ಎನ್​ ಡಿ ಎ ನಾಯಕರಾಗಿ ಪ್ರಧಾನಿ ಮೋದಿ ಸರ್ವಾನುಮತದಿಂದ ಆಯ್ಕೆ : ನಾಯ್ಡು, ನಿತೀಶ ಸೇರಿ ಎನ್‌ಡಿಎ ಪಕ್ಷಗಳ ನಾಯಕರಿಂದ ಲಿಖಿತ ಬೆಂಬಲ ಪತ್ರ

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು ಸೇರಿದಂತೆ ಮಿತ್ರಪಕ್ಷಗಳು ಅವರ ನಾಯಕತ್ವಕ್ಕೆ ತಮ್ಮ ಲಿಖಿತ ಬೆಂಬಲದ ಪತ್ರ ನೀಡಿವೆ. ಹೊಸ ಸರ್ಕಾರ ರಚನೆಗೆ ಜೂನ್​ 7ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದೆ. ಶನಿವಾರ (ಜೂನ್​ 8ರಂದು) ಹೊಸ ಸರ್ಕಾರ ರಚನೆಯಾಗಿ ನರೇಂದ್ರ ಮೋದಿ ಅವರು ಐತಿಹಾಸಿಕ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಮೋದಿ ನಿವಾಸದಲ್ಲಿಂದು ಸಂಜೆ ಮೈತ್ರಿಕೂಟದ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ನಾಯಕರಾದ ಅಮಿತ್​ ಶಾ, ರಾಜನಾಥ ಸಿಂಗ್​ ಹಾಗೂ ಜೆಡಿಯು ನಾಯಕ ನಿತೀಶಕುಮಾರ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಏಕನಾಥ ಶಿಂಧೆ, ಜೆಡಿಎಸ್​ ನಾಯಕ ಹೆಚ್​.ಡಿ.ಕುಮಾರಸ್ವಾಮಿ, ಜನಸೇನಾ ಪಕ್ಷದ ನಾಯಕ ಪವನ ಕಲ್ಯಾಣ, ಲೋಕ ಜನಶಕ್ತಿ ಪಕ್ಷದ (ರಾಮವಿಲಾಸ) ನಾಯಕ ಚಿರಾಗ ಪಾಸ್ವಾನ್, ಎನ್​ಸಿಪಿ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.. ಈ ಸಭೆಯಲ್ಲಿ ಎನ್​ಡಿಎ ಮೈತ್ರಿಕೂಟದ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಸೇರಿದಂತೆ

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಒಗ್ಗಟ್ಟಿನಿಂದ ಹೋರಾಡಿ ಗೆಲುವು ಸಾಧಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ನಾವೆಲ್ಲ ಎನ್‌ಡಿಎ ನಾಯಕರು ನರೇಂದ್ರ ಮೋದಿ ಅವರನ್ನು ನಮ್ಮ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡುತ್ತೇವೆ” ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ನರೇಂದ್ರ ಮೋದಿ ಅವರ “ನಾಯಕತ್ವ” ಮತ್ತು “ನಮ್ಮ ರಾಷ್ಟ್ರವು ಅವರ ಅಡಿಯಲ್ಲಿ ಅಭಿವೃದ್ಧಿಯಲ್ಲಿ ʼದಾಪುಗಾಲುʼ ಇಟ್ಟಿದ್ದಕ್ಕಾಗಿ ಅವರನ್ನು ಅಭಿನಂದಿಸಲಾಯಿತು. ಎನ್‌ಡಿಎ ಪಾಲುದಾರರು ಮೋದಿಯವರು ‘ವಿಕಸಿತ ಭಾರತ’ಕ್ಕಾಗಿ ದೂರದೃಷ್ಟಿಯನ್ನು ಹೊಂದಿದ್ದಾರೆ. ವಿಶ್ವದಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸುವಲ್ಲಿ ಅವರ ಪಾತ್ರ ಅಭಿನಂದನೀಯ ಎಂದು ಎನ್‌ಡಿಎ ನಾಯಕರು ಶ್ಲಾಘಿಸಿದರು.
ಮಂಗಳವಾರ ಪ್ರಕಟವಾದ ಲೋಕಸಭೆ ಚುನಾವಣೆಯಲ್ಲಿ 293 ಸ್ಥಾನಗಳಲ್ಲಿ ಗೆಲುವು ಮೂಲಕ ಎನ್​ಡಿಎ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತ ಪಡೆದಿದೆ. ಈ ಮೂಲಕ ಜವಾಹರಲಾಲ ನೆಹರು ನಂತರ ಮೊದಲ ಬಾರಿಗೆ ಸತತವಾಗಿ ಮೂರನೇ ಅವಧಿಗೆ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಎನ್​ಡಿಎ ಸಜ್ಜಾಗಿದೆ. ಜೂನ್​ 8ರಂದು ಪ್ರಧಾನಿ ಹಾಗೂ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement