29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಕಾಮಿ ರೀಟಾ ಶೆರ್ಪಾ

ಕಠ್ಮಂಡು: ‘ಎವರೆಸ್ಟ್ ಮ್ಯಾನ್’ ಎಂದು ಕರೆಯಲ್ಪಡುವ ನೇಪಾಳದ ಕಾಮಿ ರೀಟಾ ಶೆರ್ಪಾ ಅವರು ಭಾನುವಾರ ಬೆಳಿಗ್ಗೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 29 ನೇ ಬಾರಿಗೆ ಏರುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಪ್ರಕಾರ, ದಾಖಲೆ ಸ್ಥಾಪಿಸಿದ ಆರೋಹಿ ಭಾನುವಾರ 7:25 AMಕ್ಕೆ ಎವರೆಸ್ಟ್ ಶಿಖರದ ತುತ್ತ ತುದಿಯನ್ನು ತಲುಪಿದ್ದಾರೆ. ಕಳೆದ ವರ್ಷ ಋತುವಿನಲ್ಲಿ 54 ವರ್ಷದ ಶೆರ್ಪಾ ಆರೋಹಿ ಮತ್ತು ಮಾರ್ಗದರ್ಶಿ 8848.86 ಮೀಟರ್ ಎತ್ತರದ ಅತ್ಯುನ್ನತ ಶಿಖರವನ್ನು ಒಂದು ವಾರದೊಳಗೆ ಎರಡು ಬಾರಿ ಏರುವ ಮೂಲಕ ದಾಖಲೆಯನ್ನು ಸ್ಥಾಪಿಸಿದ್ದರು. ಆದರೆ ಈ ಬಾರಿ ಮತ್ತೆ ಎರಡು ಬಾರಿ ಶಿಖರವನ್ನು ಏರುವ ಆಲೋಚನೆಯಲ್ಲಿದ್ದಾರೆ.

ಪರ್ವತವನ್ನು ಏರುವ ಮೊದಲು ‘ಯಾವುದೇ ನಿರ್ದಿಷ್ಟ ಸಂಖ್ಯೆಯ ಬಾರಿ ಸಾಗರಮಾತಾ (ಮೌಂಟ್ ಎವರೆಸ್ಟ್‌ಗೆ ನೇಪಾಳದ ಹೆಸರು) ಏರುವ ಯೋಚನೆಯನ್ನು ಹೊಂದಿರಲಿಲ್ಲ ಎಂದು ರೀಟಾ ಹೇಳಿದ್ದಾರೆ.
ಕಾಮಿ ರೀಟಾ ಶೆರ್ಪಾ ಅವರು 1994 ಮೇ 13ರಂದು ಮೊದಲ ಬಾರಿಗೆ ಎವರೆಸ್ಟ್‌ ಏರಿದ್ದರು. 2022ರಲ್ಲಿ 26ನೇ ಬಾರಿಗೆ ಪರ್ವತವನ್ನು ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ಮೊದಲಿಗರು ಎಂಬ ದಾಖಲೆ ನಿರ್ಮಿಸಿದ್ದರು.
ಕಾಮಿ ರೀಟಾ ಅವರು ಸಾಗರಮಾತಾ ಆರೋಹಣದ 71 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ವಿಶ್ವದ ಅತಿ ಎತ್ತರದ ಶಿಖರವನ್ನು ಅತಿ ಹೆಚ್ಚು ಆರೋಹಣ ಮಾಡುವ ಮೂಲಕ ದಾಖಲೆ ನಿರ್ಮಿಸಿದ ಆರೋಹಿಯಾಗಿದ್ದಾರೆ.
ಸೋಲುಕುಂಬು ಮೂಲದ ಪಸಂಗ್ ದಾವಾ ಶೆರ್ಪಾ ಅವರು ಕಳೆದ ವರ್ಷ 27 ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದರು. ಆದರೆ, ಅವರು ಈ ಬಾರಿ ಏರುತ್ತಾರೆಯೇ ಎಂಬುದು ಖಚಿತವಾಗಿಲ್ಲ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement