಾರ್ಡ್‌ಗೆ ನೆಲೆಯಾಗಿದೆ.
ಹಮಾಸ್ ಗಾಜಾ ಪಟ್ಟಿಯ ನಾಗರಿಕರನ್ನು ಭಯೋತ್ಪಾದಕ ಉದ್ದೇಶಗಳಿಗಾಗಿ ಮಾನವ ಗುರಾಣಿಯಾಗಿ ಬಳಸುತ್ತದೆ ಎಂಬುದನ್ನು ಸಿಯಾಮ್‌ನ ಕ್ರಮಗಳು ಸಾಬೀತುಪಡಿಸಿವೆ ಎಂದು ಇಸ್ರೇಲ್ ಹೇಳಿದೆ.

ಹಮಾಸ್ ಗುಂಪು ಆಸ್ಪತ್ರೆಗಳನ್ನು ಕಾರ್ಯಾಚರಣೆಯ ನೆಲೆಗಳಾಗಿ ಬಳಸುತ್ತದೆ ಮತ್ತು ಅವುಗಳ ಕೆಳಗಿರುವ ಸುರಂಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟುಕೊಂಡಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ, ಹಮಾಸ್ ಈ ಆರೋಪಗಳನ್ನು ನಿರಾಕರಿಸಿದೆ.

ಅಕ್ಟೋಬರ್ 7 ರಂದು ಇಸ್ರೇಲಿ ಗಡಿ ಪಟ್ಟಣಗಳ ಮೇಲೆ ದಾಳಿ ಮಾಡಿ 1200 ಜನರನ್ನು ಕೊಂದ ನಂತರ ಇಸ್ರೇಲಿ ಪಡೆಗಳು ಪ್ರತಿದಾಳಿ ನಡೆಸಿ ಹಲವಾರು ಇತರ ಹಮಾಸ್ ಕಾರ್ಯಕರ್ತರನ್ನು ಕೊಂದಿವೆ, ಅಲಿ ಖಾದಿ, ಮುಯೆತಾಜ್ ಈದ್, ಜಕರಿಯಾ ಅಬು ಮಾಮರ್, ಜೋದ್ ಅಬು ಶ್ಮಲಾಹ್, ಬೆಲಾಲ್ ಅಲ್ಕದ್ರಾ ಮತ್ತು ಮೆರಾದ್ ಅಬು ಮೆರಾದ್ ಸೇರಿದಂತೆ ಹಮಾಸ್ ಕಾರ್ಯಕರ್ತರು ಇಸ್ರೇಲ್‌ನಿಂದ ಹತರಾಗಿದ್ದಾರೆ.
ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂದಾಜು 11,000 ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement