ವೀಡಿಯೊ…| ಮನೆ ಕೆಲಸದವನಿಗೆ ಚಪ್ಪಲಿಯಲ್ಲಿ ಹೊಡೆದ ಖ್ಯಾತ ಕವ್ವಾಲಿ ಗಾಯಕ ರಾಹತ್ ಫತೇಹ್ ಅಲಿ ಖಾನ್

ಹಲವು ಬಾಲಿವುಡ್ ಸಿನೆಮಾ ಗೀತೆಗಳಿಗೆ ಧ್ವನಿ ನೀಡಿರುವ, ಪಾಕಿಸ್ತಾನದ ಖ್ಯಾತ ಕವ್ವಾಲಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ( (Rahat Fateh Ali Khan) ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಮನಬಂದತೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಸಮಾ ಟಿವಿ ಚಾನಲ್ ಈ ವೀಡಿಯೊ ಶೇರ್ ಮಾಡಿದ್ದು, ಇದರಲ್ಲಿ ಪಾಕಿಸ್ತಾನಿ ಪಾಕಿಸ್ತಾನದ ಖ್ಯಾತ ಕವ್ವಾಲಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಗಾಯಕ​ , ಆಲ್ಕೋಹಾಲ್​ಗಾಗಿ ಮನೆಗೆಲದವನಿಗೆ ಹಲವಾರು ಜನರ ಮುಂದೆಯೇ ಹಲ್ಲೆ ಮಾಡಿ, ಅವಾಚ್ಯ ಶಬ್ದದಿಂದ ನಿಂದಿಸಿರುವ ವೀಡಿಯೊ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಗಾಯಕ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಥಳಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ವ್ಯಕ್ತಿಗೆ ಹೊಡೆಯುತ್ತಿದ್ದಾಗ ಬಾಟಲಿ ಎಲ್ಲಿಗೆ ಹೋಯಿತು ಎಂದು ಕೇಳುತ್ತಿದ್ದಾರೆ. ವೀಡಿಯೊವನ್ನು ಹಂಚಿಕೊಂಡಿರುವ ಹಲವು ಟ್ವಿಟರ್​ ಬಳಕೆದಾರರು ಈ ವೀಡಿಯೊ ಪಾಕಿಸ್ತಾನಿ ಗಾಯಕ ರಹತ್ ಫತೇಹ್ ಅಲಿ ಖಾನ್ ಅವರದ್ದು ಮತ್ತು ಅವರು ಹೊಡೆಯುತ್ತಿರುವ ವ್ಯಕ್ತಿ ಅವರ ಮನೆಯ ಕೆಲಸದವರು ಎಂದು ಹೇಳಿಕೊಂಡಿದ್ದಾರೆ.
ತಮ್ಮ ನಡೆಯಿಂದ ರಾಹತ್ ಫತೇ ಅಲಿ ಖಾನ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಅವರು ಒಳ್ಳೆಯ ಗಾಯಕರಾಗಿರಬಹುದು, ಆದರೆ ಅವರು ಒಳ್ಳೆಯ ವ್ಯಕ್ತಿ ಅಲ್ಲ ಎಂದು ಜನರು ಅವರನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು “ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ” ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ...

ಸ್ಪಷ್ಟನೆ ನೀಡಿದ ರಾಹತ್
ರಾಹತ್ ಫತೇಹ್ ಅಲಿ ಖಾನ್ ನಂತರ ತಾವೂ ಹೊಡೆದಿರುವ ವ್ಯಕ್ತಿ ಮತ್ತು ಅವರ ತಂದೆಯೊಂದಿಗೆ ವೀಡಿಯೊ ಮಾಡಿದ್ದು, ತಾವೂ ಹಿಂದೆ ಹಲ್ಲೆ ನಡೆಸಿದ್ದ ವೀಡಿಯೊ ವೈರಲ್ ಆಗಿರುವುದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ತಾನು ಮದ್ಯದ ಬಾಟಲಿಗಾಗಿ ಹಲ್ಲೆ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಅದು ಧಾರ್ಮಿಕ ಸ್ಥಳಗಳಿಂದ ತಂದಿದ್ದ ಪವಿತ್ರ ನೀರಿದ್ದ ಬಾಟೆಲ್. ಅದು ಸಿಕ್ಕದಿದ್ದರಿಂದ ನಾನು ಆ ರೀತಿ ವರ್ತಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಂದೆ ಮತ್ತು ಮಗನಿಂದಲೂ ಸ್ಪಷ್ಟನೆ ಕೊಡಿಸಿದ್ದಾರೆ.
ರಾಹತ್ ಫತೇಹ್ ಅಲಿ ಖಾನ್ ಹಲವು ವರ್ಷಗಳಿಂದ ಪ್ರಪಂಚದಾದ್ಯಂತ ತಮ್ಮ ಧ್ವನಿಯಿಂದ ಜನರನ್ನು ಮಂತ್ರಮುಗ್ಧರನ್ನಾಗಿಸಿದ ಗಾಯಕ. ಅವರು ಪಾಕಿಸ್ತಾನದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಇದಲ್ಲದೆ, ಅವರು ಬಾಲಿವುಡ್‌ನಲ್ಲಿಯೂ ಕೆಲಸ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement