ವೀಡಿಯೊ…| ಮನೆಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿದ ತಾಯಿ-ಮಗಳು ; ಇಬ್ಬರು ದರೋಡೆಕೋರರ ಬಂಧನ : ವೀಕ್ಷಿಸಿ

ಹೈದರಾಬಾದ್ : ಮಾರ್ಷಲ್ ಆರ್ಟ್ಸ್‌ನಲ್ಲಿ ತರಬೇತಿ ಪಡೆದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳು ಬೇಗಂಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳ ದರೋಡೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ಮೂಲದ ಇಬ್ಬರು ಆರೋಪಿಗಳು ಮನೆಯನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದರು ಮತ್ತು ದರೋಡೆ ಮಾಡಲು ಮೊದಲೇ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರು ಯೋಜನೆ ರೂಪಿಸಿದಂತೆ, ಅವರು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊರಿಯರ್ ಡೆಲಿವರಿ ಏಜೆಂಟ್‌ಗಳಂತೆ ಮನೆಗೆ ಬಂದಿದ್ದರು. ಮನೆಯಲ್ಲಿ ಮಾಲೀಕಳಾದ ಅಮಿತಾ ಮಹ್ನೋತ್ ಮನೆಯಲ್ಲಿದ್ದರು, ಒಬ್ಬ ಕೊರಿಯರ್ ಸ್ವೀಕರಿಸಲು ಒಳಗೆ ಹೋಗಿದ್ದಾನೆ. ಇಬ್ಬರು ಆರೋಪಿಗಳು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು (ಒಬ್ಬ ಹೆಲ್ಮೆಟ್ ಮತ್ತು ಮತ್ತೊಬ್ಬ ಮಾಸ್ಕ್‌ ಧರಿಸಿದ್ದ) ದರೋಡೆ ಮಾಡಲು ಇಬ್ಬರು ಮನೆಗೆ ಬಲವಂತವಾಗಿ ಪ್ರವೇಶಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಆರೋಪಿಗಳಲ್ಲಿ ಒಬ್ಬನು ಅಡುಗೆಮನೆಗೆ ಹೋಗಿ ಸೇವಕಿಯೊಬ್ಬಳ ಕುತ್ತಿಗೆ ಬಳಿಚಾಕು ಇಟ್ಟು ಬೆದರಿಸಿದ್ದಾನೆ. ಈ ಮಧ್ಯೆ, ಅಮಿತಾ ಅವರ ಹದಿಹರೆಯದ ಮಗಳು ಮತ್ತೊಬ್ಬ ಆರೋಪಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ, ದರೋಡೆಕೋರ ಹಾಗೂ ಇವರ ನಡುವೆ ಜಗಳಕ್ಕೆ ಕಾರಣವಾಯಿತು. 46 ವರ್ಷದ ಅಮಿತಾ ತನ್ನ ಮಗಳೊಂದಿಗೆ ಸೇರಿಕೊಂಡು ದರೋಡೆ ಯತ್ನಕ್ಕೆ ವಿರೋಧಿಸಿದಳು. ಜಗಳದ ವೇಳೆ ಆರೋಪಿ ತನ್ನ ಬ್ಯಾಗ್‌ನಿಂದ ಕಂಟ್ರಿಮೇಡ್ ಪಿಸ್ತೂಲ್ ತೆಗೆದು ತಾಯಿ ಹಾಗೂ ಮಗಳತ್ತ ತೋರಿಸಲು ಯತ್ನಿಸಿದ್ದಾನೆ.

ಪ್ರಮುಖ ಸುದ್ದಿ :-   ಈತ ವಿಶ್ವದ ಶ್ರೀಮಂತ ಭಿಕ್ಷುಕ ; ಮುಂಬೈನಲ್ಲಿ 2 ಬಿಎಚ್​ಕೆ ಮನೆ ಇರುವ ಮಿಲಿಯನೇರ್ : ಈತನ ಒಟ್ಟು ಆಸ್ತಿ ಎಷ್ಟು ಗೊತ್ತೆ..?

ಆದರೆ, ಮಾರ್ಷಲ್ ಆರ್ಟ್ಸ್ ನಲ್ಲಿ ತರಬೇತಿ ಪಡೆದಿರುವ ಅಮಿತಾ ಆತನಿಗೆ ಒದ್ದು ಆತನ ಕೈಯಿಂದ ಆಯುಧ ಕಸಿದುಕೊಂಡಿದ್ದಾಳೆ. ಒದೆತ ಮತ್ತು ಹೊಡೆತಗಳನ್ನು ತಿಂದು ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ಆಕೆ ಏಟುಗಳ ಸುರಿಮಳೆಗೈದಿದ್ದಾಳೆ. ಆದರೆ, ಅಡುಗೆ ಮನೆಯೊಳಗಿದ್ದ ಮತ್ತೊಬ್ಬ ದರೋಡೆಕೋರನಿಗೆ ಹೊರಗಿನ ದೃಶ್ಯದ ಬಗ್ಗೆ ತಿಳಿದಿರಲಿಲ್ಲ. ಮನೆಯಿಂದ ಕೂಗಾಟ ಕೇಳಿದ ಸುತ್ತಮುತ್ತಲಿನ ನಿವಾಸಿಗಳು ಅಲ್ಲಿಗೆ ಧಾವಿಸಿ ಎರಡನೇ ದರೋಡೆಕೋರನನ್ನು ಹಿಡಿದಿದ್ದಾರೆ.

ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಲ್ಲದೆ ಪರಾರಿಯಾಗಿದ್ದ ಮೊದಲ ದರೋಡೆಕೋರನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಾಯಿ-ಮಗಳ ಜೋಡಿಯನ್ನು ಶ್ಲಾಘಿಸಿದ್ದಾರೆ ಮತ್ತು ಅವರ ಧೈರ್ಯವನ್ನು ಪ್ರದರ್ಶಿಸಿದ್ದನ್ನು ಪ್ರಶಂಸಿಸಿದ್ದಾರೆ. “ತಾಯಿ ಅಮಿತಾ ಮತ್ತು ಅವರ ಮಗಳು ತೋರಿದ ಶೌರ್ಯವು ಅನುಕರಣೀಯವಾಗಿದೆ ಎಂದು ಹೇಳುವುದು ಸೂಕ್ತವಾಗಿದೆ…” ಎಂದು ಡಿಸಿಪಿ (ಉತ್ತರ ವಲಯ) ರೋಹಿಣಿ ಪ್ರಿಯದರ್ಶಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಯಿ ಮತ್ತು ಮಗಳ ಧೈರ್ಯವನ್ನು ಡಿಸಿಪಿ ಶ್ಲಾಘಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಸುಮಾರು ಒಂದು ವರ್ಷದ ಹಿಂದೆ ಕುಟುಂಬದ ಜೊತೆ ಕೆಲಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿ ಒಳಕ್ಕೆ ಚಪ್ಪಲಿ ತೆಗೆದು ಬರುವಂತೆ ಹೇಳಿದ್ದಕ್ಕೆ ವೈದ್ಯರಿಗೆ ಥಳಿಸಿದ ರೋಗಿಯ ಕುಟುಂಬ...!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement