ಹಾವುಗಳು ಎಂದಿಗೂ ಗೊಂದಲಗೊಳ್ಳಲು ಬಯಸದ ಜೀವಿಗಳು. ಆದಾಗ್ಯೂ, ಹಲವರು ಹಾವಿನೊಂದಿಗೆ ಸಂವಹನ ನಡೆಸುತ್ತಾರೆ. ಇನ್ನೆ ಕೆಲವರು ಹಾವಿನೊಂದಿಗೆ ಆಟವಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದೇ ರೀತಿ ಘಟನೆಯೊಂದರಲ್ಲಿ ವ್ಯಕ್ತಿ ಸರ್ಪಕ್ಕೆ ಮುತ್ತಿಕ್ಕಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಆ ಸರ್ಪಕ್ಕೆ ಮುತ್ತಿಟ್ಟಿದ್ದಾನೆ. ಇಲ್ಲಿಯ ವರೆಗೆ ಎಲ್ಲವೂ ಸರಿಯಾಗಿಯೇ ನಡೆದಿದೆ. ಆದರೆ ನಂತರ ಹಾವು ತಿರುಗಿ ಆಚನ ತುಟಿಗೆ ಕಚ್ಚುತ್ತದೆ.
ವೀಡಿಯೊ ಕ್ಲಿಪ್‌ನಲ್ಲಿ, ಕಪ್ಪು ಅಂಗಿ ಧರಿಸಿದ ವ್ಯಕ್ತಿಯೊಬ್ಬ ನಾಗರಹಾವಿನ ತಲೆಯ ಮೇಲೆ ಚುಂಬಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಕಪ್ಪು ಅಂಗಿ ಧರಿಸಿದ ಯುವಕ ಎಲ್ಲರ ಎದುರು ಹಾವು ಚುಂಬಿಸುವ ಸಾಹಸಕ್ಕೆ ಮುಂದಾಗಿದ್ದಾನೆ.
ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಆತ ಅದನ್ನು ಚುಂಬಿಸುತ್ತಿದ್ದಾಗ ಹಾವು ಕೋಪಗೊಂಡು ಆತನಿಗೆ ತಿರುಗಿ ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಯುವಕ ದಿಗ್ಭ್ರಾಂತನಾಗಿದ್ದಾನೆ. ಹಾವು ಕಡಿತದಿಂದ ವ್ಯಕ್ತಿ ಬದುಕುಳಿದಿದ್ದಾನೆ ಎಂದು ವರದಿಯಾಗಿದೆ. ಆದರೆ ವೀಡಿಯೊ ವೈರಲ್ ಆಗಿದೆ.
ಕ್ಲಿಪ್ ಅನ್ನು ‘ಘರ್ ಕೆ ಕಾಲೇಶ್’, “ಇದು ಭಯಾನಕವಾಗಿದೆ” ಎಂಬ X ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ