ಚುನಾವಣಾ ಬಾಂಡ್‌ಗಳು : ಲಾಟರಿಯಿಂದ ಮಿಲ್ಕ್‌ ಶೇಕ್ ಸಂಸ್ಥೆಗಳ ವರೆಗೆ ಟಾಪ್ 20 ದಾನಿಗಳ ಪಟ್ಟಿ…

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರ್ಚ್ 14 ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅತಿದೊಡ್ಡ ದಾನಿಗಳು ಚುನಾವಣಾ ಬಾಂಡ್‌ಗಳ ಮೂಲಕ ವಿವಿಧ ಪಕ್ಷಗಳಿಗೆ ಸುಮಾರು 6,000 ಕೋಟಿ ರೂ.ಗಳನ್ನು ನೀಡಿದ್ದಾರೆ.
ಇದರಲ್ಲಿ ಅಗ್ರ 20 ದಾನಿಗಳು ಏಪ್ರಿಲ್ 2019 ಮತ್ತು ಜನವರಿ 2024 ರ ನಡುವೆ ₹ 5,420.30 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿದ್ದಾರೆ. ಈ 20 ದಾನಿಗಳು 44.59% ರಷ್ಟು ಚುನಾವಣಾ ಬಾಂಡ್‌ಗಳನ್ನು ಹೊಂದಿದ್ದಾರೆ. ಫ್ಯೂಚರ್ ಗೇಮಿಂಗ್, ಮೇಘಾ ಇಂಜಿನಿಯರಿಂಗ್ ಮತ್ತು ಕ್ವಿಕ್‌ಸಪ್ಲೈಚೈನ್ ಪ್ರೈವೇಟ್ ಲಿಮಿಟೆಡ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿವೆ.

ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಲಾಟರಿ ಸಂಸ್ಥೆ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್‌ (Future Gaming and Hotel Services), ಇದು 1,368 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಎರಡನೇ ಸ್ಥಾನದಲ್ಲಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಇದ್ದು, ಅದು 966 ಕೋಟಿ ರೂ.ಗಳ ದೇಣಿಗೆ ನೀಡಿದೆ.
ಟಾಪ್ 20 ದಾನಿಗಳ ಪಟ್ಟಿಯಲ್ಲಿ ಕೆಲವು ದೊಡ್ಡ ಹೆಸರುಗಳು ವೇದಾಂತ ( 401 ಕೋಟಿ), ಎಸ್ಸೆಲ್ ಮೈನಿಂಗ್ ಮತ್ತು ಇಂಡಸ್ಟ್ರೀಸ್ ( 225 ಕೋಟಿ), ಮತ್ತು ಭಾರ್ತಿ ಏರ್‌ಟೆಲ್ ( 198 ಕೋಟಿ ರೂ.ಗಳು) ಸೇರಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದತ್ತಾಂಶವು ಏಪ್ರಿಲ್ 12, 2019 ಮತ್ತು ಫೆಬ್ರವರಿ 15, 2024 ರ ನಡುವೆ ಖರೀದಿಸಿದ ಮತ್ತು ರಿಡೀಮ್ ಮಾಡಿದ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದೆ ಎಂದು ಹೇಳಿದೆ. ಈ ಅವಧಿಯಲ್ಲಿ ಒಟ್ಟು 22,217 ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂದು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

ಅಗ್ರ 20 ದಾನಿಗಳ ಪಟ್ಟಿ….
1. ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ – ₹ 1,368 ಕೋಟಿ
2. ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ – ₹ 966 ಕೋಟಿ
3. ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ – ₹ 410 ಕೋಟಿ
4. ವೇದಾಂತ ಲಿಮಿಟೆಡ್ – ₹ 400 ಕೋಟಿ
5. ಹಲ್ದಿಯಾ ಎನರ್ಜಿ ಲಿಮಿಟೆಡ್ – ₹ 377 ಕೋಟಿ
6. ಭಾರ್ತಿ ಗ್ರೂಪ್ – ₹ 247 ಕೋಟಿ
7. ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ – ₹ 224 ಕೋಟಿ
8. ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ – ₹ 220 ಕೋಟಿ
9. ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ – ₹ 195 ಕೋಟಿ
10. ಮದನ್‌ಲಾಲ್ ಲಿಮಿಟೆಡ್ – ₹ 185 ಕೋಟಿ
11. ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ₹ 162 ಕೋಟಿ
12. ಉತ್ಕಲ್ ಅಲ್ಯುಮಿನಾ ಇಂಟರ್ನ್ಯಾಷನಲ್ ಲಿಮಿಟೆಡ್ – ₹ 135.3 ಕೋಟಿ
13. ಡಿಎಲ್‌ಎಫ್‌(DLF) ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್- ₹ 130 ಕೋಟಿ
14. ಎಂಕೆಜೆ (MKJ) ಎಂಟರ್‌ಪ್ರೈಸಸ್ ಲಿಮಿಟೆಡ್- ₹ 128.35 ಕೋಟಿ
15. ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್- ₹ 123 ಕೋಟಿ
16. ಬಿ ಜಿ ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್- ₹ 117 ಕೋಟಿ
17. ಧಾರಿವಾಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್- ₹ 115 ಕೋಟಿ
18. ಅವೀಸ್‌ (AVEES) ಟ್ರೇಡಿಂಗ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್-₹113 ಕೋಟಿ
19. ಟೊರೆಂಟ್ ಪವರ್ ಲಿಮಿಟೆಡ್-₹107 ಕೋಟಿ
20.. ಚೆನ್ನೈ ಗ್ರೀನ್ ವುಡ್ಸ್ ಪ್ರೈವೇಟ್ ಲಿಮಿಟೆಡ್- ₹ 105 ಕೋಟಿ ಹಾಗೂ ಬಿರ್ಲಾ ಕಾರ್ಬನ್- ₹ 105 ಕೋಟಿ

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

 

 

 

 

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement