ವೀಡಿಯೋ : ರಸ್ತೆಯಲ್ಲಿ ವೀಡಿಯೊ ಶೂಟ್ ಮಾಡುತ್ತಿದ್ದಾಗ ಮಹಿಳೆಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಬೈಕ್‌ ಸವಾರ…!

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಇಂದಾಪುರಂನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ರಸ್ತೆಬದಿಯಲ್ಲಿ ರೀಲ್ ಶೂಟಿಂಗ್‌ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಮಂಗಳಸೂತ್ರವನ್ನು ಅಪರಿಚಿತ ಬೈಕ್ ಸವಾರ ದೋಚಿರುವ ಘಟನೆ ನಡೆದಿದೆ. ಬೈಕ್ ಸವಾರ ಮಹಿಳೆಯ ಬಳಿಗೆ ವೇಗವಾಗಿ ಬಂದು ಸರ ಕಿತ್ತುಕೊಂಡು ಕ್ಷಿಪ್ರವಾಗಿ ಪರಾರಿಯಾಗಿದ್ದು, ಈ ಘಟನೆ ವೀಡಿಯೊ ವೈರಲ್‌ ಆಗಿದೆ.
ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸಲ್ವಾರ್‌ ಸೂಟ್‌ ಧರಿಸಿದ್ದ ಸುಷ್ಮಾ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲು ವೀಡಿಯೊ ಚಿತ್ರೀಕರಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ವೈರಲ್‌ ವೀಡಿಯೊದಲ್ಲಿ ಮಹಿಳೆ ತುಂಬಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು ಮತ್ತು ನಿಧಾನವಾಗಿ ರೀಲ್ ಗೆ ಹೆಜ್ಜೆ ಹಾಕುತ್ತಿದ್ದರು. ಇದೇ ವೇಳೆ ಬೈಕಿನಲ್ಲಿ ಬಂದ ಅಪರಿಚತ ಮಹಿಳೆಗೆ ನೋವಾಗದಂತೆ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದನೆ. ಘಟನೆಯ ನಂತರ ಮಹಿಳೆಯರು ಬೈಕ್ ಸವಾರನ ಹಿಂದೆ ಓಡುತ್ತಿರುವುದು ಹಾಗೂ ಮಹಿಳೆ ಕೂಗಿಕೊಳ್ಳುವುದನ್ನು. ಆದರೆ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಸರಗಳ್ಳ ಹೆಲ್ಮೆಟ್‌ ಧರಿಸಿದ್ದರಿಂದ ಆತನ ಮುಖ ಕಾಣುತ್ತಿರಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದೆ. ಘಟನೆಯ ಕುರಿತು ಮಾತನಾಡಿದ ಇಂದಿರಾಪುರಂ ಎಸಿಪಿ ಸ್ವತಂತ್ರ ಕುಮಾರ ಸಿಂಗ್ ಅವರು, ಮಾರ್ಚ್ 24 ರಂದು, ಚೈನ್ ಸ್ನ್ಯಾಚಿಂಗ್ ಘಟನೆಯನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement