ಪೈಶಾಚಿಕ ಕೃತ್ಯ…: ಪತ್ನಿ ಹತ್ಯೆ ಮಾಡಿ 224 ತುಂಡುಗಳಾಗಿ ಕತ್ತರಿಸಿ ಒಂದು ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ…!

ಬೆಚ್ಚಿಬೀಳಿಸಿದ ಭೀಕರ ಹತ್ಯೆಯೊಂದರಲ್ಲಿ, 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದು, ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಒಂದು ವಾರದವರೆಗೆ ತನ್ನ ಅಡುಗೆಮನೆಯಲ್ಲಿ ಬಚ್ಚಿಟ್ಟಿದ್ದ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. ನಂತರ ಆತ ತನ್ನ ಸ್ನೇಹಿತನ ಸಹಾಯದಿಂದ ಪತ್ನಿಯ ದೇಹದ ತುಂಡುಗಳನ್ನು ನದಿಗೆ ಎಸೆದಿದ್ದಾನೆ.
ನಿಕೋಲಸ್ ಮೆಟ್ಸನ್(28) ಎಂಬ ವ್ಯಕ್ತಿ ಶುಕ್ರವಾರ ತನ್ನ ಪತ್ನಿ ಹಾಲಿ ಬ್ರಾಮ್ಲಿ (26) ಅವರನ್ನು ಮಾರ್ಚ್‌ನಲ್ಲಿ ಕೊಲೆ ಮಾಡಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ.
ಮೆಟ್ಸನ್ ತನ್ನ ಹೆಂಡತಿಗೆ ಮಲಗುವ ಕೋಣೆಯಲ್ಲಿ ಹಲವಾರು ಬಾರಿ ಇರಿದಿದ್ದಾನೆ ಮತ್ತು ಸ್ನಾನಗೃಹದಲ್ಲಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ನಂತರ ಅವರು ತುಂಡುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿಟ್ಟಿದ್ದ ಮತ್ತು ಎಸೆಯುವ ಮೊದಲು ಅವುಗಳನ್ನು ಅಡುಗೆಮನೆಯ ಲ್ಯಾಡರಿನಲ್ಲಿ ತರಕಾರಿ, ಆಹಾರ ಪದಾರ್ಥಗಳನ್ನು ಇಡುವ ಸ್ಥಳದಲ್ಲಿ ಬಚ್ಚಿಟ್ಟಿದ್ದ.

ಸುಮಾರು ಒಂದು ವಾರದ ನಂತರ ಮತ್ತು ಪೊಲೀಸರು ಅವನ ಮನೆಗೆ ಬರುವ ಮೊದಲು, ದೇಹದ ಭಾಗಗಳನ್ನು ಎಸೆಯಲು ಸಹಾಯ ಮಾಡುವಂತೆ ಕೋರಿ ತನ್ನ ಸ್ನೇಹಿತನಿಗೆ £ 50 ಪಾವತಿಸಿದ್ದ. “ದೇಹವನ್ನು ವಿಲೇವಾರಿ ಮಾಡಲು ಕೇವಲ £ 50 ಸಿಕ್ಕಿತು” ಎಂದು ಸ್ನೇಹಿತ ಪಠ್ಯ ಸಂದೇಶದಲ್ಲಿ ಬರೆದಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಒಂದು ದಿನದ ನಂತರ, ಬೆಳಗಿನ ವಾಕಿಂಗ್ ಮಾಡುವವರಿಗೆ ವಿಥಮ್ ನದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ತೇಲುತ್ತಿರುವುದು ಕಂಡುಬಂದಿತು. ಒಂದು ಚೀಲದಲ್ಲಿ ಮಾನವ ಕೈ ಮತ್ತು ಇನ್ನೊಂದು ಚೀಲದಲ್ಲಿ ಬೋಳಿಸಿಕೊಂಡಿದ್ದ ಸ್ಥಿತಿಯಲ್ಲಿ ಹಾಲಿ ಬ್ರಾಮ್ಲಿ ರುಂಡ ಇತ್ತು. ಇದರ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಈಜುಗಾರರು 224 ದೇಹದ ಭಾಗಗಳನ್ನು ನದಿಯಲ್ಲಿ ಪತ್ತೆ ಮಾಡಿದರು. ಪೊಲೀಸರ ಪ್ರಕಾರ ಕೆಲವು ಇನ್ನೂ ಕೆಲವಷ್ಟು ಭಾಗಗಳು ಸಿಗಬೇಕಿದೆ. ಸಾವಿಗೆ ಕಾರಣವನ್ನು ಕಂಡುಹಿಡಿಯುವುದು ಅಸಾಧ್ಯವಾದ ರೀತಿಯಲ್ಲಿ ದೇಹವನ್ನು ಕತ್ತರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ತನ್ನ ಮಗಳು ಮದುವೆಯಾಗಿ ಕೇವಲ 16 ತಿಂಗಳಾಗಿತ್ತು ಮತ್ತು ಗಂಡ ಅವಳಿಗೆ ಆಕೆಯ ಕುಟುಂಬದವರನ್ನು ಭೇಟಿಯಾಗಲು ವರ್ಷಗಳ ಕಾಲ ಅವಕಾಶ ನೀಡಲಿಲ್ಲ ಮತ್ತು ಅವನು ಅವಳನ್ನು ಹತ್ಯೆ ಮಾಡುವ ಸಮಯದಲ್ಲಿ ದಂಪತಿ ವಿಚ್ಛೇದನ ಪಡೆಯುವ ಹಂತದಲ್ಲಿದ್ದರು ಎಂದು ಮೃತ ಹಾಲಿ ಬ್ರಾಮ್ಲಿ ಅವರ ತಾಯಿ ನ್ಯಾಯಾಲಯಕ್ಕೆ ತಿಳಿಸಿದರು.
ಈತ ಆಹಾರ ಬ್ಲೆಂಡರ್ ಮತ್ತು ಮೈಕ್ರೋವೇವ್ ಓವನ್‌ನಲ್ಲಿ ತನ್ನ ಹ್ಯಾಮ್ಸ್ಟರ್‌ (ಪ್ರಾಣಿ)ಗಳನ್ನು ಕೊಂದಿದ್ದ. ಆಗ ಪತ್ನಿ ಬ್ರಾಮ್ಲಿ ಪೋಲೀಸರ ಸಹಾಯ ಕೋರಿದ್ದಳು. ನಂತರ ಆತ ಅವಳು ಸಾಕಿದ್ದ ಹೊಸ ನಾಯಿಮರಿಯನ್ನು ವಾಷಿಂಗ್ ಮೆಷಿನ್‌ನಲ್ಲಿ ಹಾಕಿ ಸಾಯಿಸಿ ವಿಕೃತಿ ಮೆರೆದಿದ್ದ. ಆತ ತನ್ನ ಪತ್ನಿ ಹಾಲಿ ಬ್ರಾಮ್ಲಿ ಯಂತ್ರದೊಳಗೆ ಸತ್ತ ನಾಯಿಮರಿ ತಿರುಗುತ್ತಿರುವುದನ್ನು ನೋಡಿ ಸಂಕಟ ಪಡಬೇಕು ಎಂದು ಬಯಸಿದ್ದ. ಹಾಲಿ ಬ್ರಾಮ್ಲಿ ಒಮ್ಮೆ ತನ್ನ ಮುದ್ದಿನ ಮೊಲಗಳೊಂದಿಗೆ ತನ್ನ ಮನೆಬಿಟ್ಟು ಓಡಿಹೋಗಿದ್ದಳು

ಮಾರ್ಚ್ 24 ರಂದು, ಲಿಂಕನ್‌ಶೈರ್ ಪೊಲೀಸರು ಮಾಹಿತಿ ಸ್ವೀಕರಿಸಿದ ನಂತರ ಹಾಲಿ ಬ್ರಾಮ್ಲಿ ಅವರ ಬಗ್ಗೆ ಪರಿಶೀಲನೆ ಮಾಡಲು ದಂಪತಿ ಮನೆಗೆ ತಲುಪಿದರು. ಮೆಟ್ಸನ್ ಬಾಗಿಲು ತೆರೆದಾಗ, ಆತ ತನ್ನ ಹೆಂಡತಿಯಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಹೇಳಿಕೊಂಡ ಮತ್ತು ಪೊಲೀಸರಿಗೆ ತನ್ನ ತೋಳಿನ ಮೇಲೆ ಅವಳು ಕಚ್ಚಿದ ಗಾಯದ ಗುರುತನ್ನು ತೋರಿಸಿದ್ದ.
ಬ್ರಾಮ್ಲಿ ಕೆಲವು ದಿನಗಳ ಹಿಂದೆ ಕೊಲ್ಲಲ್ಪಟ್ಟಿದ್ದರಿಂದ ಕೊಲ್ಲುವಾಗ ಆಕೆ ತನ್ನ ಪತಿಯಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಈ ಗಾಯ ಸಂಭವಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಮನೆ ಶೋಧಿಸಿದಾಗ ಪೊಲೀಸರಿಗೆ ಆತನ ಮೆನೆಯ ಬಾತ್​ ಟಬ್​ನಲ್ಲಿ ರಕ್ತದ ಕಲೆಗಳನ್ನು ಕಂಡಿತ್ತು, ರೂಮಿನ ತುಂಬಾ ಅಮೋನಿಯಾ ಹಾಗೂ ಬ್ಲೀಚ್​ನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಕೆಲವು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತೆಯರ ಜತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಆತ ಪೊಲೀಸರಿಗೆ ನಂಬಿಸಲು ಪ್ರಯತ್ನಿಸಿದ್ದ, ಆದರೂ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದರು.
ಸೋಮವಾರದಂದು ಶಿಕ್ಷೆಗೆ ಗುರಿಯಾಗಲಿರುವ ಹಂತಕನು ತನ್ನ ಹೆಂಡತಿಯನ್ನು ಹೇಗೆ ಮತ್ತು ಏಕೆ ಕೊಂದೆ ಎಂಬುದರ ಬಗ್ಗೆ ಹೇಳಿಲ್ಲ. ಆದಾಗ್ಯೂ, ಆತನ ವಕೀಲರು, ಆಟಿಸಂ ರೋಗವು ಕೊಲೆಗೆ ಒಂದು ಅಂಶವಾಗಿದೆ ಎಂದು ಪ್ರತಿಪಾದಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement