ಇರಾನ್ ವಿರುದ್ಧ ಪಾಕಿಸ್ತಾನದ ಪ್ರತೀಕಾರದ ದಾಳಿಯಲ್ಲಿ 4 ಮಕ್ಕಳು, 3 ಮಹಿಳೆಯರು ಸಾವು : ವರದಿ

ಪಾಕಿಸ್ತಾನದ ಭೂಪ್ರದೇಶದಲ್ಲಿರುವ ಬಲೂಚಿ ಭಯೋತ್ಪಾದಕ ಗುಂಪಿನ ಜೈಶ್‌ ಅಲ್‌-ಅದ್ಲ್‌ನ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದ್ದಕ್ಕಾಗಿ ಇರಾನಿಗೆ “ಗಂಭೀರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಪಾಕಿಸ್ತಾನವು ಇರಾನ್‌ನಲ್ಲಿನ “ಭಯೋತ್ಪಾದಕರ ಅಡಗುತಾಣಗಳ” ಮೇಲೆ ಗುರುವಾರ ಪ್ರತಿ ದಾಳಿ ನಡೆಸಿದೆ.
“ಮಾರ್ಗ್ ಬಾರ್ ಸರ್ಮಾಚಾರ್” ಎಂಬ ಗುಪ್ತಚರ-ಆಧಾರಿತ ಕಾರ್ಯಾಚರಣೆಯಲ್ಲಿ “ಹಲವಾರು ಭಯೋತ್ಪಾದಕರು” ಕೊಲ್ಲಲ್ಪಟ್ಟರು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಪಾಕಿಸ್ತಾನದಲ್ಲಿ “ಭಯೋತ್ಪಾದಕ ಟಾರ್ಗೆಟ್‌” ಮೇಲೆ ದಾಳಿ ಮಾಡಿದ ಕೆಲವು ದಿನಗಳ ನಂತರ ಪ್ರತೀಕಾರದ ದಾಳಿಗಳು ನಡೆದವು, ಇರಾನ್‌ ದಾಳಿಯು ಬಲೂಚಿಸ್ತಾನದಲ್ಲಿ ಇಬ್ಬರು ಮಕ್ಕಳ ಸಾವಿಗೆ ಕಾರಣವಾಗಿತ್ತು.
ಸಿಯೆಸ್ತಾನ್-ಒ-ಬಲೂಚಿಸ್ತಾನ್ ಪ್ರಾಂತ್ಯದ ಭಯೋತ್ಪಾದಕರ ಅಡಗುತಾಣಗಳ ವಿರುದ್ಧ ಇರಾನ್‌ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಇಂದು ಗುರುವಾರ ಬೆಳಿಗ್ಗೆ ಪಾಕಿಸ್ತಾನವು ಹೆಚ್ಚು ಸಂಘಟಿತ ಮತ್ತು ನಿರ್ದಿಷ್ಟವಾಗಿ ಟಾರ್ಗೆಟ್‌ ಮಾಡಿದ ನಿಖರವಾದ ಮಿಲಿಟರಿ ದಾಳಿಗಳನ್ನು ಕೈಗೊಂಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್ ಅನ್ನು “ಸೋದರ ದೇಶ” ಎಂದು ಕರೆದ ಪಾಕಿಸ್ತಾನವು, ಎಲ್ಲಾ ಬೆದರಿಕೆಗಳ ವಿರುದ್ಧ ತನ್ನ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಿಕೊಳ್ಳಲು ಪಾಕಿಸ್ತಾನದ ಅಚಲ ಸಂಕಲ್ಪದ ಈ ಕ್ರಮವು ಬಂದಿದೆ ಎಂದು ಹೇಳಿದೆ. “ಇಂದಿನ ದಾಳಿಯ ಏಕೈಕ ಉದ್ದೇಶವು ಪಾಕಿಸ್ತಾನದ ಸ್ವಂತ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಅನ್ವೇಷಣೆಯಾಗಿದೆ, ಇದು ಅತ್ಯುನ್ನತವಾಗಿದೆ ಮತ್ತು ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ” ಎಂದು ಸಚಿವಾಲಯ ಹೇಳಿದೆ, ಹಾಗೂ ಇರಾನ್‌ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು “ಸಂಪೂರ್ಣವಾಗಿ ಗೌರವಿಸುತ್ತದೆ” ಎಂದು ಇದೇವೇಳೆ ಪಾಕಿಸ್ತಾನ ಹೇಳಿದೆ.
“ಕಳೆದ ಹಲವಾರು ವರ್ಷಗಳಿಂದ, ಇರಾನ್‌ನೊಂದಿಗಿನ ನಮ್ಮ ಮಾತುಕತೆಗಳಲ್ಲಿ, ಪಾಕಿಸ್ತಾನಿ ಮೂಲದ ಭಯೋತ್ಪಾದಕರು ಇರಾನ್‌ನೊಳಗಿನ ಜಾಗಗಳಲ್ಲಿ ತಮ್ಮನ್ನು ‘ಸರ್ಮಾಚಾರ್’ ಎಂದು ಕರೆದುಕೊಳ್ಳುವ ಸುರಕ್ಷಿತ ಸ್ಥಳಗಳಿಂದ ಕಾರ್ಯಾಚರಣೆ ನಡೆಸುವ ಬಗ್ಗೆ ಪಾಕಿಸ್ತಾನವು ತನ್ನ ಗಂಭೀರ ಕಳವಳಗಳನ್ನು ನಿರಂತರವಾಗಿ ಹಂಚಿಕೊಂಡಿದೆ” ಎಂದು ಹೇಳಿಕೆ ತಿಳಿಸಿದೆ.

ಈ ಭಯೋತ್ಪಾದಕರ ಉಪಸ್ಥಿತಿ ಮತ್ತು ಚಟುವಟಿಕೆಗಳ ಕಾಂಕ್ರೀಟ್ ಪುರಾವೆಗಳೊಂದಿಗೆ ಅನೇಕ ದಾಖಲೆಗಳನ್ನು ಹಂಚಿಕೊಂಡಿದೆ ಎಂದು ಪಾಕಿಸ್ತಾನ ಹೇಳಿದೆ.
“ಆದಾಗ್ಯೂ, ನಮ್ಮ ಗಂಭೀರ ಕಳವಳದ ಮೇಲೆ ಕ್ರಮದ ಕೊರತೆಯಿಂದಾಗಿ, ಈ ತಥಾಕಥಿತ ‘ಸರ್ಮಾಚಾರ್’ಗಳು ಅಮಾಯಕ ಪಾಕಿಸ್ತಾನಿಗಳ ರಕ್ತವನ್ನು ಚೆಲ್ಲುವುದನ್ನು ಮುಂದುವರೆಸಿದರು. ಇಂದು ಗುರುವಾರ ಬೆಳಗಿನ ಈ ಕ್ರಮವು ಮುಂಬರುವ ದೊಡ್ಡ ಪ್ರಮಾಣದ ‘ಸರ್ಮಾಚಾರ್’ ಭಯೋತ್ಪಾದಕ ಚಟುವಟಿಕೆಗಳ ವಿಶ್ವಾಸಾರ್ಹ ಗುಪ್ತಚರದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಮಂಗಳವಾರ ಮುಂಜಾನೆ, ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಜೈಶ್ ಅಲ್-ಅದ್ಲ್‌ನ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡಯ ದಾಳಿ ನಡೆಸಿತ್ತು.
ಇರಾನ್‌ ದಾಳಿಯು “ತನ್ನ ವಾಯುಪ್ರದೇಶದ ಉಲ್ಲಂಘನೆ” ಎಂದು ಖಂಡಿಸಿದ ಪಾಕಿಸ್ತಾನ, ಅಂತಹ ಕ್ರಮಗಳು “ಗಂಭೀರ ಪರಿಣಾಮಗಳನ್ನು” ಉಂಟುಮಾಡಬಹುದು ಎಂದು ನೆರೆಯ ದೇಶಕ್ಕೆ ಎಚ್ಚರಿಕೆ ನೀಡಿದ ಮಾರನೇ ದಿನ ಇರಾನ್‌ ಭಯೋತ್ಪಾಕ ಗುಂಪುಗಳ ಮೇಲೆ ಟಾರ್ಗೆಟ್‌ ಮಾಡಲಾಗಿದೆ ಎಂದು ಹೇಳಿದೆ.
ಜೈಶ್ ಅಲ್-ಅದ್ಲ್ ಅನ್ನು ಭಯೋತ್ಪಾದಕ ಗುಂಪು ಎಂದು ಇರಾನ್ ಕಪ್ಪುಪಟ್ಟಿಗೆ ಸೇರಿಸಿದ್ದು, ಇದನ್ನು 2012 ರಲ್ಲಿ ರಚಿಸಲಾಯಿತು ಮತ್ತು ಇತ್ತೀಚಿನ ವರ್ಷಗಳಲ್ಲಿ ಇರಾನ್ ಪ್ರದೇಶದಲ್ಲಿ ಹಲವಾರು ದಾಳಿಗಳನ್ನು ನಡೆಸಿದೆ.
ಮಧ್ಯಪ್ರಾಚ್ಯದಲ್ಲಿ ಹಮಾಸ್-ಇಸ್ರೇಲ್ ಸಂಘರ್ಷ ಮತ್ತು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಮಧ್ಯೆ ಇರಾನ್ ಪಾಕಿಸ್ತಾನದ ಪ್ರದೇಶದ ಮೇಲೆ ದಾಳಿ ನಡೆಸುತ್ತಿದೆ ಮತ್ತು ಇಸ್ಲಾಮಾಬಾದ್‌ನ ಪ್ರತೀಕಾರವೂ ಬಂದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement