‘ಅನುವಾದ ಬೇಡ, ರಾಷ್ಟ್ರಭಾಷೆ ಹಿಂದಿ’ಯನ್ನು ಡಿಎಂಕೆ ನಾಯಕರು ಕಲಿಯಲಿ: ರೇಗಿದ ನಿತೀಶಕುಮಾರ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರ ಮಾತುಗಳನ್ನು ಇಂಗ್ಲಿಷ್‌ನಲ್ಲಿ ಅನುವಾದಿಸಿ ಹೇಳಬೇಕು ಎಂಬ ಬೇಡಿಕೆಯನ್ನು ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಡಿಎಂಕೆ ನಾಯಕರು ಹೇಳಿದ ನಂತರ ನಂತರ ನಿತೀಶಕುಮಾರ ತಾಳ್ಮೆ ಕಳೆದುಕೊಂಡು ರೇಗಿದರು ಎಂದು ವರದಿಯಾಗಿದೆ.
ಈ ವೇಳೆ ಡಿಎಂಕೆ ನಾಯಕರಾದ ಎಂ.ಕೆ. ಸ್ಟಾಲಿನ್ ಮತ್ತು ಟಿ.ಆರ್. ಬಾಲು ಅವರೂ ಸಭೆಯಲ್ಲಿ ಇದ್ದರು. ಡಿಎಂಕೆ ಪ್ರತಿನಿಧಿಗಳು ಈ ಬೇಡಿಕೆ ಮುಂದಿಟ್ಟ ನಂತರ, ಆರ್‌ಜೆಡಿಯ ಮನೋಜ ಝಾ ಅವರು ಅನುವಾದಿಸಲು ಆರಂಭಿಸಿದರು. ಆದರೆ, ಅನುವಾದ ಮಾಡುವುದ ಬೇಡ ಎಂದು ನಿತೀಶ್ ಅವರು ಝಾ ಅವರಿಗೆ ಸೂಚಿಸಿದರು ಎನ್ನಲಾಗಿದೆ.

‘ರಾಷ್ಟ್ರಭಾಷೆಯಾಗಿರುವ ಹಿಂದಿಯನ್ನು ಡಿಎಂಕೆ ನಾಯಕರು ಕಲಿಯಬೇಕು’ ಎಂದು ನಿತೀಶ ಅವರು ಹೇಳಿದರು. ದೇಶವು ಬ್ರಿಟಿಷರನ್ನು ಬಹಳ ಹಿಂದೆಯೇ ಹೊರಹಾಕಿದೆ, ವಸಾಹತುಶಾಹಿಯ ಪಳೆಯುಳಿಕೆಗಳನ್ನು ಕೂಡ ಹೊರಗೆಸೆಯಬೇಕು ಎಂದು ನಿತೀಶಹೇಳಿದರು ಎಂದು ಮೂಲಗಳು ತಿಳಿಸಿವೆ.
‘ನಾನು ಇಲ್ಲಿ ಯಾವುದೇ ಹುದ್ದೆಗಾಗಿ ಬಂದಿಲ್ಲ. ಆದರೂ ಕೆಲವರು ಸುಳ್ಳುಸುದ್ದಿ ಹರಡುತ್ತಿದ್ದಾರೆ’ ಎಂದ ನಿತೀಶ, ತಮ್ಮ ಮಾತುಗಳ ಅನುವಾದಕ್ಕೆ ಅವಕಾಶ ಕೊಡಲಿಲ್ಲ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಪಶ್ಚಿಮ ಬಂಗಾಳದಲ್ಲಿ 'ಬೀದಿ ನ್ಯಾಯʼದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ದೊಣ್ಣೆಯಿಂದ ಥಳಿತ ; ವಿಪಕ್ಷಗಳಿಂದ ಮಮತಾ ವಿರುದ್ಧ ವಾಗ್ದಾಳಿ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement