ಭೀಕರ ಘಟನೆ: ಅತ್ಯಾಚಾರ ಸಂತ್ರಸ್ತೆಯನ್ನು ಹಾಡಹಗಲೇ ಅಟ್ಟಾಡಿಸಿ ಕೊಚ್ಚಿ ಕೊಂದ ಆರೋಪಿಗಳು

ಕೌಶಂಬಿ: 19 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿ ಹಾಗೂ ಆತನ ಸಹೋದರ ಸೇರಿಕೊಂಡು ಹಾಡಹಗಲೇ    ಅಟ್ಟಾಡಿಸಿ ಕೊಚ್ಚಿ   ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಧೆರ್ಹಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ಭೀಕರ ಹತ್ಯೆಗೂ ಕೆಲವು ದಿನಗಳ ಮುನ್ನವಷ್ಟೇ ಆರೋಪಿಗಳಾದ ಅಶೋಕ ಮತ್ತು ಪವನ್ ನಿಶಾದ್ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಯುವತಿ ಅಪ್ರಾಪ್ತ ವಯಸ್ಕಳಾಗಿದ್ದಾಗ ಮೂರು ವರ್ಷಗಳ ಹಿಂದೆ ಪವನ್ ನಿಶಾದ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದಳು. ಆಕೆಯನ್ನು ನಡು ರಸ್ತೆಯಲ್ಲಿ ಜನರ ಕಣ್ಣೆದುರೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಜನರು ಅದನ್ನು ಅಸಹಾಯಕರಾಗಿ ನಿಂತು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪವನ್ ತನ್ನ ಸಹವರ್ತಿಗಳ ಜತೆ ಸೇರಿ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣ ಕೈಬಿಡುವಂತೆ ಮೂರು ವರ್ಷಗಳಿಂದಲೂ ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ಪವನ್‌ನ ಸಹೋದರನಾದ ಅಶೋಕ ನಿಶಾದ್ ಎಂಬಾತ ಬೇರೊಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಯುವತಿಯ ಹತ್ಯೆಗೂ ಎರಡು ದಿನ ಮುನ್ನವಷ್ಟೇ ಆತನಿಗೆ ಜಾಮೀನು ಸಿಕ್ಕಿತ್ತು. ಪವನ್ ಕೂಡ ಈ ವೇಳೆ ಜೈಲಿನಿಂದ ಹೊರಬಂದಿದ್ದ. ಇವರು ಯುವತಿಯ ಕುಟುಂಬದವರಿಗೆ ಬೆದರಿಕೆ ಹಾಕಿ, ದೂರು ಹಿಂಪಡೆಯುವಂತೆ ಒತ್ತಡ ಹೇರಲು ಸಹೋದರರಿಬ್ಬರೂ ಸೇರಿ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೈಚಾಂಗ್ ಚಂಡಮಾರುತ : ಚೆನ್ನೈನಲ್ಲಿ ವಿಷ್ಣು ವಿಶಾಲ ಮನೆಯಲ್ಲಿ 24 ಗಂಟೆಗಳ ಕಾಲ ಸಿಲುಕಿದ್ದ ಬಾಲಿವುಡ್‌ ನಟ ಅಮೀರ್ ಖಾನ್ ರಕ್ಷಣೆ

ಆದರೆ ಯುವತಿ ಪ್ರಕರಣ ಹಿಂದಕ್ಕೆ ಪಡೆಯಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡಿದ್ದ ಸಹೋದರರು, ಆಕೆ ತನ್ನ ಮನೆಯ ಹಸುಗಳನ್ನು ಸಮೀಪದ ಹೊಲಕ್ಕೆ ಮೇಯಲು ಬಿಟ್ಟು ಮರಳಿ ಮನೆಗೆ ಬರುವ ವೇಳೆ, ಆಕೆಯನ್ನು ಬೆನ್ನಟ್ಟಿ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಧೆರ್ಹಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆಂದು ಪೊಲೀಸರು ಕಳುಹಿಸಿದ್ದಾರೆ.

ಬಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement