ಕೆಜಿಗೆ 29 ರೂ.ಗಳಂತೆ ‘ಭಾರತ ರೈಸ್’ ಅಕ್ಕಿ ಮಾರಾಟ ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ಜನಸಾಮಾನ್ಯರಿಗೆ ಅನುಕೂಲವಾಗಲು ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ ರೈಸ್’ ಅನ್ನು ಪ್ರತಿ ಕೆಜಿಗೆ 29 ರೂ.ಗಳಿಗೆ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಹಾಗೂ ಅದರ ನಿಯಂತ್ರಣದ ಭಾಗವಾಗಿ ಅಕ್ಕಿ/ಭತ್ತದ ದಾಸ್ತಾನಿನ ಬಗ್ಗೆ ಮಾಹಿತಿ ನೀಡುವಂತೆ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ. ಕಳೆದ ಒಂದು ವರ್ಷದಲ್ಲಿ ಅಕ್ಕಿ ಬೆಲೆ ಸುಮಾರು 15 ಪ್ರತಿಶತದಷ್ಟು ಬೆಲೆ ಏರಿಕೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ ಚೋಪ್ರಾ ಅವರು, ಈ ಎರಡು ಕ್ರಮಗಳು ಮತ್ತು ರಫ್ತಿನ ವಿವಿಧ ನಿರ್ಬಂಧಗಳು ಬೆಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ಕಿ ರಫ್ತು ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ. ಬೆಲೆಗಳು ಸಮಂಜಸವಾದ ಮಟ್ಟಕ್ಕೆ ಇಳಿಯುವವರೆಗೆ ನಿರ್ಬಂಧಗಳು ಮುಂದುವರಿಯುತ್ತವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಅಕ್ಕಿಯನ್ನು ಹೊರತುಪಡಿಸಿ ಎಲ್ಲಾ ಅಗತ್ಯ ಆಹಾರ ಪದಾರ್ಥಗಳ ಬೆಲೆಗಳು ನಿಯಂತ್ರಣದಲ್ಲಿವೆ. ಆದರೆ ಸರ್ಕಾರದ ಮೊದಲ ಆದ್ಯತೆ ಅಕ್ಕಿ ಬೆಲೆಗಳನ್ನು ಕಡಿಮೆಯಾಗುವಂತೆ ಖಚಿತಪಡಿಸಿಕೊಳ್ಳುವುದು ಎಂದು ಚೋಪ್ರಾ ಹೇಳಿದರು.
ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಬೆಲೆಗಳು ಚಿಲ್ಲರೆ ವ್ಯಾಪಾರದಲ್ಲಿ ಶೇಕಡಾ 14.5 ರಷ್ಟು ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 15.5 ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.
ಬೆಲೆಗಳನ್ನು ನಿಯಂತ್ರಿಸಲು, ಕೇಂದ್ರವು ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ((NCCF) ಹಾಗೂ ಜೊತೆಗೆ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರದ ಮೂಲಕ ಚಿಲ್ಲರೆ ಮಾರುಕಟ್ಟೆಯಲ್ಲಿ ಸಬ್ಸಿಡಿ ಸಹಿತ ‘ಭಾರತ ರೈಸ್’ ಅನ್ನು 29 ರೂ.ಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಎಂದು ಚೋಪ್ರಾ ಹೇಳಿದರು.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

ಭಾರತ ರೈಸ್ ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ 5ಕೆ.ಜಿ ಮತ್ತು 10ಕೆ.ಜಿ ಪ್ಯಾಕ್ ಗಳಲ್ಲಿ ಲಭ್ಯವಾಗಲಿದೆ. ಭಾರತ್ ರೈಸ್ ಅನ್ನು ಮಾರಾಟ ಮಾಡಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ಅಳವಡಿಸಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರ್ಕಾರವು 5 ಲಕ್ಷ ಟನ್ ಅಕ್ಕಿಯನ್ನು ನಿಗದಿಪಡಿಸಿದೆ ಎಂದು ಚೋಪ್ರಾ ಹೇಳಿದರು.
ಕೇಂದ್ರ ಸರ್ಕಾರ ಈಗಾಗಲೇ ಭಾರತ ಅಟ್ಟಾವನ್ನು ಕೆಜಿಗೆ 27.50 ರೂ.ಗಳಿಗೆ ಮತ್ತು ಭಾರತ ದಾಲ್ (ಚನಾ) ಕೆಜಿಗೆ 60 ರೂ.ಗಳಿಗೆ ಮಾರಾಟ ಮಾಡುತ್ತಿದೆ.

“ನಾವು ಈಗ ಅಕ್ಕಿಯನ್ನು ಸಂಗ್ರಹಿಸುತ್ತಿರುವ ಎಲ್ಲಾ ಘಟಕಗಳು ಆಹಾರ ಇಲಾಖೆಯ ಪೋರ್ಟಲ್‌ನಲ್ಲಿ ತಮ್ಮ ದಾಸ್ತಾನುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶಗಳನ್ನು ನೀಡುತ್ತಿದ್ದೇವೆ. ಆದ್ದರಿಂದ ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಮತ್ತು ಪ್ರೊಸೆಸರ್‌ಗಳು ತಮ್ಮ ದಾಸ್ತಾನುಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಪೋರ್ಟಲ್‌ಗಳಲ್ಲಿ ಅವರು ತುಂಡಾದ ಅಕ್ಕಿ, ಬಾಸ್ಮತಿ ಅಲ್ಲದ ಅಕ್ಕಿ, ಬೇಯಿಸಿದ ಅಕ್ಕಿ ಮತ್ತು ಬಾಸ್ಮತಿ ಅಕ್ಕಿಯಂತಹ ವರ್ಗಗಳಲ್ಲಿ ದಾಸ್ತಾನುಗಳನ್ನು ಬಹಿರಂಗಪಡಿಸಬೇಕಾಗುತ್ತದೆ,” ಎಂದು ಅವರು ಹೇಳಿದರು.
ಸರ್ಕಾರದ ಬಫರ್ ಸ್ಟಾಕ್‌ನಲ್ಲಿ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಸಾಕಷ್ಟು ಸಂಗ್ರಹದ ಹೊರತಾಗಿಯೂ ಬೆಲೆಗಳು ಏರುತ್ತಿವೆ ಎಂದು ಕಾರ್ಯದರ್ಶಿ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement