ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಹೈದರಾಬಾದ್: ಖ್ಯಾತ ನಟ ಸಿದ್ಧಾರ್ಥ ಮತ್ತು ನಟಿ ಅದಿತಿ ರಾವ್ ಹೈದರಿ ಗೌಪ್ಯವಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಆದರೆ ಇದೀಗ ಅವರು ತಾವಿಬ್ಬರು ಮದುವೆಯಾಗಿಲ್ಲ, ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾವಿಬ್ಬರು ಮದುವೆಯಾಗಿಲ್ಲ, ಎಂಗೇಜ್‌ ಮೆಂಟ್‌ ಆಗಿದ್ದೇವೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು ಫೋಟೋ ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥದ ರಿಂಗ್‌ ಹಾಕಿರುವ ಫೋಟೋ ಹಂಚಿಕೊಂಡಿರುವ ಅವರು, ಫೋಟೋ ಕೆಳಗೆ ‘He said yes’, ‘She said yes’ ಎಂದು ಬರೆದುಕೊಂಡಿದ್ದಾರೆ.

ಬುಧವಾರ (ಮಾ.27) ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರಂನಲ್ಲಿರುವ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ ಎಂದು ʼಗ್ರೇಟ್ ಆಂಧ್ರʼ ವರದಿ ಆಗಿತ್ತು.
ಸಿದ್ಧಾರ್ಥ ಮತ್ತು ಅದಿತಿ ರಾವ್ ಹೈದರಿ 2021 ರಲ್ಲಿ ಬಂದ ‘ಮಹಾ ಸಮುದ್ರಂʼ ಸಿನಿಮಾದಲ್ಲಿ ಜೊತೆಯಾಗಿ ಸಿನಿಮಾ ಮಾಡಿದ್ದರು. ಆ ಬಳಿಕ ಅವರಿಬ್ಬರು ಆತ್ಮೀಯವಾಗಿ ನಾನಾ ಕಡೆ ಕಾಣಿಸಿಕೊಂಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡಿ ಹಂಚಿಕೊಳ್ಳುತ್ತಿದ್ದರು.ಇಬ್ಬರು ಪ್ರಣಯ ಪಕ್ಷಿಗಳಾಗಿದ್ದರೂ ಅದನ್ನು ಎಲ್ಲೂ ಕೂಡ ಬಹಿರಂಗವಾಗಿ ಹೇಳಿರಲಿಲ್ಲ.
ಇಬ್ಬರ ಎಂಗೇಜ್‌ ಮೆಂಟ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಬ್ಬರಿಗೆ ನೂರಾರು ಮಂದಿ ಶುಭಕೋರಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿ ಒಳಕ್ಕೆ ಚಪ್ಪಲಿ ತೆಗೆದು ಬರುವಂತೆ ಹೇಳಿದ್ದಕ್ಕೆ ವೈದ್ಯರಿಗೆ ಥಳಿಸಿದ ರೋಗಿಯ ಕುಟುಂಬ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement