ವೀಡಿಯೊ…| ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿ ವಿವಾದ ಸೃಷ್ಟಿಸಿದ ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್

ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್ ಲೈವ್ ಕಾರ್ಯಕ್ರಮದಲ್ಲಿ ‘ಅಸಮರ್ಪಕ ನಡತೆ’ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ವಿವಾದ ಸೃಷ್ಟಿಸಿದೆ.
ಲೈವ್‌ ಕಾರ್ಯಕ್ರಮದ ದೃಶ್ಯಾವಳಿಗಳು ಪುರುಷ ರೋಬೋಟ್, ಮಹಿಳಾ ವರದಿಗಾರ್ತಿ ಕಡೆಗೆ ತನ್ನ ಕೈಯನ್ನು ಚಾಚುವುದನ್ನು ಮತ್ತು ಅನುಚಿತವಾಗಿ ವರದಿಗಾರ್ತಿಯನ್ನು  ಸ್ಪರ್ಷಿಸುವುದನ್ನು ಚಿತ್ರಿಸಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿತು, ಅನೇಕರು ರೋಬೋಟ್‌ನ ನಡವಳಿಕೆಯ ಸೂಕ್ತತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಮಾರ್ಚ್ 4 ರಂದು ರಿಯಾದ್‌ನಲ್ಲಿನ ಡೀಪ್‌ಫೆಸ್ಟ್‌ನಲ್ಲಿ ರೋಬೋಟ್‌ನ ಉದ್ಘಾಟನೆಯ ಸಾರ್ವಜನಿಕ ಪ್ರದರ್ಶನದ ಸಮಯದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಇದನ್ನು ನಂತರ ಎಕ್ಸ್‌ನಲ್ಲಿ ಮೇಘ್ ಅಪ್‌ಡೇಟ್ಸ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.

ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ನೇರ ಸಂದರ್ಶನದಲ್ಲಿ ರೋಬೋಟ್ ಮಹಿಳಾ ವರದಿಗಾರ್ತಿಗೆ ಕಿರುಕುಳ ನೀಡುತ್ತಿದೆ ಎಂದು ವೀಕ್ಷಕರು ಆರೋಪಿಸಿದ ನಂತರ ವಿವಾದದ ರೂಪ ಪಡೆಯಿತು. ಒಬ್ಬ ಬಳಕೆದಾರನು “ಕೋಡೆಡ್ ಟು ಬಿ ಎ ಕ್ರೀಪ್” ಎಂದು ಹೇಳಿದರೆ, ಇತರರು ಇದನ್ನು “ವುಮನೈಸರ್ ರೋಬೋಟ್” ಮತ್ತು “ಪರ್ವರ್ಟ್ ರೋಬೋಟ್” ಎಂದು ಲೇಬಲ್ ಮಾಡಿದ್ದಾರೆ. ಇನ್ನೊಬ್ಬರು “ಪ್ರದರ್ಶನಕ್ಕಾಗಿ AI ಅನ್ನು ಯಾರು ತರಬೇತಿ ನೀಡಿದರು?” ಎಂದು ಪ್ರಶ್ನಿಸಿದ್ದಾರೆ.

ಟೀಕೆಗಳ ಹೊರತಾಗಿಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ರೋಬೋಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ, ಘಟನೆಯು ಉದ್ದೇಶಪೂರ್ವಕ ಅನುಚಿತ ವರ್ತನೆಗೆ ಬದಲಾಗಿ ಪ್ರೋಗ್ರಾಮಿಂಗ್ ನಿರ್ಧಾರ ಅಥವಾ ಅಸಮರ್ಪಕ ಕ್ರಿಯೆಗೆ ಸಂಬಂಧಿಸಿರಬಹುದು ಎಂದು ಸೂಚಿಸುತ್ತದೆ. “ಇದು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. “ಬ್ಯಾಕೆಂಡ್ ಡೆವಲಪರ್‌ಗಳಿಗೆ ಕೆಲಸ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಸೌದಿ ಅರೇಬಿಯಾದ ಪ್ರಗತಿಯನ್ನು ಪ್ರದರ್ಶಿಸಲು ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿ ಕ್ಯೂಎಸ್ಎಸ್ ಸಿಸ್ಟಮ್ಸ್ ರೋಬೋಟ್ ಅನ್ನು ಮುಹಮ್ಮದ್ ಎಂದು ಹೆಸರಿಸಿದೆ. ಡೀಪ್‌ಫೆಸ್ಟ್‌ನಲ್ಲಿ ಪರಿಚಯಿಸಿದ ಸಂದರ್ಭದಲ್ಲಿ, ಸೌದಿ ಅರೇಬಿಯಾ-ನಿರ್ಮಿತ ಮೊದಲ ದ್ವಿಭಾಷಾ ಪುರುಷ ಹುಮನಾಯ್ಡ್ ರೋಬೋಟ್ ಮುಹಮ್ಮದ್, “ನಾನು ಮುಹಮ್ಮದ್, ಮನುಷ್ಯನ ರೂಪದಲ್ಲಿ ಸೌದಿಯ ಮೊದಲ ರೋಬೋಟ್. ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ನಮ್ಮ ಸಾಧನೆಗಳನ್ನು ಪ್ರದರ್ಶಿಸಲು ರಾಷ್ಟ್ರೀಯ ಯೋಜನೆಯಾಗಿ ಸೌದಿ ಅರೇಬಿಯಾದಲ್ಲಿ ನನ್ನನ್ನು ತಯಾರಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement