ಭಾರತದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಅಂತಾಷ್ಟ್ರೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ವಿಶ್ವಕಪ್ 2023 ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಬೌಲಿಂಗ್ ದಾಳಿಯ ವಿರುದ್ಧ ಮಾಜಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನದ ಪಂದ್ಯದಲ್ಲಿ ತಮ್ಮ 50 ನೇ ಶತಕವನ್ನು ಹೊಡೆದರು. ಕೊಹ್ಲಿ ಅದ್ಭುತ ಫಾರ್ಮ್ನಲ್ಲಿ ಕಾಣಿಸಿಕೊಂಡರು ಮತ್ತು ಅವರು 106 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಈ ಮೈಲಿಗಲ್ಲನ್ನು ತಲುಪಿದರು. ಪಂದ್ಯದ ಮೊದಲು, ಕೊಹ್ಲಿ ಸಚಿನ್ ಅವರೊಂದಿಗೆ 49 ಶತಕಗಳೊಂದಿಗೆ ಏಕದಿನದ ಪಂದ್ಯದಲ್ಲಿ ಅತಿಹೆಚ್ಚು ಶತಕಗಳನ್ನು ಹಂಚಿಕೊಂಡಿದ್ದರು.
ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚಿನ 50-ಪ್ಲಸ್ ಸ್ಕೋರ್ಗಳು
8 ಸಲ 50-ಪ್ಲಸ್ ಸ್ಕೋರ್- ವಿರಾಟ್ ಕೊಹ್ಲಿ (2023)
7 ಸಲ 50-ಪ್ಲಸ್ ಸ್ಕೋರ್- ಸಚಿನ್ ತೆಂಡೂಲ್ಕರ್ (2003)
7 ಸಲ 50-ಪ್ಲಸ್ ಸ್ಕೋರ್- ಶಾಕಿಬ್ ಅಲ್ ಹಸನ್ (2019)
6 ಸಲ 50-ಪ್ಲಸ್ ಸ್ಕೋರ್- ರೋಹಿತ್ ಶರ್ಮಾ (2019)
6 ಸಲ 50-ಪ್ಲಸ್ ಸ್ಕೋರ್- ಡೇವಿಡ್ ವಾರ್ನರ್ (2019)
ಇಷ್ಟೇ ಅಲ್ಲ ಈ ಹಿಂದೆ ತೆಂಡೂಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ವಿಶ್ವಕಪ್ ದಾಖಲೆಯನ್ನೂ ಕೊಹ್ಲಿ ಮುರಿದಿದ್ದಾರೆ. ಅವರು ಕ್ರಿಕೆಟ್ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆದರು.
ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್:
674* – ವಿರಾಟ್ ಕೊಹ್ಲಿ (2023)
673 – ಸಚಿನ್ ತೆಂಡೂಲ್ಕರ್ (2003)
659 – ಮ್ಯಾಥ್ಯೂ ಹೇಡನ್ (2007)
648 – ರೋಹಿತ್ ಶರ್ಮಾ (2019)
647 – ಡೇವಿಡ್ ವಾರ್ನರ್ (2019)
ಈ ವಿಶ್ವಕಪ್ನಲ್ಲಿ ವಾಂಖೆಡೆಯಲ್ಲಿ ನಡೆದ ಹಿಂದಿನ ನಾಲ್ಕು ಪಂದ್ಯಾವಳಿಯ ಪಂದ್ಯಗಳಲ್ಲಿ ಮೂರನ್ನು ತಂಡವು ಮೊದಲು ಬ್ಯಾಟಿಂಗ್ನಲ್ಲಿ ಗೆದ್ದಿದೆ, ಅಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾದ ಅದ್ಭುತ ಗೆಲುವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಜಯಗಳಿಸಿದೆ. ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 201 ರನ್ಗಲಿಂದಾಗಿ ಆಸ್ಟ್ರೇಲಿಯಾ ಮೂರು ವಿಕೆಟ್ಗಳ ಜಯ ಸಾಧಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ