ವೀಡಿಯೊ : ಯಡವಟ್ಟಿನಿಂದ ಚಾಲಕನೇ ಇಲ್ಲದೆ ಗಂಟೆಗೆ 100 ಕಿಮೀ ವೇಗದಲ್ಲಿ 70 ಕಿಮೀ ದೂರ ಓಡಿದ ರೈಲು..: ಆಗಿದ್ದೇನೆಂದರೆ..| ವೀಕ್ಷಿಸಿ

ಜಮ್ಮು/ಚಂಡೀಗಢ : ಇಂದು, ಭಾನುವಾರ ಪಂಜಾಬ್‌ನಲ್ಲಿ ಗೂಡ್ಸ್ ರೈಲು ಚಾಲಕನಿಲ್ಲದೆ ಹಳಿಗಳ ಸುಮಾರು 70 ಕಿಲೋಮೀಟರ್‌ ಮೇಲೆ ಓಡಿದ ನಂತರ ಭಾರೀ ಅಪಘಾತ ತಪ್ಪಿಸಲಾಗಿದೆ, ಇದು ಕೆಲಕಾಲ ಆತಂಕವನ್ನು ಸೃಷ್ಟಿಗೆ ಕಾರಣವಾಗಿತ್ತು.
ಚಾಲಕ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಎಳೆಯಲು ಮರೆತಿದ್ದಾನೆ. ಅದು ಪಠಾಣಕೋಟ್ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಇದರಿಂದಾಗಿ ಅದು ಸ್ಲೋಪಿ ಹಳಿಗಳ ಮೇಲೆ ಚಲಿಸಲು ಪ್ರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲುಗಳನ್ನು ಹೊತ್ತುಕೊಂಡು ಗೂಡ್ಸ್ ರೈಲು ಉಚ್ಚಿ ಬಸ್ಸಿಯಲ್ಲಿ ನಿಲ್ಲಿಸುವ ಮೊದಲು ಗಂಟೆಗೆ 100 ಕಿಮೀ ವೇಗದಲ್ಲಿ ಸುಮಾರು ಐದು ನಿಲ್ದಾಣಗಳನ್ನು ದಾಟಿತ್ತು…! ರೈಲ್ವೇ ಅಧಿಕಾರಿಯೊಬ್ಬರು ರೈಲು ನಿಲ್ಲಿಸಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿದ ನಂತರ ರೈಲನ್ನು ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದಿಂದ ಪಂಜಾಬಿನ ಹೋಶಿಯಾರಪುರ ಜಿಲ್ಲೆಯ ಗ್ರಾಮವೊಂದಕ್ಕೆ ಚಾಲಕರಿಲ್ಲದೆ 70 ಕಿಲೋಮೀಟರ್‌ಗೂ ಹೆಚ್ಚು ದೂರದ ವರೆಗೆ ಡೀಸೆಲ್ ಎಂಜಿನ್ ಮೂಲಕ ಗುಡ್ಸ್‌ ರೈಲೊಂದು ಓಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ, ಬೆಳಿಗ್ಗೆ 7:25 ರಿಂದ 9 ರ ನಡುವೆ ನಡೆದ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು. ಚಿಪ್ ಕಲ್ಲುಗಳನ್ನು ತುಂಬಿದ 53 ವ್ಯಾಗನ್ ಇರುವ ರೈಲು ಜಮ್ಮುವಿನಿಂದ ಪಂಜಾಬ್‌ಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ಬದಲಾವಣೆಗಾಗಿ ಜಮ್ಮುವಿನ ಕಥುವಾ ರೈಲು ನಿಲ್ದಾಣದಲ್ಲಿ ರೈಲು ನಿಂತಿತ್ತು ಮತ್ತು ಜಮ್ಮು-ಜಲಂಧರ್ ವಿಭಾಗದಲ್ಲಿ ಇಳಿಜಾರಿನ ಗ್ರೇಡಿಯಂಟ್ ಟ್ರ್ಯಾಕ್ ಕೆಳಗೆ ಉರುಳಲು ಪ್ರಾರಂಭಿಸಿದೆ ಎಂದು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಉತ್ತರ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ; 16 ಕಡೆಗಳಲ್ಲಿ ಎನ್ಐಎ ದಾಳಿ

ಚಾಲಕರು ಲೊಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಸರಕು ರೈಲಿನಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ದಾರಿಯುದ್ದಕ್ಕೂ ವೇಗವನ್ನು ಪಡೆದುಕೊಂಡಿತು, ಅಂತಿಮವಾಗಿ ಪಂಜಾಬ್‌ನ ಉಂಚಿ ಬಸ್ಸಿ ರೈಲು ನಿಲ್ದಾಣದ ಬಳಿ ಕಡಿದಾದ ಇಳಿಜಾರಿನಲ್ಲಿ ನಿಂತಿತು ಎಂದು ಅವರು ಹೇಳಿದರು.
ಜಮ್ಮುವಿನ ವಿಭಾಗೀಯ ಟ್ರಾಫಿಕ್ ಮ್ಯಾನೇಜರ್ ಪ್ರತೀಕ ಶ್ರೀವಾಸ್ತವ ಅವರು “ಘಟನೆಯ ನಿಖರವಾದ ಕಾರಣ ತಿಳಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಮೇಲ್ನೋಟಕ್ಕೆ, ಚಾಲಕ ಮತ್ತು ಅವರ ಸಹಾಯಕರಿಲ್ಲದೆ ರೈಲು ಪಂಜಾಬ್ ಕಡೆಗೆ ಇಳಿಜಾರಿನ ಗ್ರೇಡಿಯಂಟ್ ಕೆಳಗೆ ಉರುಳಲು ಪ್ರಾರಂಭಿಸಿದೆ ಎಂದು ಹೇಳಿದರು. 70 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸಿದ ನಂತರ ಉಂಚಿ ಬಸ್ಸಿ ಬಳಿ ರೈಲು ನಿಂತಿತು ಎಂದು ಅವರು ಹೇಳಿದರು. ಮರಳಿನ ಚೀಲಗಳ ಸಹಾಯದಿಂದ ರೈಲನ್ನು ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲನ್ನು ಕಥುವಾದಲ್ಲಿ ಡೌನ್ ಗ್ರೇಡಿಯಂಟ್‌ನಲ್ಲಿ ಸರಿಯಾಗಿ “ಭದ್ರಪಡಿಸಲಾಗಿದೆಯೇ” ಎಂಬುದು ತನಿಖೆಯ ವಿಷಯವಾಗಿದೆ ಎಂದು ವಕ್ತಾರರು ಹೇಳಿದರು ಮತ್ತು ಆಳವಾದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಮಾರ್ಗದುದ್ದಕ್ಕೂ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಲರ್ಟ್ ಮಾಡಲಾಗಿದೆ. ಚಾಕನಿಲ್ಲದೆ ಓಡಿದ ರೈಲಿನ ಬಗ್ಗೆ ಮಾಹಿತಿ ಪಡೆದ ನಂತರ ಜಲಂಧರ-ಪಠಾಣಕೋಟ್ ವಿಭಾಗದ ಎಲ್ಲಾ ರೈಲು-ರಸ್ತೆ ಕ್ರಾಸಿಂಗ್‌ಗಳನ್ನು ಸುರಕ್ಷಿತಗೊಳಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಲಂಧರ್) ಸಬ್-ಇನ್‌ಸ್ಪೆಕ್ಟರ್ ಅಶೋಕಕುಮಾರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೃಷ್ಣಾ ನದಿಯಲ್ಲಿ ಮುಳುಗಿಸಿ ವ್ಯಕ್ತಿ ಕೊಲೆ ಪ್ರಕರಣವನ್ನು 1 ವರ್ಷದ ನಂತರ ಭೇದಿಸಿದ ಪೊಲೀಸರು : ಪತ್ನಿ ಸೇರಿ ಮೂವರು ಅರೆಸ್ಟ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement