ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಮುಧೋಳ ಅರ್ಚಕ ಆಯ್ಕೆ

ಬಾಗಲಕೋಟೆ: ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಜಿಲ್ಲೆಯ ಮುಧೋಳ (Mudhol) ಮೂಲದ ಅರ್ಚಕ ಗುರುನಾಥ ಜೋಶಿ ಅವರು ಆಯ್ಕೆಯಾಗಿದ್ದಾರೆ.
ಅರ್ಚಕ ಗುರುನಾಥ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ‌ ಮಾಡಿರುವ ಅವರು, ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುನಾಥ ಜೋಷಿ ಅವರನ್ನು ಆಯ್ಕೆ ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ.

ಫೆ.15, 16 ರಂದು ನಡೆಯಲಿರುವ ಮಂಡಲಾರಾಧನೆ ಪೂಜೆಯಲ್ಲಿ ಅರ್ಚಕ ಗುರುನಾಥ ಜೋಶಿ ಅವರು ಭಾಗಿಯಾಗಲಿದ್ದಾರೆ. ಜೋಷಿಯವರು ಪ್ರಸ್ತುತ ಮುಧೋಳ ನಗರದಲ್ಲಿ ಸದ್ಗುರು ಶ್ರೀ ಚಿದಂಬರ ಜ್ಯೋತಿಷ್ಯಾಲ ನಡೆಸುತ್ತಿದ್ದಾರೆ. ಮೂಲತಃ ಅರ್ಚಕ ವೃತ್ತಿ ಕುಟುಂಬದ ಬಂದಿರುವ ಇವರು ಈ ಹಿಂದೆ ಮುಧೋಳದ ಸಾಯಿ ಬಾಬಾ ದೇವಸ್ಥಾನದ ಅರ್ಚಕರಾಗಿದ್ದರು
ಈ ಬಗ್ಗೆ ಗುರುನಾಥ ಜೋಶಿ ಅವರು ಪ್ರತಿಕ್ರಿಯಿಸಿದ್ದು. ಅಯೋಧ್ಯೆ ರಾಮ ಮಂದಿರ‌ ‌ಮಂಡಲಾರಾಧನೆಗೆ ನನ್ನನ್ನು ಆಯ್ಕೆ ಮಾಡಿದ್ದು ನಮ್ಮ ಪೂರ್ವಜರು ‌ಮಾಡಿದ ಪುಣ್ಯ. ಇಂತಹ ಅವಕಾಶ ಸಿಕ್ಕಿದ್ದನ್ನು ಮರೆಯಲಾಗದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಂಗನ ಕಾಯಿಲೆಗೆ ಉತ್ತರ ಕನ್ನಡದಲ್ಲಿ ಮತ್ತೊಬ್ಬ ಮಹಿಳೆ ಸಾವು

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement