ಜೆರುಸಲೇಂ: ಲೆಬನಾನ್‌ನಿಂದ ಉಡಾವಣೆಯಾದ ಟ್ಯಾಂಕ್ ವಿರೋಧಿ ಕ್ಷಿಪಣಿ ಇಸ್ರೇಲ್‌ನ ಉತ್ತರ ಗಡಿ ವಸತಿ ಪ್ರದೇಶವಾದ ಮಾರ್ಗಲಿಯೊಟ್ ಬಳಿಯ ಹಣ್ಣಿನ ತೋಟಕ್ಕೆ ಸೋಮವಾರ ಅಪ್ಪಳಿಸಿದಾಗ ಭಾರತೀಯ ಪ್ರಜೆಯೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಕೇರಳ ರಾಜ್ಯದವರು ಎಂದು ಹೇಳಲಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ಎಂಬ ತೋಟದಲ್ಲಿ ಕ್ಷಿಪಣಿ ಅಪ್ಪಳಿಸಿತು ಎಂದು ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ಝಕಿ ಹೆಲ್ಲರ್ ತಿಳಿಸಿದರು.
ದಾಳಿಯಲ್ಲಿ ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್‌ವೆಲ್ ಎಂಬವರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅದು ಹೇಳಿದೆ.
ದಾಳಿಯಲ್ಲಿ ಒಬ್ಬ ವಿದೇಶಿ ಉದ್ಯೋಗಿ ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಎಂಡಿಎ ಈ ಹಿಂದೆ ಹೇಳಿತ್ತು.
ಈ ದಾಳಿಯನ್ನು ಲೆಬನಾನ್‌ನ ಶಿಯಾ ಹೆಜ್ಬೊಲ್ಲಾ ಬಣ ನಡೆಸಿದೆ ಎಂದು ನಂಬಲಾಗಿದೆ, ಇದು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಹಮಾಸ್‌ಗೆ ಬೆಂಬಲವಾಗಿ ಅಕ್ಟೋಬರ್ 8 ರಿಂದ ಉತ್ತರ ಇಸ್ರೇಲ್‌ನಲ್ಲಿ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದೆ.
ದಾಳಿಯಲ್ಲಿ ಏಳು ವಿದೇಶಿ ಕಾರ್ಮಿಕರು ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರಿಗೆ ಗಂಭೀರವಾಗಿದೆ ಮತ್ತು ಅವರನ್ನು ಆಂಬ್ಯುಲೆನ್ಸ್‌ಗಳು ಮತ್ತು ಇಸ್ರೇಲಿ ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿ ಬೈಲಿನ್ಸನ್, ರಾಂಬಮ್ ಮತ್ತು ಝಿವ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು MDA ತಿಳಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಸೋಮವಾರ ಅವರು ಉಡಾವಣಾ ಸ್ಥಳವನ್ನು ಫಿರಂಗಿಗಳೊಂದಿಗೆ ಶೆಲ್ ದಾಳಿ ನಡೆಸುವ ಮೂಲಕ ಪ್ರತಿಕ್ರಿಯಿಸಿದೆ ಎಂದು ಹೇಳಿದೆ.
ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಚಕಮಕಿಗಳು ಇಸ್ರೇಲಿ ಕಡೆಯಿಂದ ಏಳು ನಾಗರಿಕರು ಮತ್ತು 10 IDF ಸೈನಿಕರ ಸಾವಿಗೆ ಕಾರಣವಾಗಿವೆ. ಇದೇವೇಳೆ ಇಸ್ರೇಲ್ ಪ್ರತಿದಾಳಿಯಲ್ಲಿ 229 ಹಿಜ್ಬುಲ್ಲಾಗಳು ಸಾವಿಗೀಡಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ