ʼಭಗವಾನ್ ರಾಮನು ಮಾಂಸಾಹಾರಿ’ : ರಾಮ ಮಂದಿರ ಉದ್ಘಾಟನೆಗೆ ಮುನ್ನ ವಿವಾದ ಸೃಷ್ಟಿಸಿದ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಹೇಳಿಕೆ

ಮುಂಬೈ : ಅಯೋಧ್ಯೆಯಲ್ಲಿ ಬೃಹತ್ ರಾಮ ಮಂದಿರದ ಉದ್ಘಾಟನೆ ಸಮಾರಂಭ ನಡೆಯುವ ಕೆಲವು ದಿನಗಳ ಮೊದಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಅವರು “ಭಗವಾನ್ ರಾಮನು ಮಾಂಸಾಹಾರಿ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಎನ್‌ಸಿಪಿಯ ಶರದ್ ಪವಾರ ಬಣಕ್ಕೆ ಸೇರಿದ ಜಿತೇಂದ್ರ ಅವ್ಹಾದ್ ಅವರು ಬುಧವಾರ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕಾಮೆಂಟ್ ಮಾಡಿದ್ದಾರೆ.
“ರಾಮ ನಮಗೆ, ಬಹುಜನಕ್ಕೆ ಸೇರಿದವನು, ಅವರು ಭಗವಾನ್ ರಾಮನ ಉದಾಹರಣೆಯನ್ನು ನೀಡುವ ಮೂಲಕ ಎಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭಗವಾನ್ ರಾಮನು ಸಸ್ಯಾಹಾರಿ ಅಲ್ಲ, ಮಾಂಸಾಹಾರಿ. 14 ವರ್ಷಗಳಿಂದ ಕಾಡಿನಲ್ಲಿ ಉಳಿದುಕೊಂಡ ವ್ಯಕ್ತಿ ಸಸ್ಯಾಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ?” ಎಂದು ಮಹಾಕಾವ್ಯ ರಾಮಾಯಣದಲ್ಲಿ ಭಗವಾನ್ ರಾಮನು ಕಾಡುಗಳಲ್ಲಿ ಕಳೆದ ವರ್ಷಗಳನ್ನು ಉಲ್ಲೇಖಿಸಿ ಅವ್ಹಾದ್‌ ಹೇಳಿದ್ದಾರೆ

ಈ ತಿಂಗಳ ಅಂತ್ಯದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನ ರಾಮ ಮಂದಿರದ ಮಹಾಮಸ್ತಕಾಭಿಷೇಕದ ಮುನ್ನ ಬಂದಿರುವ ಕಾಮೆಂಟ್ ವಿವಾದಕ್ಕೆ ಕಾರಣವಾಗಿದೆ. ಕೆಲವರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಎನ್‌ಸಿಪಿಯ ಅಜಿತ್ ಪವಾರ್ ಬಣದ ಬೆಂಬಲಿಗರ ದೊಡ್ಡ ಗುಂಪು ಬುಧವಾರ ರಾತ್ರಿ ಅವ್ಹಾದ್ ಅವರ ಮುಂಬೈ ಮನೆಯ ಹೊರಗೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಇಂದು, ಗುರುವಾರ ಬೆಳಿಗ್ಗೆ ಅವ್ಹಾದ್ ಅವರ ಪೋಸ್ಟರ್ನೊಂದಿಗೆ ಬಂದು ಪ್ರತಿಭಟಿಸಿದರು. ಅವ್ಹಾದ್ ಅವರ ಮನೆ ಮುಂದೆ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಬಿಜೆಪಿ ಶಾಸಕ ರಾಮ್ ಕದಂ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಮೀಪದ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಎನ್‌ಸಿಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದರು. “ರಾಮನ ಎಲ್ಲಾ ಭಕ್ತರು ಜಿತೇಂದ್ರ ಅವ್ಹಾದ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುತ್ತಾರೆ” ಎಂದು ಕದಮ್ ಹೇಳಿದರು.

ಪ್ರಮುಖ ಸುದ್ದಿ :-   ನೇಪಾಳದಲ್ಲಿ ದುರಂತ ; ಬಿಹಾರದಲ್ಲಿ ಆತಂಕ..! ಪ್ರವಾಹದಲ್ಲಿ ಬಂದ ಅಪರಿಚಿತ ಮೀನುಗಳು ಜೀವಕ್ಕೆ ಕಂಟಕ ? ಸರ್ಕಾರದ ಎಚ್ಚರಿಕೆ

https://twitter.com/beingarun28/status/1742605369233621157?ref_src=twsrc%5Etfw%7Ctwcamp%5Etweetembed%7Ctwterm%5E1742605369233621157%7Ctwgr%5E55ff366c812459d36e3e7c78f8954f9b8c9568e7%7Ctwcon%5Es1_&ref_url=https%3A%2F%2Fwww.hindustantimes.com%2Findia-news%2Flord-ram-was-non-vegetarian-king-of-bahujan-jitendra-awhads-comment-sparks-row-101704338437166.html

ಇದು ವಿವಾದವಾದ ನಂತರ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿತೇಂದ್ರ ಅವ್ಹಾದ್, “ರಾಮನು ಏನು ತಿಂದಿದ್ದಾನೆ ಎಂಬ ಬಗ್ಗೆ ವಿವಾದ ಎಲ್ಲಿದೆ? ಯಾರೋ ಒಬ್ಬರು ರಾಮನು ಮೆಂತ್ಯ-ಭಜಿ ತಿನ್ನುತ್ತಿದ್ದ  ಎಂದು ಹೇಳಿಕೊಳ್ಳುತ್ತಾರೆ, ಆ ಸಮಯದಲ್ಲಿ ಅಕ್ಕಿ ಇರಲಿಲ್ಲ. ರಾಮ ಒಬ್ಬ ಕ್ಷತ್ರಿಯ ಮತ್ತು ಕ್ಷತ್ರಿಯರು ಮಾಂಸಾಹಾರಿಗಳು. ನಾನು ಹೇಳಿದ್ದಕ್ಕೆ ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಭಾರತದ ಜನಸಂಖ್ಯೆಯ 80% ಮಾಂಸಾಹಾರಿಗಳು, ಅವರೆಲ್ಲ ರಾಮನ ಭಕ್ತರು” ಎಂದು ಜಿತೇಂದ್ರ ಅವ್ಹಾದ ಹೇಳಿದ್ದಾರೆ.
ಅವ್ಹಾದ್ ಹೇಳಿಕೆಯನ್ನು ಖಂಡಿಸಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ವನವಾಸದ ಸಮಯದಲ್ಲಿ ಶ್ರೀರಾಮನು ಹಣ್ಣುಗಳನ್ನು ಸೇವಿಸುತ್ತಿದ್ದ ಎಂದು ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
“ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಮಾತನಾಡುತ್ತಿರುವುದು ಸಂಪೂರ್ಣ ಸುಳ್ಳು, ವನವಾಸದ ಸಮಯದಲ್ಲಿ ಶ್ರೀರಾಮನು ಮಾಂಸಾಹಾರ ಸೇವಿಸಿದ್ದಾನೆ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಎಲ್ಲಿಯೂ ಬರೆದಿಲ್ಲ, ಅವನು ಹಣ್ಣುಗಳನ್ನು ತಿನ್ನುತ್ತಿದ್ದ ಎಂದು ಬರೆಯಲಾಗಿದೆ … ಎಂದು ಅವರು ಹೇಳಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement