ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ‌ತಾರೀಬಾಗಿನಲ್ಲಿ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದ ಘಟನೆ ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಕುಸಿದ ಸ್ಲ್ಯಾಬ್‌ ಅಡಿ ಸಿಲುಕಿ ಹಿಟಾಚಿ, ಕ್ರೇನ್ ಜಖಂಗೊಂಡಿದೆ. ಕಾರ್ಮಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ವರದಿಯಾಗಿದೆ.
ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮಿರ್ಜಾನ್‌-ಹೆಗಡೆ ತಾರಿಬಾಗಿಲು ಈ ಕಾಮಗಾರಿ ನಡೆಸಲಾಗುತ್ತಿತ್ತು.

ಕಾಮಗಾರಿ ಮಾಡುತ್ತಿರುವಾಗ ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್‌ಗಳು ಕುಸಿದು ಬಿದಿದ್ದೆ. ಇದರಿಂದಾಗಿ ಸೇತುವೆಯ ಕೇಳಭಾಗದಲ್ಲಿ ನಿಂತಿದ್ದ ಹಿಟಾಚಿ, ಕ್ರೇನ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ಸುಮಾರು 18 ಕೋಟಿ ರೂ.ಗಳ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿ ಇದಾಗಿದೆ ಎನ್ನಲಾಗಿದ್ದು, ಸೇತುವೆಯ ಸುಮಾರು ಶೇ.40ರಷ್ಟು ಕಾಮಗಾರಿ ಮುಗಿಯುವ ಹಂತದಲ್ಲಿದೆ. ಈ ಹಂತದಲ್ಲಿ ಎರಡು ಬೃಹತ್‌ ಕಂಬಗಳ ನಡುವೆ ಜೋಡಿಸಿದ್ದ ಕಾಂಕ್ರೀಟ್‌ ತೊಲೆ ಕುಸಿದಿದೆ ಎಂದು ಹೇಳಲಾಗಿದೆ.
ಘಟನೆ ನಂತರ ಕೆಲವು ಸ್ಥಳೀಯರು ಹಾಗೂ ಗುತ್ತಿಗೆ ಕಂಪನಿ ಸಿಬ್ಬಂದಿ ಜೊತೆ ವಾಗ್ವಾದ ಸಹ ನಡೆದಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಅತ್ಯಾಚಾರ ಆರೋಪ: ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆ‌ರ್

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement