ವೀಡಿಯೊ…| ತಂದೆಯ ಕೈಯಿಂದ ಜಾರಿ ಮೂರನೇ ಮಹಡಿಯಿಂದ ಬಿದ್ದು ಮಗು ಸಾವು

ಛತ್ತೀಸ್‌ಗಢ : ಶಾಪಿಂಗ್ ಮಾಲ್‌ನ ಮೂರನೇ ಮಹಡಿಯಲ್ಲಿ ಎಸ್ಕಲೇಟರ್‌​​​​​ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದ ಹೃದಯ ವಿದ್ರಾವಕ ಘಟನೆ ಮಂಗಳವಾರ ಛತ್ತೀಸ್‌ಗಢದ ರಾಜಧಾನಿ ರಾಯ್ಪುರದ ದೇವೇಂದ್ರ ನಗರದ ಮಾಲ್‌ನಲ್ಲಿ ನಡೆದಿದೆ. ಸುಮಾರು 40 ಅಡಿಗಳಷ್ಟು ಆಳಕ್ಕೆ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವ್ಯಕ್ತಿ ಮತ್ತೊಂದು ಮಗುವನ್ನು ಎಸ್ಕಲೇಟರ್‌ನಲ್ಲಿ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿರುವಾಗ ಮಗುವು ತನ್ನ ತಂದೆಯ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ಮಂಗಳವಾರ ತಡರಾತ್ರಿ ರಾಯ್‌ಪುರದ ಮಾಲ್‌ನಲ್ಲಿ ನಾಲ್ವರ ಕುಟುಂಬವೊಂದು ಎಸ್ಕಲೇಟರ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ಒಂದು 5 ವರ್ಷದ ಮಗುವಿನ ಕೈ ಹಿಡಿದುಕೊಂಡು ಮತ್ತು ಮತ್ತೊಂದು ತೋಳಿನಲ್ಲಿ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಲಿಫ್ಟ್​​ ಬಳಿ ಬರುತ್ತಿರುವುದು ಸೆರೆಯಾಗಿದೆ. ಎಸ್ಕಲೇಟರ್‌​​ ಹತ್ತುವ ವೇಳೆ 5 ವರ್ಷದ ಮಗು ಕಷ್ಟಪಡುತ್ತಿತ್ತು. ಈ ವೇಳೆ ಅಪ್ಪ ಸಹಾಯಕ್ಕೆ ಮುಂದಾಗಿದ್ದು, ಆಕಸ್ಮಿಕವಾಗಿ ತೋಳಿನಲ್ಲಿದ್ದ ಒಂದು ವರ್ಷದ ಮಗು ಕೈಯಿಂದ ಜಾರಿ 40 ಅಡಿಗಳಷ್ಟು ಆಳಕ್ಕೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೂರನೇ ಮಹಡಿಯಿಂದ ಬಿದ್ದ ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಮೃತಪಟ್ಟದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ವರದಿಗಳು ತಿಳಿಸಿವೆ. ದೇವೇಂದ್ರ ನಗರ ಪೊಲೀಸರು ಪ್ರಸ್ತುತ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   70 ವರ್ಷ ಮೇಲ್ಪಟ್ಟ ಎಲ್ಲರಿಗೂ ₹5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ; ಮೋದಿ ಸರ್ಕಾರದ ಮಹತ್ವದ ನಿರ್ಧಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement