ಭಾರತವು ತನ್ನ ಮೊದಲ 2024ರ ಐಸಿಸಿ ಪುರುಷರ T20 ವಿಶ್ವಕಪ್ (T20 World Cup 2024) ಆರಂಭಕ್ಕೆ ಒಂದು ದಿನ ಮಾತ್ರ ಉಳಿದಿದ್ದು, ಜೂನ್ 2ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ.
2024ರ ಜೂನ್ 2ರ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡದ ವಿಶ್ವಕಪ್ ಅಭಿಯಾನ ಜೂನ್ 5 ರಂದು ಆರಂಭವಾಗಲಿದ್ದು, ಅದು ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ನ್ಯೂಯಾರ್ಕ್‌ನಲ್ಲಿ ಎದುರಿಸಲಿದೆ.
ಈ ಬಾರಿಯ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿವೆ ಲೀಗ್ ಹಂತದ ಅನೇಕ ಪಂದ್ಯಗಳಿಗೆ ಅಮೆರಿಕ ಆತಿಥ್ಯ ವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ. ಒಟ್ಟು 20 ತಂಡಗಳು ಪಾಲ್ಗೊಳ್ಳುತ್ತಿದ್ದು ಅದರಲ್ಲಿ 10 ತಂಡಗಳು ಟಿ 20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಆಡಲಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ. ಹಾಗೂ ಹೈವೋಲ್ಟೇಜ್ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನದ ಪಂದ್ಯ ಜೂನ್ 9ರಂದು ನಡೆಯಲಿದೆ.
ಗುಂಪಿನ ಹಂತದ ಪಂದ್ಯಗಳಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಅವರು T20 ವಿಶ್ವಕಪ್‌ನ ಸೂಪರ್ 8 ಹಂತಕ್ಕೆ ಮುನ್ನಡೆಯುತ್ತಾರೆ. ಅಮೆರಿಕದ ಮೂರು ಸ್ಥಳಗಳಲ್ಲಿ ಮತ್ತು ಕೆರಿಬಿಯನ್‌ನ ಆರು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದೆ, ಫೈನಲ್ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯುತ್ತದೆ. ಭಾರತವು ಗುಂಪು-ಹಂತದಲ್ಲಿ ಐರ್ಲೆಂಡ್ – ಜೂನ್ 5, ಪಾಕಿಸ್ತಾನ – ಜೂನ್ 9, ಅಮೆರಿಕ – ಜೂನ್ 12 ಹಾಗೂ ಕೆನಡಾ – ಜೂನ್ 15ರಂದು ಎದುರಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
ದಿನಾಂಕ ಪಂದ್ಯಗಳು ಸ್ಥಳ
ಜೂನ್ 2 ಯುಎಸ್ಎ vs ಕೆನಡಾ ಡಲ್ಲಾಸ್
ಜೂನ್ 2 ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ ಗಯಾನಾ
ಜೂನ್ 2 ನಮೀಬಿಯಾ vs ಒಮಾನ್ ಬಾರ್ಬಡೋಸ್
ಜೂನ್ 3 ಶ್ರೀಲಂಕಾ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 4 ಅಫ್ಘಾನಿಸ್ತಾನ್ vs ಉಗಾಂಡ ಗಯಾನಾ
ಜೂನ್ 4 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 5 ಭಾರತ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 5 ಪಪುವಾ ನ್ಯೂಗಿನಿಯಾ vs ಉಗಾಂಡ ಗಯಾನಾ
ಜೂನ್ 5 ಆಸ್ಟ್ರೇಲಿಯಾ vs ಒಮಾನ್ ಬಾರ್ಬಡೋಸ್
ಜೂನ್ 6 ಯುಎಸ್ಎ vs ಪಾಕಿಸ್ತಾನ ಡಲ್ಲಾಸ್
ಜೂನ್ 6 ನಮೀಬಿಯಾ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 7 ಕೆನಡಾ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 7 ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ ಗಯಾನಾ
ಜೂನ್ 7 ಶ್ರೀಲಂಕಾ vs ಬಾಂಗ್ಲಾದೇಶ್ ಡಲ್ಲಾಸ್
ಜೂನ್ 8 ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 8 ಆಸ್ಟ್ರೇಲಿಯಾ vs ಇಂಗ್ಲೆಂಡ್ ಬಾರ್ಬಡೋಸ್
ಜೂನ್ 8 ವೆಸ್ಟ್ ಇಂಡೀಸ್ vs ಉಗಾಂಡ ಗಯಾನಾ
ಜೂನ್ 9 ಭಾರತ vs ಪಾಕಿಸ್ತಾನ್ ನ್ಯೂಯಾರ್ಕ್
ಜೂನ್ 9 ಒಮಾನ್ vs ಸ್ಕಾಟ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10 ಸೌತ್ ಆಫ್ರಿಕಾ vs ಬಾಂಗ್ಲಾದೇಶ ನ್ಯೂಯಾರ್ಕ್
ಜೂನ್ 11 ಪಾಕಿಸ್ತಾನ vs ಕೆನಡಾ ನ್ಯೂಯಾರ್ಕ್
ಜೂನ್ 11 ಶ್ರೀಲಂಕಾ vs ನೇಪಾಳ ಲಾಡರ್ಹಿಲ್
ಜೂನ್ 11 ಆಸ್ಟ್ರೇಲಿಯಾ vs ನಮೀಬಿಯಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12 ಯುಎಸ್ಎ vs ಭಾರತ ನ್ಯೂಯಾರ್ಕ್
ಜೂನ್ 12 ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13 ಇಂಗ್ಲೆಂಡ್ vs ಒಮಾನ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13 ಬಾಂಗ್ಲಾದೇಶ vs ನೆದರ್ಲೆಂಡ್ಸ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13 ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14 ಯುಎಸ್ಎ vs ಐರ್ಲೆಂಡ್ ಲಾಡರ್ಹಿಲ್
ಜೂನ್ 14 ಸೌತ್ ಆಫ್ರಿಕಾ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14 ನ್ಯೂಝಿಲೆಂಡ್ vs ಉಗಾಂಡ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15 ಭಾರತ vs ಕೆನಡಾ ಲಾಡರ್ಹಿಲ್
ಜೂನ್ 15 ನಮೀಬಿಯಾ vs ಇಂಗ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15 ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ ಸೇಂಟ್ ಲೂಸಿಯಾ
ಜೂನ್ 16 ಪಾಕಿಸ್ತಾನ್ vs ಐರ್ಲೆಂಡ್ ಲಾಡರ್ಹಿಲ್
ಜೂನ್ 16 ಬಾಂಗ್ಲಾದೇಶ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16 ಶ್ರೀಲಂಕಾ vs ನೆದರ್ಲ್ಯಾಂಡ್ಸ್ ಸೇಂಟ್ ಲೂಸಿಯಾ
ಜೂನ್ 17 ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17 ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ ಸೇಂಟ್ ಲೂಸಿಯಾ
ಸೂಪರ್- 8 ಪಂದ್ಯಗಳ ವೇಳಾಪಟ್ಟಿ:
ದಿನಾಂಕ ಪಂದ್ಯಗಳು ಸ್ಥಳ
ಜೂನ್ 19 A2 vs D1 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19 B1 vs C2 ಸೇಂಟ್ ಲೂಸಿಯಾ
ಜೂನ್ 20 C1 vs A1 ಬಾರ್ಬಡೋಸ್
ಜೂನ್ 20 B2 vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21 B1 vs D1 ಸೇಂಟ್ ಲೂಸಿಯಾ
ಜೂನ್ 21 A2 vs C2 ಬಾರ್ಬಡೋಸ್
ಜೂನ್ 22 A1 vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22 C1 vs B2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23 A2 vs B1 ಬಾರ್ಬಡೋಸ್
ಜೂನ್ 23 C2 vs D1 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24 B2 vs A1 ಸೇಂಟ್ ಲೂಸಿಯಾ
ಜೂನ್ 24 C1 vs D2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಸೆಮಿಫೈನಲ್, ಫೈನಲ್ ಪಂದ್ಯಗಳ ವೇಳಾಪಟ್ಟಿ:
ಜೂನ್ 26 ಸೆಮಿಫೈನಲ್- 1 ಗಯಾನಾ
ಜೂನ್ 27 ಸೆಮಿಫೈನಲ್- 2 ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 29 ಫೈನಲ್ ಪಂದ್ಯ ಬಾರ್ಬಡೋಸ್
ನಿಮ್ಮ ಕಾಮೆಂಟ್ ಬರೆಯಿರಿ