ಖಾನಾಪುರ: ಕಾಡುಕೋಣ ತಿವಿದು ವೃದ್ದೆ ಸಾವು

ಬೆಳಗಾವಿ : ಕಾಡುಕೋಣ ತಿವಿದು ವೃದ್ದೆ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಅಮಟೆ ಗ್ರಾಮದ ಹೊರವಲಯದ ಬಳಿ ಈ ದುರ್ಘಟನೆ ನಡೆದಿದ್ದು, ಕಾಡುಕೋಣದ ದಾಳಿಯಿಂದ ಸರಸ್ವತಿ ಅರ್ಜುನ ಗಾವಡೆ (80) ಎಂಬವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಅವರು ಮನೆಯಿಂದ ತಮ್ಮ ಹೊಲದ ಗೋಡಂಬಿ ಬೀಜಗಳನ್ನು ಕೀಳಲು ಹೋದಾಗ ಕಾಡುಕೋಣ ಹಠಾತ್ ದಾಳಿ ನಡೆಸಿ ಅವರ ಹೊಟ್ಟೆಯ ಭಾಗಕ್ಕೆ ತಿವಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕಾಂಗ್ರೆಸ್‌ ಜೊತೆಗೆ ಹೆಜ್ಜೆ ಹಾಕ್ತಾರಾ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ..? ಚರ್ಚೆಗೆ ಗ್ರಾಸವಾಯ್ತು ಫೋಟೋಗಳು...!

ನಿಮ್ಮ ಕಾಮೆಂಟ್ ಬರೆಯಿರಿ

advertisement