ರಾಮನಗರ : ತೋಟದ ಮನೆಯಲ್ಲಿ ಮಾನವನ ಬುರುಡೆಗಳು ಪತ್ತೆ…!

ರಾಮನಗರ: ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 20ಕ್ಕೂ ಹೆಚ್ಚು ಮನುಷ್ಯರ ತಲೆ ಬುರುಡೆಗಳು ಸೋಮವಾರ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮನುಷ್ಯನ ತಲೆ ಬುರುಡೆಗಳನ್ನು ಸಂಗ್ರಹಿಸಿರುವ ಆರೋಪದ ಮೇಲೆ ಬಲರಾಮ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಈತ ಮಾಟ-ಮಂತ್ರ ಮಾಡುವ ಜೊತೆಗೆ, ರಾತ್ರಿ ಸ್ಮಶಾನದಲ್ಲಿ ಬುರುಡೆ ಪೂಜೆ ಮಾಡುತ್ತಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ತೋಟದ ಮನೆಗೆ ಭೇಟಿ ನೀಡಿದಾಗ, ಬುರುಡೆಗಳು ಹಾಗೂ ಮೂಳೆಗಳು ಪತ್ತೆಯಾಗಿದ್ದು, ಭದ್ರಕಾಳಿ ಫೋಟೊ, ಹೋಮಕುಂಡದ ಸುತ್ತ ಬುರುಡೆಗಳನ್ನು ಜೋಡಿಸಿ ಪೂಜೆ ಮಾಡಲಾಗಿದೆ. ಬಲರಾಮ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ಕೆಲ ವರ್ಷಗಳಿಂದ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ ಎನ್ನಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement