ಹೈದರಾಬಾದಿನ ಪ್ರವಾಸಿ ತಂಡವು ಕೇರಳದ ಕೊಟ್ಟಾಯಂ ಜಿಲ್ಲೆಯ ಕುರುಪಂಥರಾ ಪ್ರದೇಶದಲ್ಲಿ ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ದಾರಿ ಹುಡುಕಲು ಹೋಗಿ ಎಸ್ಯುವಿ ಕಾರನ್ನು ಹೊಳೆಗೆ ಹಾರಿಸಿದ ಘಟನೆ ನಡೆದಿರುವುದು ವರದಿಯಾಗಿದೆ. ಶನಿವಾರ ಬೆಳಗಿನ ಜಾವ ಮಹಿಳೆ ಸೇರಿದಂತೆ ನಾಲ್ವರು ಪ್ರವಾಸಿಗರು ಅಲಪ್ಪುಳಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಪ್ರವಾಸಿಗರಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಕಾರಿನೊಂದಿಗೆ ಮುಳುಗುತ್ತಿದ್ದ ಅವರನ್ನು ರಕ್ಷಿಸಿದ್ದಾರೆ. ಆದರೆ, ಕಾರು ಸಂಪೂರ್ಣವಾಗಿ ಹೊಳೆಯಲ್ಲಿ ಮುಳುಗಿದ್ದು, ಅದನ್ನು ಮೇಲೆತ್ತುವ ಪ್ರಯತ್ನ ನಡೆದಿದೆ.
ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆ ಸುರಿಯುತ್ತಿದ್ದು, ಪರಿಣಾಮ ಹೊಳೆ ತುಂಬಿ ಪ್ರವಾಸಿಗರು ಸಂಚರಿಸುತ್ತಿದ್ದ ರಸ್ತೆಯ ಮೇಲೆ ಹರಿದಿದೆ. ಚಾಲಕನು ಮಾರ್ಗವನ್ನು ನೋಡದೆ ಗೂಗಲ್ ನಕ್ಷೆಗಳನ್ನಷ್ಟೇ ಅನುಸರಿಸಿದ್ದಾನೆ. ಹೀಗಾಗಿ ಕಾರನ್ನು ನೇರವಾಗಿ ಕಾರನ್ನು ತುಂಬಿ ಹರಿಯುತ್ತಿದ್ದ ಹೊಳೆಯ ನೀರಿನೊಳಕ್ಕೆ ಒಯ್ದಿದ್ದಾನೆ. ನಂತರ ಪ್ರವಾಸಿಗರು ಕೂಗಿಕೊಂಡಾಗ ಧಾವಿಸಿದ ಸ್ಥಳೀಯ ನಿವಾಸಿಗಳು ಹಾಗೂ ಸಮೀಪದ ಪೊಲೀಸ್ ಗಸ್ತು ಘಟಕದವರು ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಕಳೆದ ವರ್ಷ, ಕೇರಳದಲ್ಲಿ ಗೂಗಲ್ ಮ್ಯಾಪ್ ನಿರ್ದೇಶನಗಳನ್ನು ಅನುಸರಿಸಿ ಹೋಗುತ್ತಿರುವಾಗ ತುಂಬಿ ಹರಿಯುತ್ತಿದ್ದ ನದಿಗೆ ಕಾರು ಬಿದ್ದ ಪರಿಣಾಮ ಇಬ್ಬರು ವೈದ್ಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.ಘಟನೆಯ ನಂತರ, ಕೇರಳ ಪೊಲೀಸರು ಮಳೆಗಾಲದಲ್ಲಿ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಎಚ್ಚರಿಕೆಯ ಮಾರ್ಗಸೂಚಿಗಳನ್ನು ನೀಡಿದ್ದರು. ಈ ವರ್ಷದ ಆರಂಭದಲ್ಲಿ ತಮಿಳುನಾಡಿನ ಗುಡಲೂರಿನಲ್ಲಿ ಗೂಗಲ್ ಮ್ಯಾಪ್ನಿಂದ ದಾರಿತಪ್ಪಿದ ನಂತರ ವಾಹನವೊಂದು ಮೆಟ್ಟಿಲುಗಳ ಮೇಲೆ ಸಿಲುಕಿಕೊಂಡಿತ್ತು. ಗೆಳೆಯರ ಗುಂಪೊಂದು ಕರ್ನಾಟಕಕ್ಕೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ