ʼಮೂಲ ಸೂಪರ್‌ಮ್ಯಾನ್ ಕಾಮಿಕ್ʼ ದಾಖಲೆ ಬೆಲೆ 49 ಕೋಟಿ ರೂ.ಗೆ ಹರಾಜು..!

ಸೂಪರ್‌ಮ್ಯಾನ್‌ನ ಐಕಾನಿಕ್ ಚೊಚ್ಚಲ ಪ್ರದರ್ಶನ ಒಳಗೊಂಡಿರುವ ಆಕ್ಷನ್ ಕಾಮಿಕ್ಸ್ ನಂ. 1 ರ ಮೂಲ ಆವೃತ್ತಿಯು ದಾಖಲೆ ಬೆಲೆ $6 ಮಿಲಿಯನ್‌ಗೆ (ಅಂದಾಜು 49 ಕೋಟಿ ರೂ.) ಹರಾಜಾಯಿತು. ಇತ್ತೀಚಿನ ಈ ಹರಾಜು 2022 ರಲ್ಲಿ ಸೂಪರ್‌ಮ್ಯಾನ್ ನಂ. 1 ರ $ 5.3 ಮಿಲಿಯನ್ (ಅಂದಾಜು 44 ಕೋಟಿ ರೂ.) ಮಾರಾಟದ ದಾಖಲೆಯನ್ನು ಇದು ಮುರಿದಿದೆ.
ಆದರೆ ಸ್ಪೈಡರ್ ಮ್ಯಾನ್‌ನ ಚೊಚ್ಚಲ ಕಾಮಿಕ್ 2021 ರಲ್ಲಿ $ 3.6 ಮಿಲಿಯನ್ (ಅಂದಾಜು 29 ಕೋಟಿ ರೂ.)ಗೆ ಮಾರಾಟವಾಯಿತು. ಏತನ್ಮಧ್ಯೆ, ಇತ್ತೀಚೆಗೆ ಮಾರಾಟವಾದ ಪ್ರತಿ ಕಾಮಿಕ್ಸ್‌ಗೆ ಶ್ರೇಣೀಕರಣ ಸೇವೆಯಾದ ಸಿಜಿಸಿ (CGC)ಯಿಂದ ಕೇವಲ 78 ಪ್ರತಿಗಳನ್ನು ಮಾತ್ರ ಟ್ರ್ಯಾಕ್ ಮಾಡಲಾಗಿತ್ತು. ಪ್ರತಿಯನ್ನು 10 ರಲ್ಲಿ 8.5 ಎಂದು ಶ್ರೇಣೀಕರಿಸಲಾಗಿದೆ.
ಇತ್ತೀಚಿನ ಈ ಈವೆಂಟ್‌ನ ಆರಂಭಿಕ ದಿನ, ದಿ ಮ್ಯಾನ್ ಆಫ್ ಸ್ಟೀಲ್‌ನ ಪರಿಕಲ್ಪನೆಯ ಬಗ್ಗೆ ಮಾತನಾಡುತ್ತಾ, ಕಾಮಿಕ್ ಸ್ಟ್ರಿಪ್ ಕಲಾವಿದ ರಸೆಲ್ ಕೀಟನ್‌ಗೆ ಸೀಗಲ್ ಬರೆದ ಐತಿಹಾಸಿಕ 1934 ರ ಪತ್ರ $2,64,000 (ಅಂದಾಜು 2 ಕೋಟಿ ರೂ.) ಗೆ ಹರಾಜಾಯಿತು.
ಹರಾಜಿನಲ್ಲಿ ಇನ್ನಷ್ಟು ಸೂಪರ್ ಹೀರೋ ಟೀಮ್ ಕಾಮಿಕ್ಸ್ ಕೂಡ ಹೆಡ್‌ಲೈನ್ಸ್‌ ಮಾಡಿದೆ. ಜಸ್ಟೀಸ್ ಲೀಗ್ ಆಫ್ ಅಮೇರಿಕದ ಎರಡು ಪ್ರತಿಗಳು, ಎರಡೂ 9.6 ಶ್ರೇಣಿಯನ್ನು ಹೊಂದಿದ್ದು, ಪ್ರತಿಯೊಂದೂ $348,000 (ಅಂದಾಜು 2 ಕೋಟಿ ರೂ.) ಗಳಿಸಿತು.

ಪ್ರಮುಖ ಸುದ್ದಿ :-   ವೀಡಿಯೊ...| 'ಪೂರ್ವಯೋಜಿತ ದಾಳಿ'ಯಲ್ಲಿ ಹೋಟೆಲ್ ಹೊರಗೆ ಗುಂಡು ಹಾರಿಸಿ ಯುನೈಟೆಡ್ ಹೆಲ್ತ್‌ಕೇರ್ ಕಂಪನಿಯ ಸಿಇಒ ಹತ್ಯೆ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement