ವೀಡಿಯೊ…| ರಾಮಾಯಣದಿಂದ ಪ್ರೇರಣೆ ; ʼಶ್ರವಣಕುಮಾರʼನಾದ ಹಿಸ್ಟರಿ-ಶೀಟರ್ : ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿ ತಾಯಿಗೆ ಉಡುಗೊರೆ ನೀಡಿದ..!

ಮಧ್ಯಪ್ರದೇಶದ ಉಜ್ಜಯಿನಿಯ ರೌನಕ್ ಗುರ್ಜರ್ ಎಂಬ ವ್ಯಕ್ತಿಯೊಬ್ಬರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ತಾಯಿಗೆ ವಿಶಿಷ್ಟವಾದದನ್ನು ಅರ್ಪಣೆ ಮಾಡಿದ್ದಾರೆ. ಗುರ್ಜರ್ ತನ್ನದೇ ಚರ್ಮದಿಂದ ಒಂದು ಜೊತೆ ಪಾದರಕ್ಷೆ ತಯಾರಿಸಿ ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ…! ಇದಕ್ಕೆ ಅವರು ರಾಮಾಯಣದಿಂದ ಪ್ರೇರಣೆ ಪಡೆದಿದ್ದಾಗಿ ಹೇಳಿದ್ದಾರೆ.
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಗುರ್ಜರ್, “ನಾನು ನಿಯಮಿತವಾಗಿ ರಾಮಾಯಣವನ್ನು ಪಠಿಸುತ್ತೇನೆ ಮತ್ತು ಭಗವಾನ್ ರಾಮನ ಪಾತ್ರದಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ಒಬ್ಬರ ಚರ್ಮದಿಂದ ಚಪ್ಪಲಿಯನ್ನು ತಯಾರಿಸುವುದು ಸಹ ತಾಯಿಗೆ ಸಾಕಾಗುವುದಿಲ್ಲ ಎಂದು ಶ್ರೀರಾಮನು ಹೇಳಿದ್ದಾನೆ. ಆದ್ದರಿಂದ, ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು ಮತ್ತು ನನ್ನ ಚರ್ಮದಿಂದ ಪಾದರಕ್ಷೆಗಳನ್ನು ತಯಾರಿಸಿ ನನ್ನ ತಾಯಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ತಂದೆ ತಾಯಿಯರ ಪಾದದಲ್ಲಿ ಸ್ವರ್ಗ ಅಡಗಿದೆ ಎಂದು ಸಮಾಜಕ್ಕೆ ಹೇಳಲು ಬಯಸುತ್ತೇನೆ. ತಂದೆಯು ಸ್ವರ್ಗಕ್ಕೆ ಮೆಟ್ಟಿಲು, ಆದರೆ ತಾಯಿ ಸ್ವರ್ಗವನ್ನು ಇಲ್ಲಿಗೇ ತರುವವಳು ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುರ್ಜರ್ ತನ್ನ ತಾಯಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಮಾರ್ಚ್ 14 ರಿಂದ 21 ರವರೆಗೆ ನಡೆದ ಭಾಗವತ ಕಥಾ ಕಾರ್ಯಕ್ರಮದಲ್ಲಿ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ಗುರ್ಜರ್ ತನ್ನ ತಾಯಿಗೆ ಚಪ್ಪಲಿಯನ್ನು ನೀಡುತ್ತಿರುವಾಗ ಅವರ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು.
ಗುರ್ಜರ್ ತನ್ನ ತಾಯಿಗೆ ಒಂದು ಜೊತೆ ಚಪ್ಪಲಿಗಳನ್ನು ತಯಾರಿಸಲು ತನ್ನ ತೊಡೆಯ ಚರ್ಮವನ್ನು ತೆಗೆದುಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.. ಈ ಶಸ್ತ್ರಚಿಕಿತ್ಸೆ ಅಥವಾ ಚಪ್ಪಲಿಗಳನ್ನು ತಯಾರಿಸುವ ಉದ್ದೇಶದ ಬಗ್ಗೆ ಅವರು ಯಾರಿಗೂ ಹೇಳಲಿಲ್ಲ.ಆಗ ಗುರ್ಜರ್ ಒಬ್ಬ ಚಪ್ಪಲಿ ತಯಾರಿಸುವನನ್ನು ಕಂಡು ವಿಶೇಷ ಪಾದರಕ್ಷೆಯನ್ನು ಸಿದ್ಧಪಡಿಸಿಕೊಡಬೇಕು ಎಂದು ಕೇಳಿಕೊಂಡರು.

ತಮ್ಮ ಮಗನ ಬಗ್ಗೆ ಮಾತನಾಡಿದ ತಾಯಿ ನಿರುಲಾ, “ರೋನಕ್ ಅವರಂತಹ ಮಗನನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ದೇವರು ಅವನನ್ನು ಎಲ್ಲಾ ಕಷ್ಟಗಳಿಂದ ರಕ್ಷಿಸಲಿ ಮತ್ತು ದುಃಖ ರಹಿತ ಜೀವನವನ್ನು ಅನುಗ್ರಹಿಸಲಿ ಎಂದು ಆಸೀರ್ವದಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಮ್ಮೆ ಹಿಸ್ಟರಿ ಶೀಟರ್‌ ಆಗಿದ್ದ ಗುರ್ಜರ್‌ ಅವರು, ರಾಮಾಯಣದ ಬೋಧನೆಗಳಿಂದ ಪ್ರೇರಿತರಾಗಿ ತೀವ್ರವಾದ ಪರಿವರ್ತನೆಗೆ ಒಳಗಾದರು. ಒಮ್ಮೆ ಪೊಲೀಸರಿಂದ ಅವರ ಕಾಲಿಗೆ ಗುಂಡು ಸಹ ತಗುಲಿತ್ತು. ನಂತರ ರಾಮಾಯಣದ ಓದಿನ ಪ್ರಭಾದಿಂದ ಹೊಸ ಮನುಷ್ಯರಾದರು. ರೌನಕ್ ಗುರ್ಜರ್ ತನ್ನ ತೊಡೆಯ ಚರ್ಮದ ಭಾಗವನ್ನು ಬಳಸಿ ಪಾದರಕ್ಷೆಗಳನ್ನು ತಯಾರಿಸಿ ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ. ಶ್ರೀರಾಮನು ತನ್ನ ತಾಯಿಯ ಮೇಲಿನ ಭಕ್ತಿಯ ಕಥೆಯಿಂದ ತಾನು ಸ್ಫೂರ್ತಿ ಪಡೆದಿರುವುದಾಗಿ ಅವರು ಹೇಳಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement