ಶಿರಸಿ: ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರು ಪಾಲು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಸಮೀಪದ ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶದಲ್ಲಿ ಸ್ನಾನಕ್ಕೆ ತೆರಳಿದ್ದ ಶಿರಸಿ ನಗರದ ಒಂದೇ ಕುಟುಂಬದ ಐವರು ನೀರು ಪಾಲಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ನೀರು ಪಾಲಾದವರನ್ನು ಶಿರಸಿ ನಗರದ ರಾಮನಬೈಲಿನ ಮಹಮದ್ ಸಲೀಂ (44), ಉಮರ್ ಸಿದ್ದೀಕ್ (14), ನಾಬಿಲ್ (22), ನಾದಿಯಾ ಶೇಖ್ (22) ಹಾಗೂ ಕಸ್ತೂರಬಾನಗರದ ಮಿಸಬಾ (21) ಎಂದು ಗುರುತಿಸಲಾಗಿದೆ.
ಕುಟುಂಬದ 20 ಮಂದಿ ಪಿಕ್’ನಿಕ್’ಗಾಗಿ ಶಾಲ್ಮಲಾ ನದಿ ಪಾತ್ರದ ಭೂತನಗುಂಡಿ ಎಂಬ ಪ್ರದೇಶಕ್ಕೆ ತೆರಳಿದ್ದರು, ಈ ವೇಳೆ ಈ ದುರ್ಘಟನೆ ನಡಡೆದಿದೆ.

ನಾದಿಯಾ ಶೇಖ್ ಹಾಗೂ ನಾಬಿಲ್ ಎಂಬುವವರು ಆಕಸ್ಮಿಕವಾಗಿ ನೀರಲ್ಲಿ ಬಿದ್ದ ವೇಳೆ ಅವರನ್ನು ಉಳಿಸಲು ಸಲೀಂ, ಉಮರ್ ಹಾಗೂ ಮಿಸಬಾ ನೀರಿನ ಗುಂಡಿಗೆ ಧುಮುಕಿದ್ದರು. ಆದರೆ ಯಾರಿಗೂ ಈಜು ಬಾರದ ಕಾರಣ ನೀರಿಗೆ ಬಿದ್ದವರು ಹಾಗೂ ಕಾರಣ ರಕ್ಷಣೆಗೆ ಧಾವಿಸಿದರು ಗುಂಡಿಯ ಆಳದಲ್ಲಿ ಮುಳುಗಿದರು ಎನ್ನಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಗಣೇಶ ಕೆ.ಎಲ್., ಸಿಪಿಐ ಪಿ. ಸೀತಾರಾಮ, ಪಿಎಸ್ಐ ಪ್ರತಾಪ, ಅಗ್ನಿ ಶಾಮಕದಳದ ಸಿಬ್ಬಂದಿ, ಗೋಪಾಲ ಗೌಡ ನೇತೃತ್ವದ ಲೈಫ್ ಗಾರ್ಡ್ ತಂಡ, ಸ್ಥಳೀಯ ಈಜುಗಾರರು ಆಗಮಿಸಿದ್ದು, ಮೂವರ ಶವ ಹೊರತೆಗೆದಿದ್ದಾರೆ. ಉಳಿದವರ ಶೋಧ ಕಾರ್ಯದಲ್ಲಿ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ; 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೇರಿ ಮೂವರು ಅರೆಸ್ಟ್

.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement