3 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ ; ಉಸಿರುಗಟ್ಟಿ ಪುಟ್ಟ ಬಾಲಕಿ ಸಾವು

ಕೋಟ : ತಂದೆ-ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನಲ್ಲಿ ಉಸಿರುಗಟ್ಟಿ ಸಾವಿಗೀಡಾದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ.
ಆಕೆಯ ಪೋಷಕರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಲಾಕ್ ಮಾಡಿದ ಕಾರಿನಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಘಟನೆ ಬುಧವಾರ ಸಂಜೆ ಸಂಭವಿಸಿದೆ ಮತ್ತು ಮೃತ ಮಗುವನ್ನು ಗೋರ್ವಿಕಾ ನಗರ ಎಂದು ಗುರುತಿಸಲಾಗಿದೆ.
ಮೃತ ಮಗುವಿನ ತಂದೆ ಪ್ರದೀಪ ನಗರ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಜೋರಾವರಪುರ ಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳಿದ್ದರು. ಕುಟುಂಬವು ಸ್ಥಳಕ್ಕೆ ತಲುಪುತ್ತಿದ್ದಂತೆ, ತಾಯಿ ಮತ್ತು ಅವರ ಹಿರಿಯ ಮಗಳು ಕಾರಿನಿಂದ ಹೊರಬಂದರು ಮತ್ತು ಪ್ರದೀಪ ವಾಹನವನ್ನು ಪಾರ್ಕ್‌ ಮಾಡಲು ಹೋದರು ಎಂದು ಖತೋಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬನ್ನಾ ಲಾಲ ತಿಳಿಸಿದ್ದಾರೆ.

ಗೋರ್ವಿಕಾ ತನ್ನ ತಾಯಿಯೊಂದಿಗೆ ಮದುವೆ ಸಮಾರಂಭ ನಡೆಯುವಲ್ಲಿ ಹೋಗಿದ್ದಾಳೆ ಎಂದು ಭಾವಿಸಿ, ಪ್ರದೀಪ ಅವರು ಕಾರನ್ನು ಲಾಕ್ ಮಾಡಿ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ, ಇಬ್ಬರೂ ಪೋಷಕರು ವಿವಿಧ ಜನರು ಜೊತೆ ಮಾತನಾಡುತ್ತ ಕಳೆದರು, ಆದರೆ ಅವರಿಗೆ ಮಗು ಗೋರ್ವಿಕಾ ಪರಿವೆಯೇ ಇರಲಿಲ್ಲ ಎಂದು ಎಸ್‌ಎಚ್‌ಒ ಬನ್ನಾ ಲಾಲ ಹೇಳಿದರು.
ಅವರನ್ನು ಭೇಟಿಯಾದ ಪರಿಚಯಸ್ಥರೊಬ್ಬರು ಗೋರ್ವಿಕಾ ಬಗ್ಗೆ ಕೇಳಿದಾಗ, ಅವರೊಗೆ ಆಕೆ ತಮ್ಮ ಜೊತೆಯಲ್ಲಿ ಇಲ್ಲದೆ ಇರುವುದು ಅರಿವಿಗೆ ಬಂದಿದೆ. ನಂತರಅವಳನ್ನು ಹುಡುಕಲು ಪ್ರಾರಂಭಿಸಿದರು. ನಂತರ ಕಾರಿನ ಹಿಂದಿನ ಸೀಟಿನಲ್ಲಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ, ನಂತರ ಅವಳನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಆಕೆ ತಲುಪುವ ಮೊದಲೇ ಸಾವಿಗೀಡಾಗಿದ್ದಾಳೆ ಎಂದು ಹೇಳಿದರು ಎಂದು ಲಾಲ ತಿಳಿಸಿದ್ದಾರೆ.
ಶವಪರೀಕ್ಷೆ ನಡೆಸಲು ಮತ್ತು ಪೊಲೀಸ್ ಪ್ರಕರಣ ದಾಖಲಿಸಲು ಪೋಷಕರು ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement