ಶಿರಸಿ : ಅಪ್ಪಟ ಹಳ್ಳಿಯ ಪ್ರದೇಶದಲ್ಲಿ 114 ವರ್ಷಗಳ ಹಿಂದೆ ಸ್ಥಾಪನೆಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಕೆಯ ಮೂಲಕ ಭವಿಷ್ಯದ ಜೀವನಕ್ಕೆ ದಾರಿ ತೋರಿಸಿದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾಲೂಕಿನ ಸುಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಫೆ.25 ರ ಬೆಳಿಗ್ಗೆ 10 ಕ್ಕೆ ಶಾಲಾ ನೂತನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಪ್ರಯುಕ್ತ ಶೈಕ್ಷಣಿಕ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಳ್ಳುವರು. ಸುಗಾವಿ ಗ್ರಾಪಂ ಅಧ್ಯಕ್ಷೆ ಲಲಿತಾ ಅನಂತ ಜೋಗಿ ಅಧ್ಯಕ್ಷತೆ ವಹಿಸಲಿದ್ದಾರೆ.ಸುಗಾವಿ ಗ್ರಾಪಂ ಉಪಾಧ್ಯಕ್ಷ ಮಧುಕೇಶ್ವರ ಚನ್ನಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಗಣೇಶ ಎನ್. ಜೋಷಿ, ಲಲಿತಾ ಎಂ. ನಾಯ್ಕ, ಹಾಗೂ ಸರ್ವ ಸದಸ್ಯರು, ನಿವೃತ್ತ ಪ್ರಾಚಾರ್ಯ ಹಾಗೂ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಹೆಗಡೆ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ವಿ. ಭಟ್ಟ, ವಲಯ ಸಂಯೋಜಕ ಸತೀಶ ಮಡಿವಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಪಟಗಾರ, ವಲಯ ಸಂಪನ್ಮೂಲ ವ್ಯಕ್ತಿ ದೀಪಕ ಗೋಕರ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರ ಎನ್ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ ಪಿ. ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ತಹಶೀಲ್ದಾರ ಶ್ರೀಧರ ಮುಂದಲಮನಿ, ಡಯಟ್ ಪ್ರಾಚಾರ್ಯ ಎಂ. ಎಸ್. ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ಬೆಂಚಳ್ಳಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ. ವಿ. ಗಣೇಶ ಭಾಗವಹಿಸಲಿದ್ದಾರೆ.
ಸಂಜೆ 3:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಯಂಕ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಹೆಗಡೆ, ಗ್ರಾಪಂ ಸದಸ್ಯ ಗಣೇಶ ಎನ್.ಜೋಶಿ, ಊರ ನಾಗರಿಕ ಲೋಕೇಶ ಜಿ.ಭಟ್ಟ , ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ವಿಜಯಕುಮಾರ ಎಸ್.ರಾವ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಶರಾವತಿ ಚನ್ನಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಟಿ. ಭಟ್ಟ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಚಂದ್ರು ಎಂ.ಪೂಜಾರಿ, ಕೊರ್ಲಕಟ್ಟಾ ವಿಎಸ್‌ಎಸ್ ಸಂಘದ ಅಧ್ಯಕ್ಷ ಸುರೇಶ ಆರ್. ನಾಯ್ಕ, ಮಂಜುನಾಥ ಪೂಜಾರಿ, ವಿನುತಾ ವಿನೋದ ಶಾನಭಾಗ ಅವರು ಪಾಲ್ಗೊಳ್ಳಲಿದ್ದಾರೆ.
ನಂತರ ಚಿಣ್ಣರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳಿಂದ ಮನರಂಜನೆ, ನವೀನಕುಮಾರ ಸುಗಾವಿ ಅವರಿಂದ ಮಿಮಿಕ್ರಿ ನಂತರ ಮಾರುತಿ ಪ್ರತಾಪ ಯಕ್ಷಗಾನ ನಡೆಯಲಿದೆ.
ಇದೇ ಸಂದರ್ಭದಲ್ಲಿ ತಬಲಾ ವಾದಕ ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಅವರ ಸ್ಮರಣಾರ್ಥ ನೂತನ ರಂಗಮಂದಿರ ಹಾಗೂ ಕ್ರೀಡಾಂಗಣದ ಲೋಕಾರ್ಪಣೆಯೂ ಆಗಲಿದೆ. ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಯಂಕ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ