ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆ : ವಿಮಾನ ನಿಲ್ದಾಣಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ….!

ಇತ್ತೀಚಿನ ವಾರಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ತ್ವರಿತ ಹೆಚ್ಚಳದ ಮಧ್ಯೆ ವಿವಿಧ ಆಗ್ನೇಯ ಏಷ್ಯಾದ ದೇಶಗಳು ಮತ್ತೆ ನಿರ್ಬಂಧಗಳನ್ನು ವಿಧಿಸಿವೆ ಮತ್ತು ಮುಖದ ಮಾಸ್ಕ್ ಅನ್ನು ಕಡ್ಡಾಯಗೊಳಿಸಿವೆ ಎಂದು ವರದಿಯಾಗಿದೆ.
ಈ ದೇಶಗಳಲ್ಲಿನ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಸ್ಥಳೀಯರಿಗೆ ಮತ್ತೆ ವಿಮಾನ ನಿಲ್ದಾಣದಲ್ಲಿ ಮಾಸ್ಕ್‌ ಗಳನ್ನು ಧರಿಸಲು ಸೂಚಿಸಲಾಗಿದೆ. ಕಠಿಣ ಕ್ರಮಗಳ ಭಾಗವಾಗಿ, ವಿಮಾನ ನಿಲ್ದಾಣಗಳಲ್ಲಿ ಟೆಂಪರೇಚರ್‌ ಪತ್ತೆ ಸ್ಕ್ಯಾನರ್ ಇರುತ್ತದೆ.
ಈ ದೇಶಗಳು ಕೋವಿಡ್ ರೂಪಾಂತರಗಳು, ಜ್ವರ, ನ್ಯುಮೋನಿಯಾ ಮತ್ತು ಇತರ ಉಸಿರಾಟದ ರೋಗಕಾರಕಗಳಂತಹ ವಿವಿಧ ಸೂಕ್ಷ್ಮಜೀವಿಗಳ ಬಾಧೆಗಳನ್ನು ನಿಧಾನಗೊಳಿಸುವ ಉದ್ದೇಶ ಹೊಂದಿವೆ.

ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ…
ಕೊರೊನಾ ವೈರಸ್ ವೇಗವಾಗಿ ಹರಡಲು ಕಾರಣದ ಬಗ್ಗೆ ಮಾತನಾಡಿದ ಸಿಂಗಾಪುರದ ಆರೋಗ್ಯ ಸಚಿವಾಲಯವು, “ಜನಸಂಖ್ಯಾ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ವರ್ಷಾಂತ್ಯದಲ್ಲಿ ಹೆಚ್ಚಿದ ಪ್ರಯಾಣ ಮತ್ತು ಹಬ್ಬದ ಸೀಸನ್ ನಲ್ಲಿ ಸಮುದಾಯ ಸಂಪರ್ಕಗಳು ಸೇರಿದಂತೆ ಹಲವಾರು ಅಂಶಗಳು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
“JN.1 ಸೋಂಕಿಗೆ ಒಳಗಾದ ಪ್ರಕರಣಗಳು, BA.2.86 ರ ಉಪವರ್ಗವು ಪ್ರಸ್ತುತ ಸಿಂಗಾಪುರದಲ್ಲಿ 60%ರಷ್ಟು ಕೋವಿಡ್‌-19 ಪ್ರಕರಣಗಳಿಗೆ ಕಾರಣವಾಗಿದೆ. 2023ರ ನವೆಂಬರ್ 21ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ BA.2.86 ಮತ್ತು ಅದರ ಉಪವರ್ಗಗಳನ್ನು ಆಸಕ್ತಿಯ ರೂಪಾಂತರವೆಂದು ವರ್ಗೀಕರಿಸಲಾಗಿದೆ, ಜಾಗತಿಕವಾಗಿ ಅಥವಾ ಸ್ಥಳೀಯವಾಗಿ ಪ್ರಸ್ತುತ ಯಾವುದೇ ಸೂಚನೆಗಳಿಲ್ಲ, BA.2.86 ಅಥವಾ JN.1 ಇತರ ಪರಿಚಲನೆಯ ರೂಪಾಂತರಗಳಿಗಿಂತ ರೋಗ ಹೆಚ್ಚು ಹರಡುತ್ತದೆ ಅಥವಾ ಹೆಚ್ಚು ತೀವ್ರವಾಗಿರುತ್ತದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯವು (MOH) ಹೇಳಿದೆ.

ಇಂಡೋನೇಷ್ಯಾದಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚಳ…
ಇಂಡೋನೇಷ್ಯಾದ ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ವರದಿ ಮಾಡುವ ಪ್ರದೇಶಗಳಿಗೆ ತಮ್ಮ ಪ್ರಯಾಣದ ಮಾಡುವುದನ್ನು ಮುಂದಕ್ಕೆ ಹಾಕುವಂತೆ ನಾಗರಿಕರಿಗೆ ಒತ್ತಾಯಿಸಿದೆ, ಅವರ ಎರಡು-ಡೋಸ್ ವ್ಯಾಕ್ಸಿನೇಷನ್ ಪೂರ್ಣಗೊಳಿಸಿ, ಮಾಸ್ಕ್‌ ಗಳನ್ನು ಧರಿಸಬೇಕು ಮತ್ತು ಕೈಗಳನ್ನು ತೊಳೆದುಕೊಳ್ಳಿ ಮತ್ತು ಅನಾರೋಗ್ಯವಾದರೆ ಮನೆಯಲ್ಲೇ ಇರಿ ಎಂದು ಸೂಚಿಸಿದೆ.
ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆಯ ಪ್ರಕಾರ, ಇಂಡೋನೇಷ್ಯಾದ ಅಧಿಕಾರಿಗಳು ಕೆಲವು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಉಷ್ಣತೆ ಮಾಪನ ಮಾಡುವ ಥರ್ಮಲ್ ಸ್ಕ್ಯಾನರ್‌ಗಳನ್ನು ಮರುಸ್ಥಾಪಿಸಿದ್ದಾರೆ. ಬಾಟಮ್ ಫೆರ್ರಿ ಟರ್ಮಿನಲ್ ಮತ್ತು ಜಕಾರ್ತಾದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅವುಗಳನ್ನು ಜಾರಿ ಮಾಡುತ್ತಿವೆ.

ಮಲೇಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣ…
ಮಲೇಷ್ಯಾದಲ್ಲಿ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿದೆ, ಹಿಂದಿನ ವಾರ 3,626 ಇದ್ದಿದ್ದು ಡಿಸೆಂಬರ್ 2 ಕ್ಕೆ ಕೊನೆಗೊಂಡ ವಾರದಲ್ಲಿ 6,796 ಕ್ಕೆ ಏರಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವರದಿಯ ಪ್ರಕಾರ, ಹರಡುವಿಕೆ ನಿಯಂತ್ರಣದಲ್ಲಿದೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ತೊಂದರೆಗೊಳಿಸುತ್ತಿಲ್ಲ ಎಂದು ಮಲೇಷಿಯಾದ ಅಧಿಕಾರಿಗಳು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement