ಚುನಾವಣಾ ಬಾಂಡ್ ಮೂಲಕ ಅತಿಹೆಚ್ಚು ಹಣ ಸ್ವೀಕರಿಸಿದ ಪಕ್ಷ ಬಿಜೆಪಿ ; ಅತಿಹೆಚ್ಚು ದಾನ ನೀಡಿದ ಫ್ಯೂಚರ್ ಗೇಮಿಂಗ್ ನಿಂದ ಡಿಎಂಕೆಗೆ ಸಿಂಹಪಾಲು : ಎಷ್ಟು ಗೊತ್ತೆ..?

ನವದೆಹಲಿ : ಚುನಾವಣಾ ಬಾಂಡ್‌ಗಳನ್ನು 2018 ರಲ್ಲಿ ಪರಿಚಯಿಸಿದಾಗಿನಿಂದ ಈ ಬಾಂಡ್‌ಗಳ ಮೂಲಕ ಗರಿಷ್ಠ ಹಣ 6,986.5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್-1,397 ಕೋಟಿ ರೂ., ಕಾಂಗ್ರೆಸ್ -1,334 ಕೋಟಿ ರೂ. ಮತ್ತು ಬಿಆರ್‌ಎಸ್ 1,322 ಕೋಟಿ ರೂ. ಹಣ ಸ್ವೀಕರಿಸಿದೆ. ಚುನಾವಣಾ ಬಾಂಡ್‌ಗಳ ಅಗ್ರ ಖರೀದಿದಾರರಾದ ಫ್ಯೂಚರ್ … Continued

ಚುನಾವಣಾ ಬಾಂಡ್‌ ಸಂಖ್ಯೆಗಳನ್ನು ಬಹಿರಂಗಪಡಿಸದ ಎಸ್‌ ಬಿಐ : ಸುಪ್ರೀಂ ಕೋರ್ಟ್‌ ನೋಟಿಸ್‌

ನವದೆಹಲಿ: ಚುನಾವಣಾ ಬಾಂಡ್‌ಗಳನ್ನು ಗುರುತಿಸಲು ಸಹಾಯ ಮಾಡುವ ಬಾಂಡ್‌ಗಳ ಸಂಖ್ಯೆಗಳನ್ನು ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ಕ್ಕೆ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಮಾರ್ಚ್ 11ರಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ಎಸ್‌ಬಿಐ ಸಂಪೂರ್ಣ ಪಾಲಿಸಿಲ್ಲ ಎಂದು ಮುಖ್ಯ … Continued

ಚುನಾವಣಾ ಬಾಂಡ್‌ಗಳು : ಲಾಟರಿಯಿಂದ ಮಿಲ್ಕ್‌ ಶೇಕ್ ಸಂಸ್ಥೆಗಳ ವರೆಗೆ ಟಾಪ್ 20 ದಾನಿಗಳ ಪಟ್ಟಿ…

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರ್ಚ್ 14 ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅತಿದೊಡ್ಡ ದಾನಿಗಳು ಚುನಾವಣಾ ಬಾಂಡ್‌ಗಳ ಮೂಲಕ ವಿವಿಧ ಪಕ್ಷಗಳಿಗೆ ಸುಮಾರು 6,000 ಕೋಟಿ ರೂ.ಗಳನ್ನು ನೀಡಿದ್ದಾರೆ. ಇದರಲ್ಲಿ ಅಗ್ರ 20 ದಾನಿಗಳು ಏಪ್ರಿಲ್ 2019 ಮತ್ತು ಜನವರಿ 2024 ರ … Continued

ಸುಪ್ರೀಂ ಕೋರ್ಟ್‌ ಆದೇಶ : ಚುನಾವಣಾ ಬಾಂಡ್‌ ದತ್ತಾಂಶವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಎಸ್‌ಬಿಐ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಂಗಳವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) 2019ರ ಏಪ್ರಿಲ್ 12ರಿಂದ ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ರವಾನಿಸಿದೆ. ಮಂಗಳವಾರ (ಮಾರ್ಚ್ 12) ಸಂಜೆ 5:30ರೊಳಗೆ ಮಾಡಬೇಕೆಂದು ಸೋಮವಾರದ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಅಂಕಿ-ಅಂಶವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಮಾರ್ಚ್ 15, … Continued

ಚುನಾವಣಾ ಬಾಂಡ್‌ : ಎಸ್‌ಬಿಐ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್; ನಾಳೆಯೊಳಗೆ ವಿವರ ಸಲ್ಲಿಸಲು ಸೂಚನೆ

ನವದೆಹಲಿ: ಏಪ್ರಿಲ್‌ 2019ರಿಂದ ಈವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ನೀಡಲು ವಿಧಿಸಲಾಗಿರುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಮಂಗಳವಾರ(ಮಾರ್ಚ್ 12)ದೊಳಗೆ ವಿವರ ಬಹಿರಂಗಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ … Continued

2022ರ ವರೆಗೆ ₹ 16,000 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟ : ಬಿಜೆಪಿಗೆ ಸಿಂಹ ಪಾಲು ; ಯಾವ ಪಕ್ಷಗಳು ಪಡೆದದ್ದೆಷ್ಟು ಎಂಬುದು ಇಲ್ಲಿದೆ…

ನವದೆಹಲಿ: ಚುನಾವಣಾ ಬಾಂಡ್‌ಗಳು ಇದುವರೆಗೆ ವಿವಿಧ ರಾಜಕೀಯ ಪಕ್ಷಗಳಿಗೆ ₹ 16,437.63 ಕೋಟಿ ಮೌಲ್ಯದ 28,030 ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಸಿಂಹ ಪಾಲು ಬಿಜೆಪಿ ಪಾಲಾಗಿದೆ ಎಂದು ಅಂದಾಜಿಸಲಾಗಿದೆ. ಈಗ ರದ್ದಾದ ಚುನಾವಣಾ ಬಾಂಡ್ ಯೋಜನೆಯನ್ನು 2018ರಲ್ಲಿ ಪರಿಚಯಿಸಿದ ನಂತರ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ₹ 12,000 ಕೋಟಿಗೂ ಹೆಚ್ಚು ಹಣವನ್ನು … Continued

‘ಚುನಾವಣಾ ಬಾಂಡ್‌ ಯೋಜನೆ ಅಸಂವಿಧಾನಿಕ..’ : ಮಹತ್ವದ ತೀರ್ಪಿನಲ್ಲಿ ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ರಾಜಕೀಯ ನಿಧಿಗಾಗಿ ಚುನಾವಣಾ ಬಾಂಡ್ ಯೋಜನೆಯು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪಿನಲ್ಲಿ ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳನ್ನು ನೀಡಲು ಅನುಮತಿಸುವ ಚುನಾವಣಾ ಬಾಂಡ್ ಯೋಜನೆಯನ್ನು ಗುರುವಾರ ರದ್ದುಗೊಳಿಸಿದೆ. ಯೋಜನೆ ಜಾರಿಗೆ ತರಲೆಂದು ಆದಾಯ ತೆರಿಗೆ ಕಾಯಿದೆ ಮತ್ತು ಜನ ಪ್ರತಿನಿಧಿ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಮುಖ್ಯ … Continued

2022-23ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಕಾಂಗ್ರೆಸ್ ಪಡೆದದ್ದಕ್ಕಿಂತ 7 ಪಟ್ಟು ಹೆಚ್ಚು ಹಣ ಪಡೆದ ಬಿಜೆಪಿ : ಅದು ಪಡೆದ ಹಣ ಎಷ್ಟೆಂದರೆ…

ನವದೆಹಲಿ : ಆಡಳಿತಾರೂಢ ಬಿಜೆಪಿಯು 2022-23ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಸುಮಾರು ₹ 1300 ಕೋಟಿಗಳನ್ನು ಸ್ವೀಕರಿಸಿದೆ, ಇದು ಅದೇ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಕಾಂಗ್ರೆಸ್ ಪಡೆದಿದ್ದಕ್ಕಿಂತ ಏಳು ಪಟ್ಟು ಹೆಚ್ಚು. 2022-23ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಒಟ್ಟು ದೇಣಿಗೆ ₹ 2120 ಕೋಟಿಗಳಷ್ಟಿದ್ದು, ಇದರಲ್ಲಿ ಶೇ 61 ರಷ್ಟು ಚುನಾವಣಾ ಬಾಂಡ್‌ಗಳಿಂದ ಬಂದಿದೆ … Continued

ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಭಾರತದ ಅಟಾರ್ನಿ ಜನರಲ್ (ಎಜಿ) ಆರ್.ವೆಂಕಟರಮಣಿ ಅವರು ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಎಜಿ ಅವರ ಈ ವಾದವು ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಲಿಖಿತ … Continued