ವೀಡಿಯೊ…| ಸ್ವರ್ಗಕ್ಕೆ ಹೋಗಲು 500 ಮೀಟರ್ ಎತ್ತರದ ಬೆಳಗುವ ಏಣಿ : ಕಲಾವಿದನ ಸೃಜನಶೀಲತೆಯ ಅದ್ಭುತ ಪ್ರದರ್ಶನ ; ವೀಕ್ಷಿಸಿ

ಚೀನಾದ ಕಲಾವಿದರೊಬ್ಬರ ಸೃಜನಶೀಲತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕ್ಲಿಪ್ ಆಕಾಶದಲ್ಲಿ ಏಣಿಯ ಮೆಟ್ಟಿಲುಗಳು ಬೆಳಗುತ್ತಿರುವುದನ್ನು ಮತ್ತು ಏಣಿ ಬೆಳಗುತ್ತ ಆಕಾಶದ ಕಡೆಗೆ ಹೋಗುವುದನ್ನು ತೋರಿಸುತ್ತದೆ.
ವೀಡಿಯೊವನ್ನು ಹಂಚಿಕೊಂಡಿರುವ ಹ್ಯಾಂಡಲ್‌ಗಳು ಇದನ್ನು “ಸ್ವರ್ಗಕ್ಕೆ ಮೆಟ್ಟಿಲು” ಎಂದು ಕರೆದಿದ್ದಾರೆ ಮತ್ತು ಇದನ್ನು ಚೀನಾದ ಪಟಾಕಿ ಕಲಾವಿದ ಕೈ ಗುವೊ-ಕಿಯಾಂಗ್ ರಚಿಸಿದ್ದಾರೆ ಎಂದು ಹೇಳಲಾಗಿದೆ.
ಸಿಸಿಟಿವಿ ಪ್ರಕಾರ, ಕಲೆಯ ಈ ಸೃಜನಶೀಕತೆಯನ್ನು ಕೈ ಗುವೊ-ಕಿಯಾಂಗ್ ಅವರು ಸುಮಾರು 10 ವರ್ಷಗಳ ಹಿಂದೆ ತಮ್ಮ ಅಜ್ಜಿಯ ಗೌರವಾರ್ಥವಾಗಿ ಪ್ರದರ್ಶಿಸಿದರು, ಅಜ್ಜಿ ಕಲಾವಿದರಾಗುವ ತನ್ನ ಕನಸನ್ನು ಯಾವಾಗಲೂ ಬೆಂಬಲಿಸಿದರು ಎಂದು ಅವರು ಹೇಳಿದ್ದಾರೆ.

1650-ಅಡಿ ಎತ್ತರದ (ಅಥವಾ 502 ಮೀಟರ್) “ಸ್ಕೈ ಲ್ಯಾಡರ್” ಅನ್ನು ತಾಮ್ರದ ತಂತಿಯಿಂದ ತುಂಬಿದ ಗನ್‌ಪೌಡರ್‌ನಿಂದ ಮಾಡಲಾಗಿದ್ದು, ಅದನ್ನು ಅಗೋಚರವಾಗಿ ಮಾಡಲಾಗಿದೆ. ಹಾರುವ ಬಿಸಿ ಗಾಳಿಯ ಬಲೂನ್‌ನ ಪರ್ಚ್‌ನಿಂದ ಅದನ್ನು ಹೊತ್ತಿಸಲಾಯಿತು.
ಬಂದರಿನ ಮೇಲೆ ಹಚ್ಚಲಾದ ಸ್ಕೈ ಲ್ಯಾಡರ್ ಸುಮಾರು 2 ನಿಮಿಷ ಮತ್ತು 30 ಸೆಕೆಂಡುಗಳ ಕಾಲ ಉರಿಯಿತು.
ಬೆರಗುಗೊಳಿಸುವ ಕಲೆಯು ತುಂಬಾ ಆಸಕ್ತಿಯನ್ನು ಕೆರಳಸಿತು. ನೆಟ್‌ಫ್ಲಿಕ್ಸ್ ಮೇರುಕೃತಿಯ ಮೇಲೆ ಸಾಕ್ಷ್ಯಚಿತ್ರವನ್ನು ಮಾಡಿದೆ.
ವೈಸ್ (Vice) ವರದಿಯು ಇದು ಕಲಾವಿದ ಕೈ ಗುವೊ-ಕಿಯಾಂಗ್ ಮಾಡಿದ ಮೂರನೇ ಪ್ರಯತ್ನವಾಗಿದೆ ಎಂದು ಹೇಳಿದೆ. ಅವರು 1994 ರಲ್ಲಿ ಮೊದಲ ಪ್ರಯತ್ನವನ್ನು ಮಾಡಿದರು, ಆದರೆ ಬಲವಾದ ಗಾಳಿಯಿಂದಾಗಿ ಯೋಜನೆ ವಿಫಲಗೊಂಡಿತು. ಅವರು 2001 ರಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರು, ಆದರೆ ಶಾಂಘೈ ಅಧಿಕಾರಿಗಳು 9/11 ದಾಳಿಯ ಹಿನ್ನೆಲೆಯಲ್ಲಿ ಅವರಿಗೆ ಅನುಮತಿ ನಿರಾಕರಿಸಿದರು.

“ಅದು ಪ್ರಭಾವಶಾಲಿಯಾಗಿದೆ, ಏನು ಅದ್ಭುತ ಪ್ರದರ್ಶನ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ” ಸೃಜನಶೀಲತೆ ಅದರ ಉತ್ತುಂಗದಲ್ಲಿದೆ!” ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೈ ಗುವೊ-ಕಿಯಾಂಗ್ ಅವರು ತಮ್ಮ ಈ ಸೃಜಶೀಲ ಕಲಾಕೃತಿ ರಚಿಸಲು ಪಟಾಕಿ ಮತ್ತು ಗನ್‌ಪೌಡರ್ ಅನ್ನು ಬಳಸುವ ಸಮಕಾಲೀನ ಕಲಾವಿದ. ಅವರನ್ನು “ಸ್ಫೋಟಕ ಕಲಾವಿದ” ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಕೈ ಗುವೊ-ಕಿಯಾಂಗ್ ಅವರು 1957 ರಲ್ಲಿ ಫುಜಿಯಾನ್ ಪ್ರಾಂತ್ಯದ ಕ್ವಾನ್‌ಝೌ ನಗರದಲ್ಲಿ ಜನಿಸಿದರು ಮತ್ತು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement