ಶ್ರೇಯಸ್ ಅಯ್ಯರ್, ಇಶಾನ ಕಿಶನ್ ಮಾತ್ರವಲ್ಲದೆ ಇನ್ನೂ 4 ಅನುಭವಿ ಆಟಗಾರರು ಬಿಸಿಸಿಐ ಒಪ್ಪಂದದ ಪಟ್ಟಿಯಿಂದ ಹೊರಕ್ಕೆ…!

ನವದೆಹಲಿ : ರಣಜಿ ಟ್ರೋಫಿ ಆಡಬೇಕೆಂಬ ನಿರ್ದೇಶನವನ್ನು ನಿರ್ಲಕ್ಷಿಸಿದ ನಂತರ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಈ ವರ್ಷಕ್ಕೆ ಬಿಸಿಸಿಐ ತನ್ನ ಕೇಂದ್ರೀಯ ಒಪ್ಪಂದದಿಂದ ಹೊರಗಿಟ್ಟಿದೆ. ಆದರೆ ನಾಯಕ ರೋಹಿತ ಶರ್ಮಾ ಮತ್ತು ವಿರಾಟ ಕೊಹ್ಲಿ ಅವರನ್ನು ಬಿಸಿಸಿಐ ತನ್ನ ಕೇಂದ್ರೀಯ ಒಪ್ಪಂದದ ಅಗ್ರ ಬ್ರಾಕೆಟ್‌ನಲ್ಲಿ ಮುಂದುವರಿಸಿದೆ.
25ರ ಹರೆಯದ ಇಶಾಂತ ಕಿಶನ್ ವೈಯಕ್ತಿಕ ಕಾರಣಗಳಿಂದಾಗಿ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ನಿರ್ಗಮಿಸಿದ ನಂತರ ರಾಷ್ಟ್ರೀಯ ತಂಡದಲ್ಲಿ ಆಡದಿದ್ದರೂ ರಣಜಿ ಟ್ರೋಫಿಯಲ್ಲಿ ತಂಡದಲ್ಲಿ ಜಾರ್ಖಂಡ್‌ ಪರವಾಗಿ ತಂಡದಲ್ಲಿ ಇರಲಿಲ್ಲ. ಬದಲಿಗೆ ಮುಂದಿನ ತಿಂಗಳು ಐಪಿಎಲ್‌ಗೆ ತಯಾರಿ ನಡೆಸುವುದರತ್ತ ಗಮನ ಹರಿಸಿದ್ದಾರೆ.
ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ನಂತರ ಭಾರತೀಯ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಶ್ರೇಯಸ್‌ ಅಯ್ಯರ್ ಕೂಡ ಬರೋಡಾ ವಿರುದ್ಧ ಮುಂಬೈನ ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೆ ಆಡಲು ಲಭ್ಯ ಇರಲಿಲ್ಲ. ಆದಾಗ್ಯೂ, ಮಾರ್ಚ್ 2 ರಿಂದ ಪ್ರಾರಂಭವಾಗುವ ರಣಜಿ ಸೆಮಿಫೈನಲ್‌ಗೆ ಅವರನ್ನು ಆಯ್ಕೆ ಮಾಡಲಾಗಿದೆ.
2023-24ರ ಕೇಂದ್ರೀಯ ಒಪ್ಪಂದಗಳನ್ನು ಘೋಷಿಸುವಾಗ, ಬಿಸಿಸಿಐ ಮತ್ತೊಮ್ಮೆ ಅಖಿಲ ಭಾರತ ಕ್ರಿಕೆಟಿಗರಿಗೆ ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದಾಗ ದೇಶೀಯ ಪಂದ್ಯಗಳನ್ನು ಆಡುವಂತೆ ಸಲಹೆ ನೀಡಿದೆ. ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ಕ್ರೀಡಾಪಟುಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಆದ್ಯತೆ ನೀಡುವಂತೆ ಬಿಸಿಸಿಐ ಶಿಫಾರಸು ಮಾಡಿದೆ” ಎಂದು ಮಂಡಳಿ ಹೇಳಿದೆ.

ವೈಟ್-ಬಾಲ್ ವೈಭವ ಮತ್ತು ಲಾಭದಾಯಕ ಐಪಿಎಲ್ ಒಪ್ಪಂದಗಳ ಹಿಂದೆ ಬಿದ್ದಿರುವ, ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಠಿಣ ಅಂಕಣದಲ್ಲಿ ಆಡಲು ಇಷ್ಟಪಡದ ಯುವ ಆಟಗಾರರಿಗೆ ಅವರನ್ನು ಕೇಂದ್ರೀಯ ಒಪ್ಪಂದಿಂದ ಬಿಸಿಸಿಐ ಹೊರಗಿಡುವ ಮೂಲಕ ಕಠಿಣ ಸಂದೇಶ ನೀಡಿದೆ.
ಬಿಸಿಸಿಐ ಕೇಂದ್ರೀಯ ಒಪ್ಪಂದದಂತೆ ರೋಹಿತ್ ಶರ್ಮಾ, ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಎ ಪ್ಲಸ್ ವಿಭಾಗದಲ್ಲಿ ಉಳಿಸಿಕೊಳ್ಳಲಾಗಿದೆ, ಇದು ಬಿಸಿಸಿಐನ ಕೇಂದ್ರ ಒಪ್ಪಂದಗಳ ಪಟ್ಟಿಯ ಅತ್ಯುನ್ನತ ಶ್ರೇಣಿಯಾಗಿದೆ.
ಹಿರಿಯ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಸೇರಿದಂತೆ ಆರು ಕ್ರಿಕೆಟಿಗರು A ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ, ಅಶ್ವಿನ್‌ ಅವರು ಮುಂದಿನ ವಾರ ತಮ್ಮ 100 ನೇ ಟೆಸ್ಟ್ ಅನ್ನು ಆಡಲಿದ್ದಾರೆ, ಭಾರತವು ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಅಶ್ವಿನ್ ಇತ್ತೀಚೆಗೆ ಮಾಜಿ ನಾಯಕ ಅನಿಲ್ ಕುಂಬ್ಳೆ ನಂತರ ಟೆಸ್ಟ್‌ನಲ್ಲಿ 500 ವಿಕೆಟ್‌ಗಳನ್ನು ದಾಟಿದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರದ ಬಳಿ ತಮ್ಮದೇ ಬಂದೂಕಿನ ಗುಂಡು ತಗುಲಿ ಭದ್ರತಾ ಸಿಬ್ಬಂದಿ ಸಾವು

ಉಳಿದಂತೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಎ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಬಿ ಕೆಟಗರಿಯಲ್ಲಿದ್ದ ಸಿರಾಜ್ ಬಡ್ತಿ ಪಡೆದಿದ್ದು, ಅಕ್ಷರ್ ಪಟೇಲ್ ಎ ನಿಂದ ಬಿ ಕೆಟಗರಿಗೆ ಇಳಿದಿದ್ದಾರೆ. ಬಿ ಕೆಟಗರಿಯಲ್ಲಿರುವ ಇತರರೆಂದರೆ ಸೂರ್ಯಕುಮಾರ ಯಾದವ್, ಕುಲದೀಪ ಯಾದವ್, ರಿಷಭ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಆಗಿದ್ದಾರೆ. ಪಂತ್ ಕಳೆದ ವರ್ಷ ಎ ವಿಭಾಗದಲ್ಲಿದ್ದರು ಆದರೆ ಡಿಸೆಂಬರ್ 2022 ರಲ್ಲಿ ಅವರ ಭೀಕರ ಅಪಘಾತದ ನಂತರ ಯಾವುದೇ ಕ್ರಿಕೆಟ್ ಆಡದ ಕಾರಣ ಇತ್ತೀಚಿನ ಒಪ್ಪಂದಗಳಲ್ಲಿ ಬಿ ಕೆಟಗರಿಯಲ್ಲಿದ್ದಾರೆ.
ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ ಶರ್ಮಾ, ವಾಷಿಂಗ್ಟನ್ ಸುಂದರ, ಮುಖೇಶಕುಮಾರ, ಸಂಜು ಸ್ಯಾಮ್ಸನ್, ಅರ್ಷದೀಪ ಸಿಂಗ್, ಕೆಎಸ್ ಭರತ, ಪ್ರಸಿದ್ಧ ಕೃಷ್ಣ, ಅವೇಶ ಖಾನ್‌ ಮತ್ತು ರಜತ್ ಪಾಟಿದಾರ್ ಸೇರಿದಂತೆ 15 ಮಂದಿಗೆ ಸಿ ಕೆಟಗರಿ ಗುತ್ತಿಗೆ ನೀಡಲಾಗಿದೆ. .
ನಿಗದಿತ ಅವಧಿಯೊಳಗೆ ಕನಿಷ್ಠ ಮೂರು ಟೆಸ್ಟ್‌ಗಳು ಅಥವಾ ಎಂಟು ಏಕದಿನದ ಪಂದ್ಯಗಳು ಅಥವಾ 10 T20 ಪಂದ್ಯಗಳನ್ನು ಆಡುವ ಕ್ರಿಕೆಟಿಗರನ್ನು ಸ್ವಯಂಚಾಲಿತವಾಗಿ ಅನುಪಾತದ ಆಧಾರದ ಮೇಲೆ ಗ್ರೇಡ್ ಸಿಗೆ ಸೇರಿಸಲಾಗುತ್ತದೆ.
ಉದಾಹರಣೆಗೆ, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಲ್ಲಿಯವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅವರು ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾಗವಹಿಸಿದ ನಂತರ ಗ್ರೇಡ್ ಸಿ ಕೆಟಗರಿಗೆ ಸೇರ್ಪಡೆಗೊಳ್ಳುತ್ತಾರೆ.
ತಮ್ಮ ಒಪ್ಪಂದಗಳನ್ನು ಕಳೆದುಕೊಂಡಿರುವ ದೊಡ್ಡ ಹೆಸರುಗಳಲ್ಲಿ ಚೇತೇಶ್ವರ ಪೂಜಾರ, ಶಿಖರ ಧವನ್, ಉಮೇಶ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಸೇರಿದ್ದಾರೆ.

ಇದು ಪೂಜಾರ ಅವರಂತಹವರಿಗೆ ಕ್ರಿಕೆಟ್‌ ದಾರಿಯ ಅಂತ್ಯವನ್ನು ಸೂಚಿಸುತ್ತದೆ. ಆದರೆ 33 ವರ್ಷದ ಚಹಾಲ್ ಅವರು ಇನ್ನೂ ಹೆಚ್ಚಿನ ಆಟಗಳನ್ನು ಆಡಿದರೆ ಒಪ್ಪಂದಕ್ಕೆ ಸೇರ್ಪಡೆಯಾಗಬಹುದು.
ಆಯ್ಕೆ ಸಮಿತಿಯು ಆಕಾಶ ದೀಪ, ವಿಜಯಕುಮಾರ ವೈಶಾಕ, ಉಮ್ರಾನ್ ಮಲಿಕ್, ಯಶ ದಯಾಳ ಮತ್ತು ವಿದ್ವತ್ ಕಾವೇರಪ್ಪ ಅವರಿಗೆ ವೇಗದ ಬೌಲಿಂಗ್ ಗುತ್ತಿಗೆಯನ್ನು ಶಿಫಾರಸು ಮಾಡಿದೆ. ಈ ವ್ಯವಸ್ಥೆಯು 2021-22 ರಿಂದ ಜಾರಿಯಲ್ಲಿದೆ ಆದರೆ ಇದೇ ಮೊದಲ ಬಾರಿಗೆ ಬಿಸಿಸಿಐ ಆಯ್ಕೆಯಾದ ಆಟಗಾರರ ಹೆಸರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಕಾಶ ದೀಪ ಚೊಚ್ಚಲ ಪಂದ್ಯವನ್ನಾಡಿದ್ದು, ಭಾರತ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು.
ನಿಯಮಾವಳಿಗಳಿಂದ ಹೊರಗುಳಿದಿರುವ ಬಿಸಿಸಿಐ ಈ ಬಾರಿ ನಾಲ್ಕು ವಿಭಾಗಗಳ ಆಟಗಾರರ ಸಂಭಾವನೆಯನ್ನು ಉಲ್ಲೇಖಿಸಿಲ್ಲ.
ಕ್ರಿಕೆಟಿಗರಿಗೆ ಸಾಮಾನ್ಯವಾಗಿ ಎ ಪ್ಲಸ್ ಬ್ರಾಕೆಟ್‌ನಲ್ಲಿ ವಾರ್ಷಿಕ 7 ಕೋಟಿ ರೂ., ಎಯಲ್ಲಿ 5 ಕೋಟಿ, ಬಿಯಲ್ಲಿ 3 ಕೋಟಿ ರೂ. ಮತ್ತು ಸಿ ಕೆಟಗರಿಯಲ್ಲಿ ಒಂದು ಕೋಟಿ ರೂ., ಅವರ ಪಂದ್ಯದ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ಜೂನ್ 18ರಂದು ನಡೆದ ಯುಜಿಸಿ-ನೆಟ್ ಪರೀಕ್ಷೆ ರದ್ದುಗೊಳಿಸಿದ ಸರ್ಕಾರ : ಸಿಬಿಐ ತನಿಖೆಗೆ ಆದೇಶ

2023-24ರ ಕೇಂದ್ರ ಒಪ್ಪಂದಗಳು: ಗ್ರೇಡ್ A+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ: ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ: ಸೂರ್ಯಕುಮಾರ ಯಾದವ್, ರಿಷಭ ಪಂತ್, ಕುಲದೀಪ ಯಾದವ್, ಅಕ್ಷರ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ: ರಿಂಕು ಸಿಂಗ್, ತಿಲಕ ವರ್ಮಾ, ರುತುರಾಜ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ ಶರ್ಮಾ, ವಾಷಿಂಗ್ಟನ್ ಸುಂದರ, ಮುಖೇಶಕುಮಾರ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್. ಭರತ, ಪ್ರಸಿದ್ಧಕೃಷ್ಣ, ಅವೇಶ್ ಖಾನ್ ಮತ್ತು ರಜತ ಪಾಟಿದಾರ್.
ವೇಗದ ಬೌಲಿಂಗ್ ಒಪ್ಪಂದಗಳು: ಆಕಾಶ ದೀಪ, ವಿಜಯಕುಮಾರ ವೈಶಾಕ, ಉಮ್ರಾನ್ ಮಲಿಕ್, ಯಶ ದಯಾಳ ಮತ್ತು ವಿದ್ವತ್ ಕಾವೇರಪ್ಪ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement