ಕಾಂಬೋಡಿಯಾದಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಕ್ಕಿಬಿದ್ದಿರುವ 5000ಕ್ಕೂ ಹೆಚ್ಚು ಭಾರತೀಯರು…! ಸೈಬರ್‌ ವಂಚನೆ ಕೃತ್ಯಗಳಿಗೆ ಇವರ ಬಳಕೆ…!!

ನವದೆಹಲಿ: 5,000 ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಒತ್ತೆಯಾಳಾಗಿ ಬಂಧನದಲ್ಲಿ ಇಡಲಾಗಿದೆ ಮತ್ತು ಅವರನ್ನು ಸೈಬರ್ ವಂಚನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಂಚಕರು ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿರುವ ಗೃಹ ಸಚಿವಾಲಯದ (MHA) ನೇತೃತ್ವದ ಕೇಂದ್ರ ಸರ್ಕಾರವು ಕಾಂಬೋಡಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ರಕ್ಷಣಾ ಕಾರ್ಯ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

“ತಮ್ಮ ಸಭೆಯ ಕಾರ್ಯಸೂಚಿಯು ಸಂಘಟಿತ ದಂಧೆಯ ಬಗ್ಗೆ ಚರ್ಚಿಸುವುದು ಮತ್ತು ಅಲ್ಲಿ ಸಿಕ್ಕಿಬಿದ್ದವರನ್ನು ಮರಳಿ ಕರೆತರುವುದಾಗಿತ್ತು. ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ 500 ಕೋಟಿ ರೂಪಾಯಿ (ಕಾಂಬೋಡಿಯಾದ ಸೈಬರ್ ವಂಚನೆ) ನಷ್ಟವಾಗಿದೆ ಎಂದು ದತ್ತಾಂಶ ತೋರಿಸುತ್ತದೆ” ಎಂದು ಮೂಲವೊಂದನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೇಂದ್ರೀಯ ಏಜೆನ್ಸಿಗಳ ತನಿಖೆಯಲ್ಲಿ ಈ ಏಜೆಂಟರು ಇದುವರೆಗೆ ದಕ್ಷಿಣ ಭಾರತದವರನ್ನು ತಮ್ಮ ಮೋಸದ ಬಲೆಗೆ ಬೀಳಿಸುತ್ತಿದ್ದು, ಅವರನ್ನು ಡಾಟಾ ಎಂಟ್ರಿ ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಕ್ಕೆ ಕಳುಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ಒಡಿಶಾದ ರೂರ್ಕೆಲಾ ಪೊಲೀಸರು ಡಿಸೆಂಬರ್ 30 ರಂದು ಸೈಬರ್-ಕ್ರೈಮ್ ಜಾಲವನ್ನು ಬಹಿರಂಗಪಡಿಸಿದ ನಂತರ ಈ ದೊಡ್ಡ-ಪ್ರಮಾಣದ ಮೋಸದ ಕಾರ್ಯಾಚರಣೆ ಗಮನಕ್ಕೆ ಬಂದಿತು, ಇದರ ನಂತರ ಅನೇಕರ ಬಂಧನಗಳಿಗೆ ಕಾರಣವಾಯಿತು. ಸಂತ್ರಸ್ತರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳು ಸ್ವಲ್ಪಮಟ್ಟಿಗೆ ಯಶಸ್ಸನ್ನು ಕಂಡಿವೆ, ಈಗಾಗಲೇ ಕೆಲವು ವ್ಯಕ್ತಿಗಳನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ.
ವಿದೇಶಾಂಗ ಸಚಿವಾಲಯವ(MEA)ವು ಮತ್ತು ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಕರ್ನಾಟಕದ ಅನಿವಾಸಿ ಭಾರತೀಯ ವೇದಿಕೆ ಪ್ರಯತ್ನದ ನಂತರ ಬೆಂಗಳೂರಿನ ಮೂವರ ರಕ್ಷಣೆಯ ನಂತರ ಈ ಪ್ರಯತ್ನಗಳು ಹೈಲೈಟ್ ಆಗಿವೆ.

ವಂಚನೆಯ ಕಾರ್ಯಾಚರಣೆಗಳು ಸಂಕೀರ್ಣವಾಗಿದ್ದು, ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ರಚನೆ ಮತ್ತು ಮೋಸದ ಕ್ರಿಪ್ಟೋಕರೆನ್ಸಿ ವ್ಯಾಪಾರ ಮತ್ತು ನಕಲಿ ಸ್ಟಾಕ್ ಹೂಡಿಕೆಗಳನ್ನು ಒಳಗೊಂಡಂತೆ ಹಲವಾರು ಮೋಸದ ವ್ಯವಹಾರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ರೂರ್ಕೆಲಾ ಪೊಲೀಸರು ಇದರಲ್ಲಿ ಪಾಲ್ಗೊಂಡಿರುವ ಭಾರತೀಯ ಮೂಲದ ಮೂವರು ಮತ್ತು ನೇಪಾಳ ಮೂಲದ ಒಬ್ಬ ವ್ಯಕ್ತಿಯನ್ನು ಗುರುತಿಸಿದ್ದಾರೆ ಮತ್ತು ಈ ಹಗರಣದ ಪ್ರಮುಖರನ್ನು ಬಂಧಿಸಲು ಇಂಟರ್‌ಪೋಲ್ ಸಹಾಯವನ್ನು ಪಡೆಯಲು ಯೋಜಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಡಿಸೆಂಬರ್ 30ರಂದು ಒಡಿಶಾದಲ್ಲಿನ ರೂರ್ಕೆಲಾ ಪೊಲೀಸರು ಸೈಬರ್ ಅಪರಾಧ ಗುಂಪನ್ನು ಭೇದಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದ್ದು, ಕಾಂಬೋಡಿಯಾಗೆ ಜನರನ್ನು ಸಾಗಿಸುವ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಸುಮಾರು 70 ಲಕ್ಷ ರೂಪಾಯಿ ವಂಚನೆಗೊಳಗಾದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನ ನಂತರ ಇದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನಾವು ದೇಶದ ವಿವಿಧ ಪ್ರದೇಶಗಳಿಂದ ಎಂಟು ವ್ಯಕ್ತಿಗಳನ್ನು ಬಂಧಿಸಿದ್ದೇವೆ, ಹಗರಣದಲ್ಲಿ ಬಹು ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಾಥಮಿಕ ಸಾಕ್ಷ್ಯದಿಂದ ಬೆಂಬಲಿತವಾಗಿದೆ” ಎಂದು ಅಧಿಕಾರಿ ದೃಢಪಡಿಸಿದರು. ನಂತರ 16 ಜನರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಈ ವಾರದ ಆರಂಭದಲ್ಲಿ ಕಾಂಬೋಡಿಯಾದಿಂದ ಹಿಂದಿರುಗಿದ ಇಬ್ಬರನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಲಸೆ ಬ್ಯೂರೋ ಬಂಧಿಸಿದೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement