ಕುವೈತ್‌ನ ಕೆಸಿಸಿ (KCC) T20 ಚಾಲೆಂಜರ್ಸ್ ಕಪ್ 2024ರಲ್ಲಿ ಕುವೈತ್ ನ್ಯಾಷನಲ್ಸ್ ಮತ್ತು ಎಸ್‌ಬಿಎಸ್ ಸಿಸಿ (SBS CC) ನಡುವಿನ ಪಂದ್ಯದ ಸಮಯದಲ್ಲಿ ಸ್ಪಿನ್ನರ್ ಎಸೆದ ಎಸೆತವು ಅದ್ಭುತ ಎಸೆತವಾಗಿ ಪರಿಣಮಿಸಿದ್ದು, ಬ್ಯಾಟರ್ ಕಕ್ಕಾಬಿಕ್ಕಿಯಾಗಿದ್ದಾನೆ. ಈ ಎಸೆತ ವೈರಲ್ ಆಗಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹೊಸ ‘ಶತಮಾನದ ಚೆಂಡು’ ಎಂದು ಬಣ್ಣಿಸಿದ್ದಾರೆ.
ಬೌಲರ್ ಟಾಸ್ ಮಾಡಿ ಎಸೆದ ಚೆಂಡು ಆಕಾಶಕ್ಕೆ ಚಿಮ್ಮಿ ಆಫ್-ಸ್ಟಂಪ್‌ನ ಹೊರಗೆ ಬಿತ್ತು ಮತ್ತು ಬ್ಯಾಟರ್ ಮಿಡ್-ವಿಕೆಟ್ ಮೇಲೆ ಭಾರಿ ಹೊಡೆತ ಹೊಡೆಯಲು ಬೌಲ್ ಪಿಚ್ ಆಗುವಲ್ಲಿ ಬಂದಿದ್ದಾನೆ. ಆದರೆ ಎಸೆತವು ತೀವ್ರವಾಗಿ ತಿರುಗಿತು ಮತ್ತು ಸ್ಟಂಪ್‌ಗೆ ಬಡಿಯಿತು ಮತ್ತು ಚೆಂಡಿನ ತಿರುಗುವಿಕೆಗೆ ಬ್ಯಾಟರ್ ಕ್ಷಣಕಾಲ ಕಕ್ಕಾಬಿಕ್ಕಿಯಾಗಿದ್ದಾನೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹೊಸ ‘ಬಾಲ್ ಆಫ್ ದಿ ಸೆಂಚುರಿ’ ಎಂದು ಕರೆದಿದ್ದಾರೆ. ಜೂನ್ 1993 ರಲ್ಲಿ ಇಂಗ್ಲೆಂಡ್‌ನ ಮೈಕ್ ಗ್ಯಾಟಿಂಗ್‌ನನ್ನು ವೌಟ್ ಮಾಡಿದ್ದ ಶೇನ್ ವಾರ್ನ್ ಅವರ ಸ್ಪಿನ್ನಿಗೆ ಬಳಸಲಾದ ಪದ ಇದಾಗಿದೆ. ಕುವೈತ್ ಪಂದ್ಯದ ಈ ಎಸೆತದ ವೀಡಿಯೊ ಅಂತಾರಾಷ್ಟ್ರೀಯ ಕ್ರಿಕೆಟಿಗರ ಗಮನ ಸಹ ಸೆಳೆದಿದೆ.
ವೀಡಿಯೊ ಕ್ಲಿಪ್‌ನಲ್ಲಿ ಬೌಲರ್ ಚೆಂಡನ್ನು ಆಫ್ ಸ್ಟಂಪ್‌ನ ಹೊರಗೆ ಚೆನ್ನಾಗಿ ಪಿಚ್ ಮಾಡುವ ಮೊದಲು ಹೆಚ್ಚು ಲೂಪಿಂಗ್ ಪಥ (ಫ್ಲೈಟೆಡ್ ಎಸೆತ)ವನ್ನು ತೆಗೆದುಕೊಳ್ಳುವ ಎಸೆತ ಮಾಡುವುದನ್ನು ಕಾಣಬುದು. ಇದು ಗಾಳಿಯಲ್ಲಿ ತೇಲುತ್ತದೆ, ಎಷ್ಟೆಂದರೆ ಕ್ಯಾಮರಾದಲ್ಲಿಯೂ ಸೆರೆಯಾಗದಷ್ಟು ಎತ್ತರಕ್ಕೆ ಚೆಂಡು ಟಾಸ್ ಆಗಿದೆ. ಬ್ಯಾಟರ್ ಅದನ್ನು ಅನುಸರಿಸಿ ಆಫ್ ಸೈಡ್‌ನಲ್ಲಿದ್ದ ಚೆಂಡನ್ನು ಲೆಗ್ ಸೈಡ್‌ಗೆ ಭಾರೀ ಹೊಡೆತಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಪಿಚ್ ಮಾಡಿದ ನಂತರ ಚೆಂಡು ಭಾರೀ ತಿರುವು ತೆಗೆದುಕೊಂಡು ಬ್ಯಾಟರ್ ನನ್ನು ವಂಚಿಸಿ ಸ್ಟಂಪ್‌ನ ಮೇಲ್ಭಾಗಕ್ಕೆ ಬಡಿದಿದೆ. ಚೆಂಡಿನ ನಂಬಲಸಾಧ್ಯವಾದ ಭಾರೀ ತಿರುವಿಗೆ ಬ್ಯಾಟರ್ ಅವಾಕ್ಕಾಗಿ ಕ್ರೀಸಿನಲ್ಲಿ ಕೆಲಕಾಲ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
“ಮುರಳಿ ಕೂಡ ಇದನ್ನು ಲೂಪ್‌ನಲ್ಲಿ ನೋಡುತ್ತಾನೆ!” ಎಂದು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಬರೆದಿದ್ದಾರೆ. ಹರ್ಭಜನ್ ಸಿಂಗ್ ಅವರ ರನ್ ಅಪ್, ಮುತ್ತಯ್ಯ ಮುರಳಿಧರನ್ ಬೌಲಿಂಗ್ ಆರ್ಮ್ ಆಕ್ಷನ್ ಮತ್ತು ಶೇನ್ ವಾರ್ನೆ ಲೆವೆಲ್ ಟರ್ನ್” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ