ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್‌ ಪಂದ್ಯಕ್ಕೆ ನನಗೆ ಆಹ್ವಾನಿಸಿಲ್ಲ ಎಂದ ಕಪಿಲ್ ದೇವ್

ಆತಿಥೇಯರು ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್‌ಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಭಾನುವಾರ ಹೇಳಿದ್ದಾರೆ. 1983 ರಲ್ಲಿ ಭಾರತ ತನ್ನ ಚೊಚ್ಚಲ ಏಕದಿನದ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ತಂಡದ ನಾಯಕರಾಗಿದ್ದ ಕಪಿಲ್ ದೇವ್‌ ಅವರು ತಾವು ಆಗಿನ ತಂಡದ ಇತರ ಆಟಗಾರರ ಜೊತೆಗೆ ಈ ಪಂದ್ಯಕ್ಕೆ ಪ್ರಯಾಣಿಸಲು ಬಯಸಿದ್ದಾಗಿ ಹೇಳಿದ್ದಾರೆ.
“ನನ್ನನ್ನು ಅಲ್ಲಿಗೆ ಆಹ್ವಾನಿಸಲಾಗಿಲ್ಲ. ಅವರು ನನ್ನನ್ನು ಕರೆಯಲಿಲ್ಲ ಹಾಗಾಗಿ ನಾನು ಹೋಗಲಿಲ್ಲ. ಅಷ್ಟು ಸರಳ. ಇಡೀ 1983ರ ತಂಡವು ನನ್ನೊಂದಿಗೆ ಇರಬೇಕೆಂದು ನಾನು ಬಯಸಿದ್ದೆ ಆದರೆ ಇದು ತುಂಬಾ ದೊಡ್ಡ ಕಾರ್ಯಕ್ರಮವಾಗಿದೆ ಮತ್ತು ಜನರು ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನಿರತರಾಗಿದ್ದಾರೆ, ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಪಿಲ್ ದೇವ್‌ ಎಬಿಪಿ ನ್ಯೂಸ್‌ಗೆ ತಿಳಿಸಿದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದ ಇತರ ಮಾಜಿ ಭಾರತ ನಾಯಕರಲ್ಲಿ ಸೌರವ್ ಗಂಗೂಲಿ ಅವರು ಮಾಜಿ ಬಿಸಿಸಿಐ ಅಧ್ಯಕ್ಷರ ಸ್ಥಾನದಲ್ಲಿ ಆಹ್ವಾನಿತರಾಗಿದ್ದರು. ಹಿಂದಿನ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ಆಹ್ವಾನಿಸುವುದು ಬಿಸಿಸಿಐ ರೂಢಿಯಾಗಿದೆ ಎಂದು ಅವರು ಹೇಳಿದರು.

ಹೈ ಪ್ರೊಫೈಲ್ ಗೇಮ್‌ಗೆ ಹಾಜರಿದ್ದ ಇತರ ಸೆಲೆಬ್ರಿಟಿಗಳೆಂದರೆ ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಕೂಡ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದರು.
ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಆಸ್ಟ್ರೇಲಿಯಾ ವಿರುದ್ಧ 240 ರನ್ ಗಳಿಸಿತು. ಆಸ್ಟ್ರೇಲಿಯಾವು ನಾಲ್ಕು ವಿಕೆಟ್‌ ಗಳ ನಷ್ಟಕ್ಕೆ 241 ಗಳಿಸಿ ಆರನೇ ಬಾರಿಗೆ ವಿಶ್ವ ಚಾಂಪಿಯನ್‌ ಆಯಿತು.

ಪ್ರಮುಖ ಸುದ್ದಿ :-   ʼಎಎಂ' ಮತ್ತು 'ಪಿಎಂ' ನಡುವೆ ವ್ಯತ್ಯಾಸ ತಿಳಿಯದಿದ್ದರೆ ಅವರು ಪಿಎಂಒ ಹೇಗೆ ನಡೆಸ್ತಾರೆ...?: ರಾಹುಲ್ ಗಾಂಧಿ ಕಚೇರಿ ಬಗ್ಗೆ ಹೇಳಿದ್ದ ಪ್ರಣಬ್ ಮುಖರ್ಜಿ....

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement