16ರ ಬಾಲಕಿ ಮೇಲೆ ʼ ವರ್ಚ್ಯುವಲ್‌ ಗ್ಯಾಂಗ್‌ ರೇಪ್‌ʼ ; ಪೊಲೀಸರಿಂದ ತನಿಖೆ : ಏನಿದು ಈ ವಿಚಿತ್ರ ಪ್ರಕರಣ…?

ಲಂಡನ್‌: ಆನ್‌ಲೈನ್‌ ಗೇಮ್‌ಗಳು ಗೀಳಾಗಿ ಪರಿಣಮಿಸಿ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ವರ್ಚುವಲ್‌ನಲ್ಲಿ ಗ್ಯಾಂಗ್‌ರೇಪ್‌ ನಡೆದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ವರ್ಚ್ಯುವಲ್‌ ನಲ್ಲಿ ನಡೆದ ಈ ಘಟನೆಯಿಂದ ಬಾಲಕಿ ಮೇಲೆ ದೈಹಿಕವಾಗಿ ಯಾವುದೇ ಅಪಾಯವಾಗದೇ ಇದ್ದರೂ, ದೈಹಿಕವಾಗಿ ಅತ್ಯಾಚಾರಕ್ಕೊಳಗಾದ ಬಾಲಕಿಯರಷ್ಟೇ ಈಕೆ ಕೂಡಾ ಮಾನಸಿಕವಾಗಿ ಜರ್ಜರಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೂರು ಸಲ್ಲಿಕೆಯಾಗಿದ್ದು, ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಇಂಥ ಘಟನೆಗಳ ಕುರಿತು ತನಿಖೆ ನಡೆಸಲು ಯಾವ ಕಾನೂನಿನ ಅಡಿ ತನಿಖೆ ನಡೆಸಬೇಕು ಎಂಬುದು ಪೊಲೀಸರಿಗೆ ಪ್ರಶ್ನೆಯಾಗಿ ಪರಿಣಮಿಸಿದೆ. ಯಾಕೆಂದರೆ ಇದಕ್ಕೆ ಇನ್ನೂ ಯಾವುದೇ ನಿರ್ದಿಷ್ಟ ಕಾನೂನು ಜಾರಿಯಾಗಿಲ್ಲ. ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿದ ಮೊದಲ ವರ್ಚುವಲ್ ಲೈಂಗಿಕ ಅಪರಾಧ ಎಂದು ನಂಬಲಾಗಿದೆ.

ಏನಿದು ಪ್ರಕರಣ?:
ಮೆಟಾವರ್ಸ್‌ ಎನ್ನುವುದೊಂದು ಆನ್‌ಲೈನ್‌ ಜಗತ್ತು. ಹೆಡ್‌ಸೆಟ್‌ ಹಾಕಿಕೊಂಡರೆ, ಆತನಿಗೆ ವರ್ಚ್ಯುವಲ್‌ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಸುತ್ತಾಡಿದಂತೆ ಅನುಭವವಾಗುತ್ತದೆ. ವ್ಯಕ್ತಿಗಳ ಎದುರಿಗೆ ನಿಂತು ವ್ಯವಹಾರ ನಡೆಸಿದಂತೆ ಅನುಭವವಾಗುತ್ತದೆ. ಇಂಥದ್ದೇ ಮೆಟಾವರ್ಸ್‌ನ ಆಟವೊಂದರಲ್ಲಿ ಭಾಗಿಯಾಗಿದ್ದ ವೇಳೆ ಬಾಲಕಿ ಮೇಲೆ ಅದೇ ಆಟದಲ್ಲಿ ಭಾಗಿಯಾಗಿದ್ದ ತಂಡವೊಂದು ವರ್ಚ್ಯುವಲ್ ಆಗಿ ಬಾಲಕಿ ಮೇಲೆ ‘ಗ್ಯಾಂಗ್‌ರೇಪ್‌’ ಮಾಡಿದ ಪ್ರಕರಣ ಇದಾಗಿದೆ.
ಬಾಲಕಿಯು ಆನ್‌ಲೈನ್‌ನ ಇಮ್ಮೆರ್ಸಿವ್ ಗೇಮ್‌ನಲ್ಲಿ (ತಾವು ಆಡುವ ಆಟದಲ್ಲಿನ ಪಾತ್ರ ತಮ್ಮದೇ ಎಂಬ ಭಾವನೆ ಮೂಡಿಸುವಂತಹ ತಂತ್ರಜ್ಞಾನದ ವೀಡಿಯೋ ಗೇಮ್) ವರ್ಚುವಲ್ ರಿಯಾಲಿಟಿ (ವಾಸ್ತವವಾಗಿ ನಡೆಯುತ್ತಿದೆ ಎಂಬಂತೆ ಭಾಸವಾಗುವ) ಹೆಡ್‌ಸೆಟ್‌ ಧರಿಸಿದ್ದಳು. ಆಗ ಆಕೆಯ ಮೇಲೆ ವರ್ಚುವಲ್‌ ಗ್ಯಾಂಗ್‌ ರೇಪ್‌ ನಡೆದ ಪ್ರಕರಣ ಇದಾಗಿದೆ. ಇದು ಆನ್‌ಲೈನ್ ಗೇಮ್ ಆಗಿದ್ದರಿಂದ ಆಕೆ ಯಾವುದೇ ದೈಹಿಕ ಘಾಸಿಗೆ ಒಳಗಾಗದೆ ಇದ್ದರೂ, ತನ್ನನ್ನು ‘ವಾಸ್ತವದ ಜಗತ್ತಿನಲ್ಲಿ’ ಯಾರೋ ಅತ್ಯಾಚಾರ ಮಾಡಿದಂತೆ ಬಾಲಕಿಯು ಭಾವನಾತ್ಮಕ ಹಾಗೂ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾಳೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಬಾಲಕಿಗೆ ಯಾವುದೇ ದೈಹಿಕ ಗಾಯವಾಗದಿದ್ದರೂ, “ನೈಜ ಜಗತ್ತಿನಲ್ಲಿ” ಅತ್ಯಾಚಾರಕ್ಕೊಳಗಾದ ವ್ಯಕ್ತಿಯಂತೆಯೇ ಭಾವನಾತ್ಮಕ ಮತ್ತು ಮಾನಸಿಕ ಆಘಾತವನ್ನು ಹದಿಹರೆಯದ ಹುಡುಗಿ ಅನುಭವಿಸಿದ್ದಾಳೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.
“ಈ ಬಾಲಕಿ ಮೇಲೆ ದೀರ್ಘಾವಧಿಯ ಭಾವನಾತ್ಮಕ ಮತ್ತು ಮಾನಸಿಕ ಆಘಾತವಿದೆ” ಎಂದು ಪ್ರಕರಣದ ಪರಿಚಿತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಪ್ರಸ್ತುತ ಕಾನೂನನ್ನು ಇದಕ್ಕಾಗಿ ಜಾರಿ ಮಾಡದ ಕಾರಣ ಕಾನೂನು ಜಾರಿಗಾಗಿ ಇದು ಹಲವಾರು ಸವಾಲುಗಳನ್ನು ಒಡ್ಡುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.
ಆದಾಗ್ಯೂ, ಆಪಾದಿತ ಅಪರಾಧ ನಡೆದ ಸಮಯದಲ್ಲಿ ಹದಿಹರೆಯದ ಹುಡುಗಿ ಯಾವ ಆಟವನ್ನು ಆಡುತ್ತಿದ್ದಳು ಎಂಬುದು ಸ್ಪಷ್ಟವಾಗಿಲ್ಲ.
ನಿಜವಾದ ಅತ್ಯಾಚಾರ ಪ್ರಕರಣಗಳು ಅಪಾರ ಪ್ರಮಾಣದಲ್ಲಿ ಬಾಕಿ ಇರುವಾಗ ಈಗ ವರ್ಚವಲ್‌ ರೇಪ್‌ ಪ್ರಕರಣದ ತನಿಖೆ ಕಾರ್ಯಸಾಧುವೇ ಎಂಬ ಪ್ರಶ್ನೆ ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಎದುರಾಗಿದೆ.
ಆದಾಗ್ಯೂ, ಬ್ರಿಟನ್‌ನ ಗೃಹ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು, ವರ್ಚುವಲ್ ರಿಯಾಲಿಟಿ ರೇಪ್ ತನಿಖೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಗು “ಲೈಂಗಿಕ ಆಘಾತ” ಕ್ಕೆ ಒಳಗಾಗಿದೆ ಎಂದು ಹೇಳಿದ್ದಾರೆ. ಈ ವರ್ಚ್ಯುವಲ್ ಪರಿಸರವು ನಂಬಲಾಗದಷ್ಟು ಆಳವಾಗಿದೆ. ದೈಹಿಕವಾಗಿ ಸಾಧ್ಯವಾಗುವ ಭಯಾನಕ ಸಂಗತಿಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕವೂ ಯಾರಾದರೂ ನಡೆಸಿದಾಗ ಆ ಮಗುವನ್ನು ಅಂತಹ ಆಘಾತದಿಂದ ಉಳಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಮೆಟಾ ಪ್ರತಿಕ್ರಿಯೆ ಏನು…?
ಹರೈಸನ್ ವರ್ಲ್ಡ್ಸ್‌ನಲ್ಲಿ ವರ್ಚುವಲ್ ಲೈಂಗಿಕ ಅಪರಾಧಗಳ ಹಲವಾರು ವರದಿಗಳಿವೆ. ಇದು ಫೇಸ್‌ಬುಕ್‌ನ ಮಾತೃ ಕಂಪನಿ ಮೆಟಾ ನಿರ್ವಹಿಸುವ ಉಚಿತ ವಿಆರ್ ಗೇಮ್ಸ್‌ ಆಗಿದೆ. “ಈ ರೀತಿಯ ವರ್ತನೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಸ್ಥಾನವಿಲ್ಲ, ಅದಕ್ಕಾಗಿಯೇ ನಾವು ಎಲ್ಲಾ ಬಳಕೆದಾರರಿಗೆ ವೈಯಕ್ತಿಕ ಗಡಿ (personal boundary) ಎಂದು ಕರೆಯಲ್ಪಡುವ ಸ್ವಯಂಚಾಲಿತ ರಕ್ಷಣೆ ವ್ಯವಸ್ಥೆ ಹೊಂದಿದ್ದೇವೆ, ಇದು ನಿಮಗೆ ತಿಳಿದಿಲ್ಲದ ಜನರನ್ನು ನಿಮ್ಮಿಂದ ಕೆಲವು ಅಡಿಗಳಷ್ಟು ದೂರದಲ್ಲಿರಿಸುತ್ತದೆ” ಎಂದು ಮೆಟಾದ ವಕ್ತಾರರು ಹೇಳಿದ್ದಾರೆ.
ಈ ಘಟನೆಯಿಂದ ಬಾಲಕಿ ಸಂಪೂರ್ಣವಾಗಿ ತಲ್ಲಣಿಸಿ ಹೋಗಿದ್ದು ದೈಹಿಕವಾಗಿ ಗ್ಯಾಂಗ್‌ರೇಪ್‌ ನಡೆದಷ್ಟೇ ಪ್ರಮಾಣದಲ್ಲಿ ಮಾನಸಿಕವಾಗಿ ನೊಂದಿದ್ದಾಳೆ. ಆಕೆಗೆ ಈ ಆಘಾತದಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ. ಬ್ರಿಟನ್‌ನಲ್ಲಿ ಇಂಥ ಪ್ರಕರಣ ಇದೇ ಮೊದಲು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement