ದೆಹಲಿ ಆಸ್ಪತ್ರೆಯಲ್ಲಿ ಮಿದುಳಿನ ರಕ್ತಸ್ರಾವಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು

ನವದೆಹಲಿ : ಸದ್ಗುರು ಜಗ್ಗಿ ವಾಸುದೇವ ಅವರು ಮೆದುಳು ರಕ್ತಸ್ರಾವದಿಂದಾಗಿ ದೆಹಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅವರ ಇಶಾ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿದೆ.
66 ವರ್ಅಷದ ಸದ್ಗುರು ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು “ನಿರೀಕ್ಷೆ ಮೀರಿ” ಸುಧಾರಿಸುತ್ತಿದ್ದಾರೆ ಎಂದು ಅದು ಹೇಳಿದೆ.
“ಅಪೋಲೋ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕರು ನನ್ನ ತಲೆಬುರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಲು ಪ್ರಯತ್ನಿಸಿದರು. ಆದರೆ ಅವರಿಗೆ ಏನೂ ಕಾಣಲಿಲ್ಲ… ಸಂಪೂರ್ಣವಾಗಿ ಖಾಲಿಯಾಗಿದೆ” ಎಂದು ಶಸ್ತ್ರಚಿಕಿತ್ಸೆಯ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಸದ್ಗುರು ಜಗ್ಗಿ ವಾಸುದೇವ ಅವರು ತಮಾಷೆ ಮಾಡಿದ್ದಾರೆ. “… ಅವರು ಅದನ್ನು ಬಿಟ್ಟರು ಮತ್ತು ತೇಪೆ ಹಾಕಿದರು. ಇಲ್ಲಿ ನಾನು ದೆಹಲಿಯಲ್ಲಿದ್ದೇನೆ, ತಲೆಬುರುಡೆಗೆ ತೇಪೆಯಿದೆ ಆದರೆ ಯಾವುದೇ ಹಾನಿ ಇಲ್ಲ” ಎಂದು ಅವರು ಹೇಳಿದ್ದಾರೆ.

ಹೇಳಿಕೆಯ ಪ್ರಕಾರ, ಸದ್ಗುರುಗಳು ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. “ನೋವಿನ ತೀವ್ರತೆಯ ಹೊರತಾಗಿಯೂ, ಅವರು ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರು ಮತ್ತು 8 ಮಾರ್ಚ್ 2024 ರಂದು ರಾತ್ರಿಯ ಮಹಾಶಿವರಾತ್ರಿ ಆಚರಣೆಗಳಲ್ಲಿ ಸಹ ಪಾಲ್ಗೊಂಡರು.
ಮಾರ್ಚ್ 14 ರಂದು ದೆಹಲಿಗೆ ಆಗಮಿಸಿದಾಗ ಮಧ್ಯಾಹ್ನದ ವೇಳೆಗೆ ತಲೆನೋವು ತೀವ್ರವಾಯಿತು ಎಂದು ಫೌಂಡೇಶನ್ ಹೇಳಿದೆ, “ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಡಾ ವಿನಿತ್ ಸೂರಿ ಅವರ ಸಲಹೆಯ ಮೇರೆಗೆ ಸದ್ಗುರು ತುರ್ತು ಎಂಆರ್‌ಐಗೆ ಒಳಗಾಗಿದ್ದರು, ಇದು ಮೆದುಳಿನಲ್ಲಿ ಭಾರೀ ರಕ್ತಸ್ರಾವ ಇರುವುದನ್ನು ಬಹಿರಂಗಪಡಿಸಿತು. ಪರೀಕ್ಷೆಗೆ ಮುಂಚಿನ ಗಂಟೆಗಳಲ್ಲಿ ದೀರ್ಘಕಾಲದ ರಕ್ತಸ್ರಾವ ಮತ್ತು ತಾಜಾ ರಕ್ತಸ್ರಾವವನ್ನು ವರದಿಯು ತೋರಿಸಿದೆ ಎಂದು ಅದು ಹೇಳಿದೆ. ಆದಾಗ್ಯೂ, ಅವರು ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸದೆ ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಮಾರ್ಚ್ 17 ರಂದು, ಸದ್ಗುರು ತಮ್ಮ ಎಡಗಾಲಿನ ದೌರ್ಬಲ್ಯ ಮತ್ತು ನಿರಂತರ ವಾಂತಿ ಹಾಗೂ ಉಲ್ಬಣಗೊಂಡ ತಲೆನೋವಿನಿಂದಾಗಿ ಅವರ ಸ್ಥಿತಿಯು ಹದಗೆಟ್ಟಿತು. ಕೊನೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸಿ.ಟಿ. (CT) ಸ್ಕ್ಯಾನ್ ಮೆದುಳಿನ ಊತದಲ್ಲಿ ಗಮನಾರ್ಹ ಹೆಚ್ಚಳವನ್ನು ಬಹಿರಂಗಪಡಿಸಿತು … ಅವರ ತಲೆಬುರುಡೆಯಲ್ಲಿ ರಕ್ತಸ್ರಾವವನ್ನು ನಿವಾರಿಸಲು ದಾಖಲಾದ ಕೆಲವೇ ಗಂಟೆಗಳಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಿಕೆ ತಿಳಿಸಿದೆ.

ಪ್ರಮುಖ ಸುದ್ದಿ :-   ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

ಹಿರಿಯ ನರವಿಜ್ಞಾನಿ ಡಾ ವಿನಿತ್ ಸೂರಿ, ಮೈಕ್ರೋಬ್ಲಾಗಿಂಗ್ ಸೈಟ್ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ವೀಡಿಯೊವೊಂದರಲ್ಲಿ, “ಸದ್ಗುರು ಅವರು ಕಳೆದ ನಾಲ್ಕು ವಾರಗಳಿಂದ ತೀವ್ರ ಮತ್ತು ಸ್ಥಿರವಾದ ತಲೆನೋವನ್ನು ನಿರ್ಲಕ್ಷಿಸಿದ್ದರು. ಏಕೆಂದರೆ ಅವರು ತಮ್ಮ ಎಲ್ಲಾ ಬದ್ಧತೆಗಳನ್ನು ಪೂರೈಸಲು ಬಯಸಿದ್ದರು. ಅವರು ಮಾರ್ಚ್ 8 ರಂದು ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾರ್ಚ್ 15 ರಂದು ಸಂಜೆ ನೋವು ನಿಯಂತ್ರಣ ತಪ್ಪಿ ಉಲ್ಬಣಗೊಂಡಾಗ, ಅವರು ನಮ್ಮನ್ನು ಸಂಪರ್ಕಿಸಿದರು. ನಾವು MRI ಅನ್ನು ಸೂಚಿಸಿದೆವು. ಆದರೆ ಪೂರ್ವ ನಿಗದಿತ ಕಾರ್ಯಕ್ರಮ ಹಾಗೂ ಸಭೆಗಳು ಇದ್ದುದರಿಂದ ಅದನ್ನು ಮಾಡಿಸಲು ಹೋಗಲು ಅವರಿಗೆ ಇಷ್ಟವಿರಲಿಲ್ಲ. ಅವರು 40 ವರ್ಷಗಳಲ್ಲಿ ಯಾವತ್ತೂ ಸಭೆಯನ್ನು ತಪ್ಪಿಸಿಲ್ಲ ಎಂದು ಹೇಳಿದರು. ಆದಾಗ್ಯೂ, ನಾವು ಅವರ ಮನವೊಲಿಸಿದೆವು ಎಂದು ಹೇಳಿದ್ದಾರೆ.

ಅವರು ತಲೆಯಲ್ಲಿ ಎರಡು ಬಾರಿ ರಕ್ತಸ್ರಾವವಾಗಿ ಬಳಲುತ್ತಿದ್ದರು ಮತ್ತು ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದರು. ಆದರೆ ಅವರ ಪೂರ್ವ ನಿಗದಿತ ಕಾರಯ್ರಕಮದಿಂದಾಗಿ ಅದನ್ನು ವಿಳಂಬಗೊಳಿಸಿದರು.ಆ ಅಸಹನೀಯ ನೋವಿನಲ್ಲಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನೋಡಿ ನಮಗೆ ಆಶ್ಚರ್ಯವಾಯಿತು ಎಂದು ವೈದ್ಯರು ಹೇಳಿದರು.
“ಮಾರ್ಚ್ 17 ರಂದು, ಅವರ ಸ್ಥಿತಿಯು ಹದಗೆಟ್ಟಿತು ಮತ್ತು ಅವರು ಪದೇ ಪದೇ ವಾಂತಿ ಮಾಡುವುದರೊಂದಿಗೆ ಎಡಗಾಲಿನಲ್ಲಿ ದೌರ್ಬಲ್ಯ ಕಾಣಿಸಿಕೊಂಡಿತು. ನಾವು ಬಯಸಿದ ರೀತಿಯಲ್ಲಿ ತಮಗೆ ಚಿಕಿತ್ಸೆ ನೀಡುವಂತೆ ಅವರು ಮೊದಲ ಬಾರಿಗೆ ಕೇಳಿಕೊಂಡರು ಎಂದು ವೈದ್ಯರು ಹೇಳಿದರು.

ಪ್ರಮುಖ ಸುದ್ದಿ :-   'ಅಜ್ಞಾನ, ಸೋಮಾರಿತನ, ದುರಹಂಕಾರ' ಇದುವೇ ಕಾಂಗ್ರೆಸ್‌ ಯಶಸ್ಸು ಪಡೆಯಲು ಇರುವ ಅಡ್ಡಿ : ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಅಭಿಪ್ರಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement