ವೀಡಿಯೊ…| ಮಂಗಳೂರು : 87 ವರ್ಷದ ಮಾವನನ್ನು ವಾಕಿಂಗ್ ಸ್ಟಿಕ್‌ನಿಂದ ಅಮಾನುಷವಾಗಿ ಥಳಿಸಿದ ಸೊಸೆ ; ಬಂಧನ

ಮಂಗಳೂರು: ಸೊಸೆ ತಮ್ಮ ವಯೋವೃದ್ಧ ಮಾವನನ್ನು ವಾಕಿಂಗ್ ಸ್ಟಿಕ್‌ನಿಂದ ಅಮಾನುಷವಾಗಿ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ವೀಡಿಯೊ ವೈರಲ್ ಆಗಿದೆ.
ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ದೃಶ್ಯಾವಳಿಗಳು ವೇಗವಾಗಿ ವೈರಲ್ ಆಗಿದ್ದು, ಮಂಗಳೂರಿನ ನಾಗರಿಕ ಸಮಾಜದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ ಮತ್ತು ಇಂತಹ ಘಟನೆಗಳಲ್ಲಿ ಅಗತ್ಯ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯಲ್ಲಿ ಮಂಗಳೂರಿನ ಕುಲಶೇಖರ ಎಂಬಲ್ಲಿ ಪದ್ಮನಾಭ ಸುವರ್ಣ ಎಂಬ 87 ವರ್ಷದ ವ್ಯಕ್ತಿಗೆ ಸೊಸೆ ಉಮಾ ಶಂಕರಿ ಎಂಬವರು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಮಾರ್ಚ್ 9 ರಂದು ಘಟನೆ ನಡೆದಿದ್ದು, ಸ್ಟೀಲ್‌ ವಾಕಿಂಗ್ ಸ್ಟಿಕ್ ನಲ್ಲಿ ಥಳಿಸಿರುವುದರಿಂದ ಮಂಗಳೂರು ನಿವಾಸಿ ಪದ್ಮನಾಭ ಸುವರ್ಣ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಮಗಳು ನೀಡಿದ ದೂರಿನ ಮೇರೆಗೆ ಅತ್ತಾವರದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ (ಕೆಇಬಿ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಉಮಾ ಶಂಕರಿ ಅವರನ್ನು ಬಂಧಿಸಲಾಗಿದೆ. ವೃದ್ಧರ ಪುತ್ರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅರಳು ಹುರಿದಂತೆ ಪಟಪಟನೆ ಕನ್ನಡದಲ್ಲಿ ಮಾತನಾಡುವ ಜರ್ಮನಿ ಯುವತಿ...!

ಹಲ್ಲೆ ಮಾಡಿದ ವೇಳೆ ಕೆಳಗೆ ಬಿದ್ದಾಗ ತಲೆಗೆ ಗಾಯ ಸೇರಿದಂತೆ ಸಂತ್ರಸ್ತರ ದೇಹದ ಮೇಲೆ ಅನೇಕ ಗಾಯಗಳಿವೆ ಎಂದು ಪದ್ಮನಾಭ ಸುವರ್ಣ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಸ್ಥಳೀಯ ಸಮುದಾಯ ಆಘಾತಗೊಂಡಿದೆ, ವಯಸ್ಸಾದವರ ಯೋಗಕ್ಷೇಮದ ಬಗ್ಗೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ಕಠಿಣ ಕ್ರಮಗಳ ಅಗತ್ಯತೆ ಬಗ್ಗೆ ಅನೇಕರು ಒತ್ತಿ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement