ವೀಡಿಯೊ..| ಸ್ಲೋವಾಕಿಯಾ ಪ್ರಧಾನಿ ಮೇಲೆ ನಡೆದ ಗುಂಡಿನ ದಾಳಿಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ; ಶಂಕಿತ 71 ವರ್ಷ ವಯಸ್ಸಿನ ಬರಹಗಾರ

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ನಂಬಲಾಗಿದೆ. ಪ್ರಧಾನಿ ಫಿಕೊ, 59, ತಮ್ಮ ಮೇಲೆ ಹತ್ಯೆಯ ಯತ್ನ ನಡೆದಾಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅವರು ಬೆಂಬಲಿಗರನ್ನು ಸ್ವಾಗತಿಸುತ್ತಿದ್ದರು, ಚುನಾವಣೆಗೆ ವಾರಗಳ ಮೊದಲು ಅವರ ಮೇಲೆ ಹತ್ಯೆ ಯತ್ನದ ದಾಳಿ ನಡೆದಿದೆ. ಫಿಕೊ ಮೇಲೆ ವ್ಯಕ್ತಿಯು ಗುಂಡಿನ ದಾಳಿ ಮಾಡಿದ ಕ್ಷಣಗಳ ವೀಡಿಯೊಗಳು ಹೊರಹೊಮ್ಮಿವೆ.
ರಾಜಧಾನಿಯಿಂದ ಈಶಾನ್ಯಕ್ಕೆ ಸುಮಾರು 140 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಸಾಂಸ್ಕೃತಿಕ ಕೇಂದ್ರದ ಹೊರಗೆ ಅವರ ಮೇಲೆ ದಾಳಿಕೋರ ಐದು ಗುಂಡುಗಳನ್ನು ಹಾರಿಸಿದ್ದಾನೆ.

ಒಮ್ಮೆ ಕಲ್ಲಿದ್ದಲು ಗಣಿಗಾರಿಕೆಯ ಕೇಂದ್ರವಾಗಿದ್ದ ಪಟ್ಟಣದಲ್ಲಿ ತನ್ನ ಸರ್ಕಾರದ ಸಭೆಯಲ್ಲಿ ಭಾಗವಹಿಸುತ್ತಿದ್ದಾಗ ಫಿಕೋ ಮೇಲೆ ಬಂದೂಕುಧಾರಿ ಐದು ಬಾರಿ ಗುಂಡು ಹಾರಿಸಿದ್ದಾನೆ, ಆತ ಬಹಳ ಸಮೀಪದಿಂದಲೇ ಗುಂಡು ಹಾರಿಸುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಫಿಕೊ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಒಯ್ಯಲಾಯಿತು. ಬಿಟ್ಟು ಗಂಟೆಗಳ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಒಂದು ಬುಲೆಟ್ ಫಿಕೋನ ಹೊಟ್ಟೆಯ ಮೂಲಕ ಹಾದುಹೋಗಿದೆ ಮತ್ತು ಎರಡನೆಯದು ಎಲುಬುಗಳ ಸಂದಿಗೆ ತಗುಲಿದೆ.

ಫಿಕೊ ಶೂಟರ್ ಯಾರು?
ಸ್ಲೋವಾಕಿಯಾದ ಪ್ರಧಾನಿ ಮೇಲ ಗುಂಡಿನ ಮೇಲೆ ದಾಳಿ ಮಾಡಿದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಶಂಕಿತ ವ್ಯಕ್ತಿ 71 ವರ್ಷದ ಬರಹಗಾರ ಎಂದು ಆಂತರಿಕ ಸಚಿವರು ಬುಧವಾರ ಹೇಳಿದ್ದಾರೆ. “ನಾನು ಇದನ್ನು ದೃಢೀಕರಿಸಬಲ್ಲೆ ಎಂದು ನಾನು ಭಾವಿಸುತ್ತೇನೆ ಎಂದು ಆಂತರಿಕ ಸಚಿವ ಮಾಟಸ್ ಸುತಾಜ್ ಎಸ್ಟೋಕ್ ವರದಿಗಾರರಿಗೆ ತಿಳಿಸಿದ್ದಾರೆ.
ಹ್ಯಾಂಡ್ಲೋವಾದಲ್ಲಿ ನಡೆದ ಸರ್ಕಾರದ ಸಭೆಯ ನಂತರ ಫಿಕೊಗೆ ಹಲವಾರು ಬಾರಿ ಗುಂಡು ಹಾರಿಸಿದ ನಂತರ ಶಂಕಿತನನ್ನು ನೆಲದ ಮೇಲೆ ಬೀಳಿಸಿ ಕೈಕೋಳ ಹಾಕಿರುವುದು ಕಂಡುಬಂದಿದೆ. ಶಂಕಿತ ವ್ಯಕ್ತಿ ದುಹಾ (DUHA) ಲಿಟರರಿ ಕ್ಲಬ್‌ನ ಸ್ಥಾಪಕ ಮತ್ತು ಲೆವಿಸ್ ಪಟ್ಟಣದವನು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅವರನ್ನು ಹೆಸರಿಸಿರುವ ವರದಿಗಳು, ಆತ ಮೂರು ಕವನ ಸಂಕಲನಗಳನ್ನು ಬರೆದಿದ್ದಾನೆ ಮತ್ತು ಸ್ಲೋವಾಕ್ ಬರಹಗಾರರ ಅಧಿಕೃತ ಸಂಘದ ಸದಸ್ಯನಾಗಿದ್ದಾನೆ ಎಂದು ಹೇಳಲಾಗಿದೆ. ಈ ವ್ಯಕ್ತಿ 2015 ರಿಂದ ಸದಸ್ಯನಾಗಿದ್ದಾನೆ ಎಂದು ಅಸೋಸಿಯೇಷನ್ ಫೇಸ್‌ಬುಕ್‌ನಲ್ಲಿ ದೃಢಪಡಿಸಿದೆ, ಶಂಕಿತ ಶೂಟರ್ ಎಂದು ಆತನ ಗುರುತನ್ನು ದೃಢಪಡಿಸಿದರೆ “ಈ ಹೇಯ ವ್ಯಕ್ತಿಯ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ” ಎಂದು ಅದು ಹೇಳಿದೆ.
ಫಿಕೊ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಡವಾಗಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement