ಮನೆಯ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ : ನಂತರ ತಾನೂ ಆತ್ಮಹತ್ಯೆ…

ಛಿಂದವಾರಾ :  ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛಿಂದವಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಚಿಂದ್ವಾರಾ ಜಿಲ್ಲಾ ಕೇಂದ್ರದಿಂದ 145 ಕಿಮೀ ದೂರದಲ್ಲಿರುವ ಬೋಡಾಲ್ ಕಚ್ಚರ್ ಎಂಬ ಬುಡಕಟ್ಟು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಹತ್ಯೆ ನಡೆದಿದೆ. ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳಗಿನ ಜಾವ 2:30ಕ್ಕೆ ಮನೆಯವರು ಮಲಗಿದ್ದಾಗ ದಿನೇಶ ಗೊಂಡ ಅಲಿಯಾಸ್ ಭೂರಾ ಎಂಬಾತ ಈ ಹತ್ಯೆಗಳನ್ನು ಮಾಡಿದ್ದಾನೆ.
ಆತ ತನ್ನ ತಾಯಿ ಸಿಯಾಬಾಯಿ (55), ಪತ್ನಿ ವರ್ಷಾ (23), ಸಹೋದರ ಶ್ರವಣಕುಮಾರ (35) ಮತ್ತು ಶ್ರವಣ ಅವರ ಪತ್ನಿ ಬಾರತೋಬಾಯಿ (30), ತನ್ನ 16 ವರ್ಷದ ಸಹೋದರಿ ಪಾರ್ವತಿ, ಐದು ವರ್ಷದ ಸೋದರಳಿಯ ಕೃಷ್ಣ ಮತ್ತು ಸೊಸೆಯಂದಿರಾದ ಸೇವುಂಟಿ (4) ಹಾಗೂ ದೀಪಾ ಎಂಬವರ ಮೇಲೆ ಹಲ್ಲೆ ಕೊಡಲಿಯಿಂದ ನಡೆಸಿದ್ದಾನೆ. ಈ ವೇಳೆ ಎಂಟು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಪ್ರಮುಖ ಸುದ್ದಿ :-   ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್....: 9 ಮಂದಿ 'ಪಾಕಿಸ್ತಾನ ಗೂಢಚಾರರ' ಬಂಧನ

10 ವರ್ಷದ ಪಕ್ಕದ ಮನೆಯ ಬಾಲಕನ ಮೇಲೂ ಆತ ದಾಳಿ ಮಾಡಿದ್ದಾನೆ. ಆದರೆ ಅಜ್ಜಿ ಬಾಲಕನನ್ನು ರಕ್ಷಿಸಿದ್ದಾಳೆ. ಸಂತ್ರಸ್ತರ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಮನೆಗೆ ನುಗ್ಗಿದ್ದಾರೆ. ಅವರನ್ನು ನೋಡಿದ ದಿನೇಶ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ದಾಳಿಯ ಹಿಂದಿನ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸ್ಥಳೀಯರ ಪ್ರಕಾರ, ಮದುವೆಯ ನಂತರ ದಿನೇಶ ಅವರ ಸ್ಥಿತಿ ಹದಗೆಟ್ಟಿತ್ತು. “ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಅವನು ತನ್ನ ಹೆಂಡತಿ, ಸಹೋದರ, ಅತ್ತಿಗೆ ಮತ್ತು ಅವನ ಕುಟುಂಬದ ಇತರ ಸದಸ್ಯರನ್ನು (ಒಟ್ಟು ಎಂಟು ಜನರು) ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ. ನಾವು ವೈದ್ಯರನ್ನು ಸಂಪರ್ಕಿಸಿದ ಬಳಿಕ ಈ ರೋಗದಿಂದ ಬಳಲುತ್ತಿರುವ ವ್ಯಕ್ತಿ ಜನರ ಮೇಲೆ ದಾಳಿ ಮಾಡಬಹುದು. ನಂತರ ಆತನಿಗೆ ತಾನು ಮಾಡಿದ್ದು ದೊಡ್ಡ ತಪ್ಪು ಎಂದು ಗೊತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬುದು ಗೊತ್ತಾಯಿತು. ಆದ್ದರಿಂದ ಈ ಪ್ರಕರಣದಲ್ಲಿಯೂ ಇದು ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ತೋರುತ್ತದೆ, ಆರೋಪಿಗೆ ನಂತರ ತನ್ನ ತಪ್ಪಿನ ಅರಿವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಜಬಲ್‌ಪುರ ವಲಯದ ಪೊಲೀಸ್ ಮಹಾನಿರೀಕ್ಷಕ ಅನಿಲ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮೋಹನ ಯಾದವ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement