ಅಪರೂಪದ ವಿದ್ಯಮಾನ : ರಾಷ್ಟ್ರಪತಿಗಳ ವಿರುದ್ದವೇ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ ಕೇರಳ ಸರ್ಕಾರ…!

ನವದೆಹಲಿ : ರಾಜ್ಯ ವಿಧಾನಸಭೆ ಅಂಗೀಕರಿಸಿದ ನಾಲ್ಕು ವಿಧೇಯಕಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮ್ಮತಿ ನೀಡದೆ ತಡೆಹಿಡಿದಿರುವುದನ್ನು ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ವಕೀಲ ಸಿ.ಕೆ. ಶಶಿ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ರಾಜ್ಯ ಸರ್ಕಾರದ ಈ ಮಸೂದೆಗಳು ಒಪ್ಪಿಗೆಗಾಗಿ ರಾಜ್ಯಪಾಲರ ಬಳಿ ಸುಮಾರು ಎರಡು ವರ್ಷಗಳಿಂದ ಬಾಕಿ ಉಳಿದಿವೆ. ಮಸೂದೆಗಳು ಸಾರ್ವಜನಿಕ ಹಿತಾಸಕ್ತಿ ಮಸೂದೆಗಳನ್ನು ಒಳಗೊಂಡಿವೆ. ಮತ್ತು 200 ನೇ ವಿಧಿಯ ನಿಬಂಧನೆಯ ಪ್ರಕಾರ ರಾಜ್ಯಪಾಲರು “ಸಾಧ್ಯವಾದಷ್ಟು ಬೇಗ” ಪ್ರತಿಯೊಂದನ್ನು ವ್ಯವಹರಿಸದೆ ನಿಷ್ಪರಿಣಾಮಕಾರಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ರಾಷ್ಟ್ರಪತಿ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಅಸಾಮಾನ್ಯ ನಡೆ ಎಂದು ವಿಶ್ಲೇಷಿಸಲಾಗಿದೆ.

ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 2) ಮಸೂದೆ -2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ – 2022, ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆ – 2022 ಹಾಗೂ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 3) ಮಸೂದೆ – 2022ಕ್ಕೆ ರಾಷ್ಟ್ರಪತಿ ಯಾವುದೇ ಕಾರಣ ಉಲ್ಲೇಖಿಸದೆ ಅಂಕಿತ ಹಾಕಿಲ್ಲ. ಕಾರಣ ನೀಡದೆ ರಾಷ್ಟ್ರಪತಿಗಳು ಈ ಮಸೂದೆಗಳಿಗೆ ಒಪ್ಪಿಗೆ ನೀಡದಿರುವುದು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಅರ್ಜಿಯಲ್ಲಿಕೇರಳ ಸರ್ಕಾರ ಒತ್ತಾಯಿಸಿದೆ.

ಪ್ರಮುಖ ಸುದ್ದಿ :-   ಹಿಂದಿನ ಜಗನ್ ಸರ್ಕಾರ ಆಡಳಿತದಲ್ಲಿ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ; ಚಂದ್ರಬಾಬು ನಾಯ್ಡು ಗಂಭೀರ ಆರೋಪ

ಕೇಂದ್ರ ಸರ್ಕಾರ, ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಿದೆ.
ಇದೊಂದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವಂತಹ ಮಸೂದೆಯಾಗಿದೆ, ರಾಷ್ಟ್ರಪತಿಯವರು ಮಸೂದೆಗೆ ಸಹಿ ಹಾಕದೇ ಇರುವುದು ಕೇಂದ್ರ ಸರ್ಕಾರ ನೀಡಿರುವ ’ಸಲಹೆ’ ಕೂಡಾ ಕಾರಣ ಆಗಿರಬಹುದು. ರಾಜ್ಯದ ಜನತೆಯ ಕಲ್ಯಾಣ ಯೋಜನೆಯ ಹಕ್ಕನ್ನು ನಿರಾಕರಿಸಿರುವ ಹೆಜ್ಜೆ ಇದಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.

ಯಾವ ಕಾರಣಕ್ಕಾಗಿ ವಿಧೇಯಕವನ್ನು ಸಹಿಹಾಕದೇ ಪೆಂಡಿಂಗ್ ನಲ್ಲಿ ಇಡಲಾಗಿದೆ ಎನ್ನುವ ಬಗ್ಗೆ ನಮಗೆ ಮಾಹಿತಿಯಿಲ್ಲ. ನಿರ್ದಿಷ್ಟ ಕಾರಣ ನೀಡಿದರೆ ನಾವು ಅದಕ್ಕೆ ಉತ್ತರಿಸಲು ಸಿದ್ದ ಎಂದು ಕೇರಳ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.
ಅಲ್ಲದೆ,, ಕೇರಳದ ರಾಜ್ಯಪಾಲರಾದ ಆರೀಫ್ ಮೊಹಮ್ಮದ್ ಖಾನ್ ಅವರು ಕೇರಳ ಸರ್ಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಸಾರ್ವಜನಿಕವಾಗಿ ಪದೇಪದೇ ಟೀಕೆ ಮಾಡುತ್ತಿರುವುದನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ನಮೂದಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement