ಕ್ಯಾಲಿಫೋರ್ನಿಯಾದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ಭಾರತೀಯ ಕುಟುಂಬದ ನಾಲ್ವರು ಶವವಾಗಿ ಪತ್ತೆ : ದಂಪತಿಗೆ ಗುಂಡಿನ ಗಾಯ

ಭಾರತೀಯ ಮೂಲದ ಕುಟುಂಬದ ನಾಲ್ವರು ಅಮೆರಿಕದ ಸ್ಯಾನ್ ಮಾಟಿಯೊ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ, ಪೊಲೀಸರು ಇದನ್ನು ಕೊಲೆ-ಆತ್ಮಹತ್ಯೆಯ ಪ್ರಕರಣ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಫಾಕ್ಸ್ ಕೆಟಿವಿಯು ವರದಿಯ ಪ್ರಕಾರ, ಮೆಟಾ ಕಂಪನಿಯ ಮಾಜಿ ಇಂಜಿನಿಯರ್ ಆನಂದ ಸುಜಿತ ಹೆನ್ರಿ (42) ತನ್ನ 4 ವರ್ಷದ ಅವಳಿ ಗಂಡು ಮಕ್ಕಳನ್ನು ಬೆಡ್ ರೂಂ ಒಂದರಲ್ಲಿ ಕೊಂದು, ತನ್ನ ಪತ್ನಿ ಆಲಿಸ್ ಬೆಂಜಿಗರ್ (40) ಅವರನ್ನು ಬಾತ್ ಟಬ್ ನಲ್ಲಿ ಗುಂಡು ಹಾರಿಸಿ ಕೊಂದ ನಂತರ ತಾನು ಸಹ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಪೊಲೀಸ್ ವರದಿಯ ಪ್ರಕಾರ, ಮಾಹಿತಿಯ ಪೊಲೀಸರು ಮನೆಗೆ ಬಂದಾಗ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ತೆರೆದ ಕಿಟಕಿಯ ಮೂಲಕ ಮನೆ ಒಳಗೆ ಪ್ರವೇಶಿಸಿದ್ದಾರೆ. ಒಳಗೆ ಹೋದ ನಂತರ ಒಳಗೆ ನಾಲ್ವರು ಸತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ನಂತರ ಬಲವಂತದ ಪ್ರವೇಶದ ಯಾವುದೇ ಲಕ್ಷಣ ಕಂಡುಬಂದಿಲ್ಲ.
ಈ ಮೊದಲು, ಬಾಲಕರು ಮಲಗುವ ಕೋಣೆಯೊಳಗೆ ಪತ್ತೆಯಾಗಿದ್ದಾರೆ ಮತ್ತು ಅವರ ಸಾವಿಗೆ ಕಾರಣವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಮೋದಿ ಹೆಸರು ಹೇಳಲು ಹೆದರುವ ರಣಹೇಡಿ..ಸೇನೆಗೆ ಇವ್ರೇನು ಸಂದೇಶ ಕೊಡ್ತಾರೆ ; ಪಾಕ್‌ ಪ್ರಧಾನಿಯನ್ನು ಜರೆದ ಸಂಸದ-ವೀಕ್ಷಿಸಿ

ಎನ್‌ಬಿಸಿ ಬೇ ಏರಿಯಾ ವರದಿ ಮಾಡಿದಂತೆ ಹುಡುಗರನ್ನು ಉಸಿರುಗಟ್ಟಿಸಿ, ಕತ್ತು ಹಿಸುಕಿ ಅಥವಾ ಯಾವುದಾದರೂ ಸಾಯುವಂತಹ ವಸ್ತುವನ್ನು ಮಿತಿಮೀರಿದ ಪ್ರಮಾಣ ನೀಡಿ ಸಾಯಿಸಲಾಗಿದೆ ಎಂದು ಪೊಲೀಸರು ನಂಬಿದ್ದಾರೆ ಎಂದು ತನಿಖೆಯ ನೇರ ಜ್ಞಾನ ಹೊಂದಿರುವ ಮೂಲಗಳು ತಿಳಿಸಿವೆ.
ಬಾತ್‌ರೂಮ್‌ನಲ್ಲಿ ಗುಂಡಿನ ಗಾಯಗಳೊಂದಿಗೆ ದಂಪತಿ ಪತ್ತೆಯಾಗಿದ್ದಾರೆ ಮತ್ತು 9 ಮಿಲಿಮೀಟರ್ ಪಿಸ್ತೂಲ್ ಮತ್ತು ಲೋಡ್ ಮಾಡಲಾದ ಮ್ಯಾಗಜೀನ್ ಸ್ನಾನದ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ವರದಿ ತಿಳಿಸಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಯಾವುದೇ ಟಿಪ್ಪಣಿ ಸಿಕ್ಕಿಲ್ಲ ಎಂದು ಎನ್‌ಬಿಸಿ ವರದಿ ಹೇಳಿದೆ. ಸ್ಯಾನ್ ಮಾಟಿಯೊ ಪೊಲೀಸ್ ಇಲಾಖೆಯ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೋ (ಸಿಐಬಿ) ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಜೊತೆ ಸಂಘರ್ಷದಿಂದ ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ : ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚಿಸ್ತಾನ ಪ್ರಾಂತ್ಯ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement