ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೂ ಮುನ್ನ ರಾಮ ಲಲ್ಲಾ ವಿಗ್ರಹದ ಮುಖದ ಫೋಟೋ ಬಿಡುಗಡೆ

ನವದೆಹಲಿ : ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದ್ದು, ರಾಮ ಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗಿರುವ ರಾಮನ ವಿಗ್ರಹವನ್ನು ಸಮಾರಂಭಕ್ಕೆ ಕೆಲವು ದಿನಗಳ ಮುಂಚಿತವಾಗಿ ಶುಕ್ರವಾರ ಬಹಿರಂಗಪಡಿಸಲಾಗಿದೆ.
ವಿಗ್ರಹವು ಭಗವಾನ್ ರಾಮನನ್ನು ಐದು ವರ್ಷದ ಮಗುವಿನಂತೆ ಚಿತ್ರಿಸಿದ್ದು, ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಭಂಗಿಯಲ್ಲಿದೆ.ಮೈಸೂರು ಮೂಲದ ಕಲಾವಿದ ಅರುಣ ಯೋಗಿರಾಜ ಕೆತ್ತಿರುವ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಕಪ್ಪು ಕಲ್ಲಿನಿಂದ ಮಾಡಲಾಗಿದೆ.

ಪ್ರಾಣ ಪ್ರತಿಷ್ಠೆ ಸಮಾರಂಭದ ಮೊದಲು ಅಧಿಕಾರಿಗಳು ಸಂಪೂರ್ಣ ವಿಗ್ರಹವನ್ನು ಅನಾವರಣಗೊಳಿಸಿದರು. ಗುರುವಾರ, ಗರ್ಭಗುಡಿಯೊಳಗೆ ವಿಗ್ರಹವನ್ನು ಇರಿಸುವ ಫೋಟೋಗಳನ್ನು ಬಿಡುಗಡೆ ಮಾಡಲಾಯಿತು, ಆದರೆ ಅದನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಶುಕ್ರವಾರ ಬೆಳಿಗ್ಗೆ ಮತ್ತೊಂದು ಚಿತ್ರ ಹೊರಹೊಮ್ಮಿತು, ಅಲ್ಲಿ ವಿಗ್ರಹದ ಕಣ್ಣುಗಳು ಮಾತ್ರ ಮುಚ್ಚಲಾಗಿತ್ತು. ಅಂತಿಮವಾಗಿ ಮಧ್ಯಾಹ್ನ ಸಂಪೂರ್ಣ ವಿಗ್ರಹದ ನೋಟವನ್ನು ಅನಾವರಣಗೊಳಿಸಲಾಯಿತು, ಇದು ದೇವರ ಮುಖ ಮತ್ತು ಚಿನ್ನದ ಬಿಲ್ಲು ಮತ್ತು ಬಾಣವನ್ನು ತೋರಿಸುತ್ತದೆ.

ಜನವರಿ 22 ರಂದು ನಡೆಯುವ ಅದ್ಧೂರಿ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಬ್ರಜೇಶ ಪಾಠಕ ತಿಳಿಸಿದ್ದಾರೆ. “ದೇವಸ್ಥಾನದಲ್ಲಿ ರಾಮಲಲ್ಲಾವನ್ನು ಸ್ಥಾಪಿಸಲಾಗಿದೆ. ಮೂಲಸೌಕರ್ಯ, ವೈದ್ಯಕೀಯ ಸೌಲಭ್ಯಗಳು ಮತ್ತು ಔಷಧಿಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ಪಾಠಕ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಇತರ ಹಲವು ಗಣ್ಯರು ಭಾಗವಹಿಸಲಿದ್ದಾರೆ. 8,000ಕ್ಕೂ ಹೆಚ್ಚು ವಿಶೇಷ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.
ಜನವರಿ 12 ರಂದು ದೇವಾಲಯದ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳು ಆರಂಭಗೊಂಡಿದೆ. ಹಲವಾರು ರಾಜ್ಯಗಳಲ್ಲಿ ಸರ್ಕಾರಿ ಕಚೇರಿಗಳು, ಮಂಡಳಿಗಳು ಮತ್ತು ನಿಗಮಗಳು ಜನವರಿ 22 ರಂದು ಅರ್ಧ ದಿನ ಅಥವಾ ರಜೆ ಘೋಷಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement